ಜಾತ್ರಾಮಹೋತ್ಸವಕ್ಕೆ ಚಾಲನೆ

ಹುಬ್ಬಳ್ಳಿ, ಮೇ 25: ನಗರದ ಹಳೇಹುಬ್ಬಳ್ಳಿ ಅರವಿಂದನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ಆಗಿಹುಣ್ಣಿಮೆಯ ಮರುದಿವಸ ಮುತ್ತೈದೆಯರೊಂದಿಗೆ ಶ್ರೀ ದೇವಿಯವರಿಗೆ ಕಂಕಣಧಾರಣೆ ಮಾಡುವುದರೊಂದಿಗೆ ಪ್ರಸಕ್ತ ಸಾಲಿನ ಜಾತ್ರಾಮಹೋತ್ಸವಕ್ಕೆ ಪೂ. ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಲಲಿತಾ ಸಹಸ್ರ ನಾಮಾವಳಿ ಪಠಣೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಮಹಾಮಂಗಳಾರತಿ ಮಾಡಿದ ನಂತರ ಪ್ರಸಾದ ವಿತರಿಸಲಾಯಿತು. ದಿ. 3 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹುಬ್ಬಳ್ಳಿಯ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಮ್.ಎಸ್.ಬಾಣದ, ಹಿರಿಯ ನ್ಯಾಯವಾದಿಗಳಾದ ಶ್ರೀಮತಿ ಆಶಾ ಆರ್. ನಟರಾಜ್, ರಾಜೇಶ್ವರಿ ಬಗಲಿ, ಅನಿತಾ ಬಾಣದ, ಅನೂಪಮಾ ಅಕ್ಕೂರ, ಸವಿತಾ ಮಾಸಣಗಿ ಬಿಜೆಪಿ ಮುಖಂಡ ಅಶೋಕ ವಾಲ್ಮೀಕಿ, ವಿಠ್ಠಲ ಬಗಲಿ, ನಾಗರಾಜ ಕತ್ರಿಮಲ್, ವಿರುಪಾಕ್ಷಿ ಚಲವಾದಿ, ಪ್ರಕಾಶ ಅರಗಂಜಿ, ಗುರು ಕ್ವಾಟಿ, ರಾಜು ತಾಂಬೆ, ರಘಾವೇಂದ್ರ ಅರಳಿಕಟ್ಟಿ, ಹನಮಂತಪ್ಪ ಕಡಕೋಳ, ವೆಂಕಟೇಶ ರತನ, ಬಸಣ್ಣ ವ್ಮರಿಯಪ್ಪನವರ, ಪರಶುರಾಮ ಭೋಜಗಾರ, ಮಲ್ಲು ಅನಂತಪುರ, ಪರಶುರಾಮ ಸುಳ್ಳದ, ಶ್ರೀಮತಿ ಶೋಭಾ ತಾಂಬೆ, ಪದ್ಮಾ ದಿವಟೆ, ಲತಾ ಹಳ್ಳಿಕೇರಿ, ಲೀಲಾವತಿ ಪೋಸಾ, ಶೈಲಾ ಹಳ್ಳಿಕೇರಿ, ಶಾಂತಾ ಮಣಿದವರ, ಲಕ್ಷ್ಮೀ ಬಾರಕೇರ, ರೇಖಾ ಸುಳ್ಳದ, ದೇವಸ್ಥಾನದ ಪ್ರಧಾನ ಅರ್ಚಕರಾದ ರವಿಕುಮಾರ ಮಡ್ಡಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.