ಸಿಎಂಸಿ ಸದಸ್ಯೆ ಪತಿಯಿಂದ ಅಧಿಕಾರ ದುರ್ಬಳಕೆ
ಕೋಲಾರ,ಮೇ,೨೫- ಕೋಲಾರ ನಗರಸಭೆಯಲ್ಲಿ ಮಹಿಳಾ ಸದಸ್ಯರ ಕೆಲವು ಪತಿ ಮಹಾಶಯರು ತಮ್ಮ ಪತ್ನಿಯ ಅಧಿಕಾರವನ್ನು ಚಲಾಯಿಸುವ ಮೂಲಕ ಅಧಿಕಾರಿಗಳ ಮೇಲೆ ಹಾಗೂ ಸಾರ್ವಜನಿಕರ ಮೇಲೆ ದಬಾವಣೆ ಮಾಡುತ್ತಿರುವುದು ಹಲವಾರು ವರ್ಷಗಳಿಂದ ಮುಂದುವರೆದು ಕೊಂಡು ಬಂದಿದೆ.
ಈ ವಿಚಾರವಾಗಿ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಹಿಳಾ ಸದಸ್ಯೆಯ ಪತಿಯೆಂದು ಗೌರವ ನೀಡಿ ಅವರು ಹೇಳಿದ ಕೆಲಸಗಳನ್ನು ಮಾಡಿ ಕೊಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಅದರೆ ಕೆಲವು ಮಹಿಳಾ ಸದಸ್ಯೆಯ ಪತಿಮಹಾಶಯರು ಇದನ್ನೆ ದಂಧೆಯನ್ನಾಗಿ ಪರಿವರ್ತಿಸಿ ಕೊಂಡು ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಸಿಬ್ಬಂದಿಗಳಿಗೆ ಕಿರುಕುಳ ನೀಡುವುದು ಆಶ್ಲೀಲವಾಗಿ ನಿಂದಿಸುವುದು ಬೆದರಿಕೆ ಹಾಕುವುದು ಮಾಡುತ್ತಿದ್ದರೂ ಸಹ ಹಿರಿಯ ಅಧಿಕಾರಿಗಳು ಜಾಣ ಕುರುಡುತನ,ಕಿವೂಡುತನ ತೋರುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಅರೋಪವಾಗಿದೆ.
ನಗರಸಭೆಯಲ್ಲಿ ಬಹುತೇಕ ಯಾವೂದಾದರೂ ಕೆಲಸಗಳು ಅಗಬೇಕಾದರೆ ಮಹಿಳಾ ಸದಸ್ಯರುಗಳಿಂದ ಮಾತ್ರ ಸಾಧ್ಯ ಎಂಬಾಂತಾಗಿದೆ ಏಕೆಂದರೆ ಕಚೇರಿಯ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳಿಗೆ ಸಾರ್ವಜನಿಕರ ಕೆಲಸ ಕಾರ್ಯಗಳಿಗಿಂತ ಮಹಿಳಾ ಸದಸ್ಯರುಗಳ ಪತಿಮಹಾಶಯರು ತರುವಂತ ಕಡತಗಳೇ ಹೆಚ್ಚಾಗಿರುವುದು ಹಾಗಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಭವಾಗಲು ಕಾರಣ ಎಂಬುವುದು ನೊಂದ ಸಿಬ್ಬಂದಿಗಳ ಅಳಲಾಗಿದೆ.
ಅದರೆ ಮಹಿಳಾ ಸದಸ್ಯರ ಪರಿಮಹಾಶಯರು ಬಹುತೇಕ ನಿರುದ್ಯೋಗಿಗಳೇ ಅಗಿದ್ದು ಅವರಿಗೆ ಇದೊಂದು ಅನಧಿಕೃತವಾದ ಉದ್ಯೋಗವಾಗಿದೆ. ಸಭೆಗಳಿಗೆ ಮಾತ್ರ ತಮ್ಮ ಪತ್ನಿಯರನ್ನು ಕಳುಹಿಸುವ ಮೂಲಕ ಹಾಜರಾತಿಗೆ ಸಹಿ ಹಾಕಿಸಿದರೆ ಉಳಿದ ಎಲ್ಲಾ ಕೆಲಸ ಕಾರ್ಯಗಳು ಸದಸ್ಯೆಯ ಪತಿಯರದೇ ದರ್ಬಾರ್ ಅಗಿದೆ. ಇವರಿಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಮಾನ್ಯತೆ ನೀಡುತ್ತಿದ್ದಾರೆ.
ಸಂಬಂಧ ವಾರ್ಡ್‌ಗಳಿಂದ ಆಯ್ಕೆಯಾಗಿರುವವರು ಸದಸ್ಯೆ ಪತಿ ಮಹಾಶಯರು ವಾರ್ಡ್‌ನ್ನು ಜಿ.ಪಿ.ಎ. ತೆಗೆದು ಕೊಂಡಂತೆ ತಾವು ಹೇಳಿದರೆ ಮಾತ್ರ ಕೆಲಸ ಮಾಡಿ ಕೊಡ ಬೇಕು, ಯಾವೂದೇ ಕಾಮಗಾರಿಗಳು ತಮ್ಮ ಅನುಮತಿ ಇಲ್ಲದೆ ಮಾಡ ಬಾರದು, ಯಾವ ಸಿಬ್ಬಂದಿಯೂ ತಮ್ಮ ಅನುಮತಿ ಇಲ್ಲದೆ ಏನೊಂದು ಮಾಡಬಾರದು ಎಂಬ ದಬಾವಣಿಗಳನ್ನು ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರ ಸಮಸ್ಯೆಗಳು ಬಗೆಹರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂಬುವುದು ಅದಿಕಾರಿಗಳ ಅಳಲಾಗಿದೆ.
ಈ ಸಂಬಂಧ ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೯.೧೧.೨೦೨೩ ರಂದು ಎಫ್‌ಐಆರ್ ಸಹಾ ದಾಖಲಾಗಿತ್ತು. ಈ ಸಂಬಂಧ ಜಿಲ್ಲಾ ಪಂಚಾಯತಿ ಸಿಇಒ ಅವರು ತನಿಖೆಗೆ ಆದೇಶಿಸಿದ್ದರು. ತಾಲೂಕು ಪಂಚಾಯತಿ ಇಒ ಅವರು ತನಿಖೆ ನಡೆಸಿ ಆರೋಪಗಳೆಲ್ಲಾ ವಾಸ್ತವಾಗಿದ್ದು, ಮನೋಹರ್ ಪತ್ನಿ ಪೂರ್ಣಿಮಾ ಅವರ ಪಂಚಾಯತಿ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಸರ್ಕಾರಕ್ಕೆ ವರದಿ ನೀಡಿದ್ದರ ಮೇರೆಗೆ ೧೫.೪.೨೦೨೪ರಂದು ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕರು ಗ್ರಾಮಸ್ವರಾಜ್ ಅಧಿನಿಯಮ ೧೯೯೩ರ ಕಲಂ ೪೩(ಎ) ರಂತೆ ಆಯುಕ್ತರು ವಿಚಾರಣೆ ನಡೆಸಿ ವರದಿ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಮಹಿಳಾ ಸದಸ್ಯರ ಅಧಿಕಾರವನ್ನು ಗಂಡಂದಿರು ದುರ್‍ಬಳಿಸಿ ಕೊಂಡು ಅಧಿಕಾರ ಚಲಾಯಿಸುತ್ತಿರುವ ವ್ಯಕ್ತಿಗಳಿಗೆ ಪಾಠವು ನಗರಸಭೆಯಲ್ಲೂ ಅಗ ಬೇಕಾಗಿದೆ. ದೇವರಾಯಸಮುದ್ರ ಪಂಚಾಯಿತಿಯಲ್ಲಿನ ಮನೋಹರ್ ಪ್ರಕರಣದಲ್ಲಿ ಶಿಕ್ಷೆ ಆಗಬೇಕಾಗಿದ್ದು ಇದು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಪಾಠವಾಗ ಬೇಕಾಗಿದೆ.
ಸಂವಿಧಾನದತ್ತವಾಗಿ ಮಹಿಳೆಯರಿಗೆ ಸಿಕ್ಕಿರುವ ಅಧಿಕಾರವನ್ನು ಅವರೇ ಚಲಾಯಿಸುವಂತಾಗಬೇಕು. ಪೂರ್ಣಿಮಾ ಅವರ ಸದಸ್ಯತ್ವ ರದ್ದಾಗುವ ಮೂಲಕ ಸಮಾಜಕ್ಕೆ ಸಂದೇಶ ಸಿಗಬೇಕಿದೆ ಎಂಬುವುದು ಪ್ರಜ್ಞಾವಂತರ ಅಭಿಮತವಾಗಿದೆ.