ಗುಣಮಟ್ಟದ ಮೇವು ವಿತರಣೆಗೆ ಸೂಚನೆ
ಮಧುಗಿರಿ, ಮೇ ೨೫- ರೈತರಿಗೆ ಉತ್ತಮ ಗುಣಮಟ್ಟದ ಮೇವು ವಿತರಿಸುವಂತೆ ತಹಶೀಲ್ದಾರ್ ಸಿಬ್ಗತ್ ಉಲ್ಲಾ ತಿಳಿಸಿದರು.
ತಾಲ್ಲೂಕಿನ ಪುರವಾರ ಹೋಬಳಿ ಹಂದ್ರಾಳು ಗ್ರಾಮದ ರಂಗನಾಥಸ್ವಾಮಿ ಸ್ಥಾನದಲ್ಲಿ ನಾಲ್ಕನೇ ಮೇವು ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು.
ರೈತರೊಂದಿಗೆ ಮೇವು ಬ್ಯಾಂಕಿನ ಬಗ್ಗೆ ಚರ್ಚಿಸಿ ಜಾನುವಾರುಗಳಿಗೆ ಮೇವಿನ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೇವು ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದನಗೌಡ ಮಾತನಾಡಿ, ಇದುವರೆವಿಗು ೫ ಟನ್ ಮೇವು ಬಂದಿದ್ದು ಇದುವರೆಗೂ ನೂರು ಮಂದಿಗೆ ಇಲಾಖೆಯ ಗುರುತಿನ ಚೀಟಿ ವಿತರಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗುರುತಿನ ಕಾರ್ಡ್ ವಿತರಿಸಿ ಫಲಾನುಭವಿಗಳಿಗೆ ಹಸು ಮತ್ತು ಎಮ್ಮೆಗಳಿಗೆ ಸಾಕಾಗುವಷ್ಟು ಮೇವು ವಿಚಾರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಜಯಲಕ್ಷ್ಮಮ್ಮ, ಕಂದಾಯ ಅಧಿಕಾರಿ ಶ್ರೀಧರ್, ಬಾಲ್ಯ ಪಶು ಆಸ್ಪತ್ರೆಯ ಡಾ. ನವೀನ್ ಮತ್ತಿತರರು ಉಪಸ್ಥಿತರಿದ್ದರು.