ಜನಮನ ಸೆಳೆದ ರೇಣುಕಾಯಲ್ಲಮ್ಮ ದೇವಿ ಕರಗಮಹೋತ್ಸವ
ಕೋಲಾರ,ಮೇ,೨೫- ನಗರದ ಪಿ.ಸಿ.ಬಡಾವಣೆಯ ರೇಣುಕಾಯಲ್ಲಮ್ಮ ಸೇವಾ ಸಮಿತಿ ವತಿಯಿಂದ ರೇಣುಕಾ ಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಅದ್ದೂರಿಯಿಂದ ನಡೆದಿದ್ದು, ಕರಗದ ಪೂಜಾರಿ ಬಿ.ವಿ.ಮಂಜುನಾಥ್ ಅವರ ವೈಭವ ಪೂರಿತವಾದ ಅದ್ಬುತಪೂರ್ವ ನೃತ್ಯಕ್ಕೆ ಸಹಸ್ರಾರು ಮಂದಿ ಸಾಕ್ಷಿಯಾದರು.
ಕರಗ ಹೊತ್ತ ಕರಗದ ಪೂಜಾರಿ ಬೇತಮಂಗಲ ಮಂಜುನಾಥ್ ಹೊರ ಬರುತ್ತಿದ್ದಂತೆ ಗೋವಿಂದಾ, ಗೋವಿಂದಾ ಜೈಕಾರಗಳೊಂದಿಗೆ ಜನರ ಕರತಾಡನ ಮುಗಿಲು ಮುಟ್ಟಿತು. ದೇವಾಲಯದ ಮುಂಭಾಗ ನಿರ್ಮಿಸಿದ್ದ ಸುಂದರ ವೇದಿಕೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿವಿಧ ಭಂಗಿಗಳಿಂದ ಕೂಡಿದ ಕರಗ ನೃತ್ಯ ಜನಮನ ಸೂರೆಗೊಂಡಿತು.
ಕರಗದ ಪೂಜಾರಿ ಮಂಜುನಾಥ್‌ರ ವಿವಿಧ ಭಂಗಿಗಳ ನೃತ್ಯಕ್ಕೆ ತಮಟೆ ವಾದ್ಯದ ನಾದ ಮುದ ನೀಡಿದ್ದು, ಕರಗದ ಪೂಜಾರಿ ಮಾಡಿದ ನೃತ್ಯಕ್ಕೆ ಜನರ ಕರತಾಡನ ಮುಗಿಲು ಮುಟ್ಟಿತು. ಇದೇ ಸಂದರ್ಭದಲ್ಲಿ ಕರಗದೊಂದಿಗೆ ವಿವಿಧ ದೇವರುಗಳ ಭವ್ಯ ಪಲ್ಲಕ್ಕಿ ಮೆರವಣಿಗೆ ತಮಟೆ,ವಾದ್ಯಗಳ ವಿನಾದಕ್ಕೆ ಜನ ಕುಣಿತು ಕುಪ್ಪಳಿಸಿದರು.
ಈ ಬಾರಿ ಕರಗವನ್ನು ಅದ್ದೂರಿಯಾಗಿ ನಡೆಸಲು ರೇಣುಕಾ ಯಲ್ಲಮ್ಮ ದೇವಾಲಯ ಸಮಿತಿ ಸಿದ್ದತೆ ನಡೆಸಿದ್ದು, ಇದೇ ಮೊದಲ ಬಾರಿಗೆ ರೇಣುಕಾ ಯಲ್ಲಮ್ಮ ದೇವಿಯ ವಿದ್ಯುತ್ ದೀಪಗಳಿಂದ ಸಿದ್ದಗೊಳಿಸಿದ ಆಕೃತಿ ಮನಸೂರೆಗೊಂಡಿದ್ದು ಕರಗಮಹೋತ್ಸವವನ್ನು ಜನ ಕಣ್ತುಂಬಿಕೊಂಡರು.೩೨ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ೫ ಗಂಟೆಗೆ ಅಗ್ನಿಕುಂಡ ಪ್ರವೇಶ ನಡೆದಿದ್ದು, ಇಡೀ ಟೇಕಲ್ ರಸ್ತೆ ಅಂಬೇಡ್ಕರ್ ಉದ್ಯಾನವನದಿಂದ ಬೈಪಾಸ್‌ವರೆಗೂ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿತ್ತು.
ಇದೇ ಸಂದರ್ಭದಲ್ಲಿ ದೇವಾಲಯ ಸಮಿತಿ ಸದಸ್ಯ ಹಾಗೂ ಕಲಾವಿದ ಆರ್‍ಮುಗಂ ಪಂಜಿನ ನೃತ್ಯ ನಡೆಸಿಕೊಟ್ಟು ರಂಜಿಸಿದರು.
ಕಾರ್ಯಕ್ರಮದಲ್ಲಿ ರೇಣುಕಾಯಲ್ಲಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಗಣೇಶ್ ಕರಗಮಹೋತ್ಸವದ ನೇತೃತ್ವ ವಹಿಸಿದ್ದು, ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಅರ್ಚಕರಾದ ಸುರೇಶಾಚಾರ್ಯ, ಮೇಸ್ತ್ರೀ ಕೆ.ಆರ್‍ಮುಗಂ, ಸಮಿತಿ ಉಪಾಧ್ಯಕ್ಷ ಚಂದ್ರಪ್ರಕಾಶ್, ಖಜಾಂಚಿ ಕೆ.ಎಸ್.ಮಂಜುನಾಥ್, ಕಾರ್ಯದರ್ಶಿ ಕಲಾ ರಮೇಶ್, ಉಪಕಾರ್ಯದರ್ಶಿ ವಿ.ಸುರೇಶ್,ಟಿ.ಸಂಪತ್ ಕುಮಾರ್,ಎ.ಮಹೇಶ್, ಮೇಸ್ತ್ರಿ ಕೃಷ್ಣಪ್ಪ, ಗೋವಿಂದರಾಜು, ಸಿ.ಶ್ರೀನಿವಾಸ್, ವೆಂಕಟೇಶಪ್ಪ, ಮುತ್ತಪ್ಪ,ಗಣೇಶ್, ಎಲ್‌ಐಸಿ ಮುನಿಯಪ್ಪ, ವೆಂಕಟೇಶಪ್ಪ,ಕಿಟ್ಟಪ್ಪ, ನಾಗರಾಜ್,ಯಲ್ಲಪ್ಪ,ಕರಗದ ಪೂಜಾರಿ ಬಿ.ವಿ.ಮಂಜುನಾಥ್, ಸಂತೋಷ್,ಕಿರಣ್ ಮತ್ತಿತರರು ವಹಿಸಿದ್ದರು.