ರಸ್ತೆಗಳ ಕಾಮಗಾರಿಗೆ ಆಗ್ರಹಿಸಿ ನಗರಸಭಾ ಸದಸ್ಯರ ಪ್ರತಿಭಟನೆ
ಕೋಲಾರ,ಮೇ,೨೫- ಕೋಲಾರ ನಗರದಲ್ಲಿನ ರಸ್ತೆಗಳ ಅಭಿವೃದ್ದಿಗೆ ೧೭ ಕೋಟಿ ರೂ ಕಾಮಗಾರಿಯನ್ನು ಎ.ವಿ.ಜಿ. ಲಕ್ಷ್ಮೀನಾರಾಯಣ ಎಂಬುವರಿಗೆ ಒಂದೂವರೆ ವರ್ಷದ ಹಿಂದೆ ನೀಡಲಾಗಿದೆ. ಅದರೆ ಈವರೆಗೆ ೬ ಕೋಟಿ ರೂ ಕಾಮಗಾರಿಗಳನ್ನು ಸಹ ಮಾಡದೆ ವಿಳಂಭ ಮಾಡುತ್ತಿರುವ ಹಿನ್ನಲೆಯಲ್ಲಿ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್‌ಗೆ ಹಾಕಿ ಕಾಮಗಾರಿಗಳ ಉಸ್ತುವಾರಿ ವಹಿಸಿರುವ ಯೋಜನಾ ನಿರ್ದೇಶಕರ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಅವರ ನಿರ್ಲಕ್ಷತೆ ಧೋರಣೆಯ ವಿರುದ್ದ ಅಮಾನತ್ತು ಪಡೆಸಿ ಅಥವಾ ಎತ್ತಂಗಡಿ ಮಾಡ ಬೇಕೆಂದು ಒತ್ತಾಯಿಸಿ ನಗರಸಭಾ ಸದಸ್ಯರು ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿದರು,
ನಗರ ಸಭೆಯ ಅವರಣದಲ್ಲಿ ಮೆಟ್ಟಿಲುಗಳ ಮೇಲೆ ನಗರಸಭಾ ಸದಸ್ಯರು ಪ್ರತಿಭಟಿಸಿ ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲವಾಗಿದ್ದು ಇದಕ್ಕೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದಾರೆ. ಅವರಿಗೆ ನಗರದಲ್ಲಿನ ರಸ್ತೆಗಳು ಹಾಳಾಗಿ ಹೋಗಿದೆ. ವಾಹನಗಳು ಸಂಚರಿಸಲು ಅಗುತ್ತಿಲ್ಲ. ಈ ಹಿಂದೆ ಅಮೃತಸಿಟಿ ಯೋಜನೆಯಲ್ಲಿ ರಸ್ತೆಗಳನ್ನು ಅವೈಜ್ಞಾನಿಕವಾಗಿ ಅಗೆದು ಹಾಳು ಮಾಡಲಾಗಿತ್ತು. ಅವುಗಳೆಲ್ಲ ದುರಸ್ಥಿ ಮಾಡಿ ಹೊಸದಾಗಿ ಡಾಂಬರೀಕರಣ ಹಾಗೂ ಸಿಮೆಂಟ್ ರಸ್ತೆಗಳನ್ನು ಮಾಡಲು ಕ್ರಿಯಾ ಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿತ್ತು, ಗುತ್ತಿಗೆದಾರ ಲಕ್ಷ್ಮೀ ನಾರಾಯಣ ಎಂಬುವರಿಗೆ ೧೭ ಕೋಟಿ ಕಾಮಗಾರಿಗಳನ್ನು ನೀಡಲಾಗಿತ್ತು ಎಂದರು.
ಅದರೆ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸುತ್ತಿಲ್ಲ. ಮಳೆಗಾಲ ಪ್ರಾರಂಭವಾಗುತ್ತಿದೆ ಅದರೂ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳುತ್ತಿಲ್ಲ. ಈಗಾಗಲೇ ನಗರಸಭೆ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗಳ ಬಳಿ ಎಲ್ಲಾ ಸದಸ್ಯರು ಈವರೆಗೆ ಹಲವಾರು ಭಾರಿ ಚರ್ಚೆಗಳು ಹಾಗೂ ಸಭೆಗಳು ಮಾಡಿದ್ದರೂ ಪ್ರಯೋಜನವಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಗೆ ಯಾವೂದೇ ಸೂಚನೆ ನೀಡದೆ ಕಾಮಗಾರಿಯನ್ನು ಪೂರ್ಣಗೊಳಿಸದೆ ವಿಳಂಭ ಧೋರಣೆಯ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ನಾವು ಛೇ ಮಾರೇಗೆ ತುತ್ತಾಗುತ್ತಿದ್ದೇವೆ. ವಾರ್ಡಿನ ಜನತೆಗೆ ಮುಖ ತೋರಿಸ ತಲೆ ತಪ್ಪಿಸಿ ಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು,
ನಮ್ಮವರೇ ಜನಪ್ರತಿನಿಧಿಗಳು ಅಗಿದ್ದಾರೆ. ಹಾಗಾಂತ ನಾವು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಪ್ರಶ್ನಿಸ ಬಾರದು ಎಂದು ಏನಿಲ್ಲ. ಸರ್ಕಾರವು ಅನುದಾನ ಬಿಡುಗಡೆ ಮಾಡಿದೆ ಅದರೆ ಅದನ್ನು ನಿಗಧಿತ ಅವಧಿಯಲ್ಲಿ ಸದ್ಬಳಿಸಿ ಕೊಳ್ಳದೆ ಅಧಿಕಾರಿಗಳ ನಿರ್ಲಕ್ಷಿಸುತ್ತಿದ್ದಾರೆ. ನಿಗಧಿತ ಅವಧಿಯಲ್ಲಿ ಗುತ್ತಿಗೆದಾರನಿಂದ ಕೆಲಸ ಪೂರ್ಣಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅದರೆ ಅಧಿಕಾರಿಗಳು ಗುತ್ತಿಗೆದಾರರಿಂದ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಇದನ್ನು ಪ್ರಶ್ನಿಸುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತದ ಗಮನ ಸೆಳೆಯಲು ನಗರಸಭಾ ಸದಸ್ಯರು ಪ್ರತಿಭಟಿಸುವ ಮೂಲಕ ಗಮನ ಸೆಳೆಯ ಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು,
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಅಂಬರೀಷ್, ಪ್ರಸಾದ್ ಬಾಬು, ನಾರಾಯಣಮ್ಮ,ಶಂಕರ್, ಮುಂತಾದವರು ಭಾಗವಹಿಸಿದ್ದರು.