ಕೂಸಿನ ಮನೆಗೆ ಕೇಂದ್ರತಂಡ ಭೇಟಿ
ಚಿಂಚೋಳಿ,ಮೇ 24: ತಾಲ್ಲೂಕಿನ ಗಾರಂಪಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಪ್ರಾಂಭಿಸಲಾದ ಕೂಸಿನ ಮನೆ ಕೇಂದ್ರಕ್ಕೆ ದೆಹಲಿಯ ಕೇಂದ್ರ ತಂಡದ ಶಿಥಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ಸಂಭಂದಿಸಿದಂತೆ ಕೆಲವು ಮೌಲ್ಯಯುತವಾದ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ತಂಡದ ಮಂಜುನಾಥ,ಮಾಣಿಕ್ ನರೇಗಾ ಸಹಾಯಕ ನಿರ್ದೇಶಕರಾದ ಶಿವಶಂಕರಯ್ಯ ಸ್ವಾಮಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಾರುತಿ ಪ್ರಸಾದ, ಚುಮ್ಮನಚೋಡ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋವಿಂದರೆಡ್ಡಿ, ತಾಐಇಸಿ ಸಂಯೋಜಕ ಭೀಮಾಶಂಕರ,ಬಿಲ್ ಕಲೆಕ್ಟರ್ ಭಾಗಪ್ಪಾ,ಗಣಕ ಯಂತ್ರ ಸಹಾಯಕ ಜಗನ್ನಾಥ, ಹಾಗೂ ಕೇರ್ ಟೇಕರ್ಸ ಕಲಾವತಿ,ಉಮಾದೇವಿ,ನೀಲಮ್ಮಾ,ಇಂದುಮತಿ ಉಪಸ್ಥಿತರಿದ್ದರು