ಚಿತ್ತಾಪುರದಲ್ಲಿ ನಾಲ್ಕು ಅಂಗಡಿಗಳ ಸರಣಿ ಕಳ್ಳತನ: ಸಿಸಿಟಿವಿಯಲ್ಲಿ ಸೆರೆ
ಕಲಬುರಗಿ:ಮೇ.24:ಚಿತ್ತಾಪುರ ಪಟ್ಟಣದ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದ್ದು, ಈ ಕುರಿತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಲಾಡ್ಜಿಂಗ್ ಕ್ರಾಸ್‍ನಲ್ಲಿ ಶುಕ್ರವಾರ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ನಾಲ್ಕು ಅಂಗಡಿಗಳಲ್ಲಿ ಕಳ್ಳತನವಾಗಿವೆ.
ಲಾಡ್ಜಿಂಗ್ ಕ್ರಾಸ್ ಹತ್ತಿರದ ಆನಂದ್ ವೈನ್ಸ್, ನ್ಯೂ ಸ್ಟ್ಯಾಂಡರ್ಡ್ ಹಾರ್ಡ್’ವೆರ್, ಲಕ್ಷ್ಮೀ ಹಾರ್ಡ್‍ವೇರ್ ಶಾಪ್ ಹಾಗೂ ಭಾಗ್ಯ ಎಂಟರ್‍ಪ್ರೈಸಸ್ ಮತ್ತು ಹಾರ್ಡ್‍ವೇರ್ ಶಾಪ್ ಮುಂತಾದವುಗಳಲ್ಲಿ ಕಳ್ಳತನವಾಗಿವೆ.
ಮೂವರು ಕಳ್ಳರು ಅಂಗಡಿಯ ಶೆಟರ್ ಮುರಿದು ಒಳಗಡೆ ಹೋಗುವ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂವರು ಕಳ್ಳರಲ್ಲಿ ಇಬ್ಬರು ಕಳ್ಳರು ಒಬ್ಬನ ಹೆಗಲ ಮೇಲೆ ಕುಳಿತು ಅಂಗಡಿಗಳ ಮುಂದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆಯುತ್ತಿರುವ ದೃಶ್ಯಗಳೂ ಸಹ ಕಳ್ಳರ ಗಮನಕ್ಕೆ ಬಾರದ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೆÇಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತು ಚಿತ್ತಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.