ಖಾಜಾ ಬಂದೇನವಾಜ್ ಉರಸ್ ಪ್ರಯುಕ್ತ ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆ
ಕಲಬುರಗಿ:ಮೇ.24:ಕಲಬುರಗಿಯ ಖಾಜಾ ಬಂದೇನವಾಜ್ ಉರಸ್‍ಗೆ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರು/ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ-1ರ ವತಿಯಿಂದ ಇದೇ ಮೇ 23 ರಿಂದ 28 ರವರೆಗೆ ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ-ಹೈದ್ರಾಬಾದ್ ವ್ಹಯಾ ಜಹೀರಾಬಾದ್, ಕಲಬುರಗಿ-ಹೈದ್ರಾಬಾದ್ ವ್ಹಾಯಾ ಸೇಡಂ ಮತ್ತು ಕೊಡಂಗಲ್, ಕಲಬುರಗಿ-ತಾಂಡೂರು ವ್ಹಯಾ ಚಿಂಚೋಳಿ, ಕಲಬುರಗಿ-ಮೆಹಬೂಬ್ ನಗರ, ಕಲಬರಗಿ-ಬೀದರ, ಕಲಬುರಗಿ-ವಿಜಯಪೂರ ಹಾಗೂ ಕಲಬುರಗಿ ಯಿಂದ ಸೇಡಂ, ಚಿಂಚೋಳಿ, ಚಿತ್ತಾಪೂರ ಮತ್ತು ಕಾಳಗಿ ಸೇರಿದಂತೆ ಇತರೆ ಮುಖ್ಯ ಸ್ಥಳಗಳಿಗೆ ಈ ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕ ಪ್ರಯಾಣಿಕರು, ಯಾತ್ರಾರ್ಥಿಗಳು ಈ ಹೆಚ್ಚುವರಿ ವಿಶೇಷ ಬಸ್‍ಗಳ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.