ಕಾನೂನು ಪರಿಪಾಲನೆಗೆ ಮನವಿ
ಲಕ್ಷ್ಮೇಶ್ವರ,ಮೇ.25:ಅಂತರ ಧರ್ಮಿಯರ ವಿವಾಹ ನೋಂದಣಿ ಸಮಯದಲ್ಲಿ ಕಾನೂನು ಪರಿಪಾಲನೆ ಮಾಡಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆಯ ತಾಲೂಕ ಘಟಕದ ವತಿಯಿಂದ ಉಪ ನೊಂದಣಿ ಕಾರ್ಯಾಲಯದ ಉಪನೊಂದಣಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ತಾಲೂಕ ಸಂಚಾಲಕ ಈರಣ್ಣ ಪೂಜಾರ ಮತ್ತು ಬಸವರಾಜ್ ಚಕ್ರಸಾಲಿ ಮಾತನಾಡಿ ಅಂತರ ಧರ್ಮಿಯ ವಿವಾಹನೊಂದಣಿ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ ಇರುವುದರಿಂದ ಸಮಾಜದಲ್ಲಿ ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಆಗುತ್ತಿದ್ದು ಲವ್ ಜಿಹಾದ್ ದಂತಹ ಪ್ರಕರಣಗಳಿಗೆ ಕಾರಣವಾಗುತ್ತಿದೆ ಆದ್ದರಿಂದ ಅಧಿಕಾರಿಗಳು ಯಾವುದೇ ಆಸೆ ಆಮೀಷಗಳಿಗೆ ಬಲಿಯಾಗದೆ ಸೂಕ್ತ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿದ ಉಪ ನೊಂದಣಿ ಅಧಿಕಾರಿ ಜಲ ರೆಡ್ಡಿ ಅವರು ಈಗ ವಿವಾಹ ನೊಂದಣಿ ಆನ್ಲೈನ್ ಮುಖಾಂತರ ಇರುವುದರಿಂದ ಮತ್ತು ಕಚೇರಿಗಳಿಗೆ ನೇರವಾಗಿ ಬಂದರೆ ಸೂಕ್ತ ದಾಖಲೆ ಪರಿಶೀಲಿಸಿ, ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನವೀನ್ ಬೆಳ್ಳಟ್ಟಿ ಪ್ರಾಣೇಶ್ ವ್ಯಾಪಾರಿ ರಾಘು ಪುರೋಹಿತ್ ಮಂಜುನಾಥ್ ಕೊಡಳ್ಳಿ ಅರುಣಗೋಡಿ ಕಿರಣಿ ಚಿಲ್ಲೂರು ಮಠ ಅಮಿತ್ ಗುಡಿಗೇರಿ ಹರೀಶ್ ಕಟ್ಟಿಮನಿ ಸಾಗರ್ ಅಳ್ಳಳ್ಳಿ ಆದೇಶ ಸವಣೂರು ಚಿನ್ನು ಹಾಳದೂಟದ ವಿನಾಯಕ್ ಉಮಚ್ಗಿ ಪ್ರವೀಣ ಕುಂಬಾರ ಸೇರಿದಂತೆ ಅನೇಕರು ಇದ್ದರು.