ಪರಿಹಾರ ಹಣ ಸಾಲದ ಖಾತೆಗೆ ಜಮೆ ಬೇಡ : ಚಂದ್ರಣ್ಣ
ಹುಳಿಯಾರು, ಮೇ ೨೫- ಸರ್ಕಾರದಿಂದ ಬರುವ ಬೆಳೆ ಹಾನಿ ಪರಿಹಾರದ ಮೊತ್ತವನ್ನು ರೈತರ ಸಾಲದ ಖಾತೆಗೆ ಮುರಿದುಕೊಳ್ಳದೆ ಅವರ ಖಾತೆಗೆ ಹಾಕಬೇಕು ಎಂದು ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಮನವಿ ಮಾಡಿದರು.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭೀಕರ ಬರಗಾಲಕ್ಕೆ ತುತ್ತಾಗಿರುವ ರೈತರು ಆರ್ಥಿಕವಾಗಿ ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರ ಬೆಳೆ ಹಾನಿ ಪರಿಹಾರವನ್ನು ನೀಡುತ್ತಿದೆ. ಇಂತಹ ಕಷ್ಟಕಾಲದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಂಡರೆ ರೈತರಿಗೆ ಬದುಕು ಸಾಗಿಸಲು ದುಸ್ತರವಾಗುತ್ತಿದೆ ಎಂದು ತಿಳಿಸಿದರು.
ಅನ್ನಭಾಗ್ಯ, ಗೃಹಲಕ್ಷ್ಮಿ, ಪಿಎಂ ಕಿಸಾನ್, ನರೇಗಾ ಕೂಲಿ ಹಣ ವೃದ್ಧಾಪ್ಯ, ಕೃಷಿಹೊಂಡದ ಸಬ್ಸಿಡಿ, ಸಿಲಿಂಡರ್ ಸಬ್ಸಿಡಿ ಹೀಗೆ ವಿವಿಧ ಯೋಜನೆಗಳಿಂದ ಗ್ರಾಹಕರಿಗೆ ಹಣ ಬರುತ್ತಿದೆ. ಅಲ್ಲದೆ ಬೆಳೆ ವಿಮೆಯ ಪರಿಹಾರದ ಹಣ ಕೂಡ ಬರುವುದರಲ್ಲಿದೆ ಈ ಹಣವನ್ನು ಸಾಲದ ಖಾತೆಗೆ ಮುರಿದುಕೊಳ್ಳದೆ ಗ್ರಾಹಕರ ಕಷ್ಟಕ್ಕೆ ಕೊಡಿ ಎಂದು ಚಂದ್ರಣ್ಣ ಬ್ಯಾಂಕ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.