ಡೇಂಗೀ ದಿನಾಚರಣೆ ಮಾನವ ಸರಪಳಿ ಜಾಥಾ
ಬೀದರ :ಮೇ.24:ಜಿಲ್ಲೆಯಲ್ಲಿ “16ನೇ ಮೇ-2024 ರಾಷ್ಟ್ರೀಯಡೇಂಗ್ಯೂ ದಿನಾಚರಣೆ ಪ್ರಯುಕ್ತ ಬೀದರ ನಗರದಲ್ಲಿ ಸರಕಾರಿ ಶುಶ್ರೂಷಕಾಲೇಜು ವಿದ್ಯಾರ್ಥಿಗಳು ಹಾಗೂ ಆರೋಗ್ಯಇಲಾಖೆಯ ಸಿಬ್ಬಂದಿ ವರ್ಗದವರಿಂದ ಬೃಹತ್ ” ಮಾನವ ಸರಪಳಿಜನಜಾಗೃತಿಜಾಥಾವನ್ನು”ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಆವರಣದಲ್ಲಿಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾಃಧ್ಯಾನೇಶ್ವರ ನಿರಗುಡಿರವರು ಉದ್ಘಾಟಿಸಿಹಸಿರು ಬಾವೂಟದ ಹಾರಿಸುವ ಮೂಲಕ ಚಾಲನೆ ನೀಡಿದರು.
ಜಾಥಾವನ್ನು ಉದ್ಘಾಟಿಸಿ ಮಾತನಾಡುತ್ತಾಬೀದರಜಿಲ್ಲೆಯಲ್ಲಿ ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಡೇಂಗ್ಯೂ/ಚಿಕ್ಕುಂಗುನ್ಯಾಜ್ವರದ ಪ್ರಕರಣಗಳು ಪತ್ತೆಯಾಗುತ್ತಲಿದ್ದು, ಸಾರ್ವಜನಿಕರುತೀವೃಆತಂಕ್ಕೆಈಡಾಗುತ್ತಿರುವ ವಿಷಯಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.ಸಾಮಾನ್ಯವಾಗಿ ವೈರಸ್ ಹೊಂದಿರುವಈಡೀಸ್‍ಜಾತಿಯ ಹೆಣ್ಣು ಸೊಳ್ಳೆ ಹಗಲು ಹೊತ್ತಿನಲ್ಲಿಕಚ್ಚುವುದರಿಂದ ಕಾಣಿಸಿಕೊಳ್ಳುತ್ತದೆ.ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ನಗರ/ಪಟ್ಟಣ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದು, ಡೇಂಗ್ಯೂ/ಚಿಕ್ಕಂಗುನ್ಯಾ ಹರಡಿಸುವ ಸೊಳ್ಳೆಗಳಾದ ಈಡೀಸ್ ಸೊಳ್ಳೆಗಳು ಮನೆಯ ಗೃಹ ಬಳಕೆಗಾಗಿ ಸಂಗ್ರಹಿಸಿಡುವ ನೀರಿನ ತಾಣಗಳಾದ ಡ್ರಮ್, ಬ್ಯಾರಲ್, ಹೌಜ್, ನೀರಿನ ತೊಟ್ಟಿಗಳು, ಏರಕೂಲರ್, ಅನುಪಯುಕ್ತಟಾಯರ್, ಒಡೆದ ಮಡಿಕೆಗಳು, ಟೆಂಗಿನಚಿಪ್ಪು ಇತ್ಯಾದಿಗಳಲ್ಲಿ ನೀರಲ್ಲಿ ಸೊಳ್ಳೆಗಳ ತನ್ನ ಸಂತಾನ ಅಭಿವೃದ್ಧಿಪಡಿಸಿ ವ್ಯಾಪಕವಾಗಿ ಸೊಳ್ಳೆ ಉತ್ಪತ್ತಿಯಾಗುತ್ತಿರುವುದರಿಂದ ಅವುಗಳ ನಿರ್ಮೂಲನೆಗಾಗಿ ನಗರ/ಪಟ್ಟಣ ಪ್ರದೇಶಗಳಲ್ಲಿ ಸಿಬ್ಬಂದಿಗಳ ಕೊರತೆಇರುವುದರಿಂದಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವಆರೋಗ್ಯ ಸಹಾಯಕರನ್ನು ಪ್ರತಿ ತಿಂಗಳು ಮೊದಲನೆ ಶುಕ್ರವಾರ ಮತ್ತು ಮೂರನೇ ಶುಕ್ರವಾರದಂದುಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯವನ್ನು ನಿರಂತರವಾಗಿ ಕೈಕೊಳ್ಳಲಾಗುತ್ತಿದೆ, ಸಾರ್ವಜನಿಕರುಆರೋಗ್ಯ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದಾಗ ಲಾರ್ವಾ ಸಮೀಕ್ಷೆ ಮತ್ತು ನಿರ್ಮೂಲನೆಗಾಗಿ ಸಹಕಾರ ನೀಡುವುದು. ಗ್ರಾಮೀಣ ಪ್ರದೇಶದಲ್ಲಿಜ್ವರ ಸಮೀಕ್ಷೆ ಹಾಗೂ ಲಾರ್ವಾ ಸಮೀಕ್ಷೆ ನಿರ್ಮೂಲನೆ ಕಾರ್ಯವನ್ನುಆರೋಗ್ಯ ಸಹಾಯಕರಿಂದ ಹಾಗೂ ಆಶಾ ಕಾರ್ಯಕರ್ತರಿಂದ ನಿರಂತರವಾಗಿ ಚಟುವಟಿಕೆಗಳನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾಃರಾಜಶೇಖರ್ ಪಾಟೀಲ್‍ರವರು ಮಾತನಾಡುತ್ತಾ,ಬೀದರಜಿಲ್ಲೆಯಲ್ಲಿಡೆಂಗೀ/ಚಿಕ್ಕುಂಗುನ್ಯಾ ನಿಯಂತ್ರಣಕ್ಕಾಗಿಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗಾಗಿ ಹಾಗೂ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕಾಗಿಅಂತರ್ ಇಲಾಖಾ ಸಮನ್ವಯದೊಂದಿಗೆನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಡೇಂಗ್ಯೂಜ್ವರದ ಲಕ್ಷಣಗಳುಃ-
1) ಬಿಟ್ಟು ಬಿಡದತೀವ್ರತರವಾದಜ್ವರ.
2) ಮೈ ಕೈ ನೋವು.
3) ವಿಶೇಷವಾಗಿ ಕಣ್ಣುಗಳ ಹಿಂಬಾಗದಲ್ಲಿತಡೆಯಲಾಗದಷ್ಟು ನೋವು.
4) ಕೆಲವೊಬ್ಬರಿಗೆದೇಹದ ಮೇಲೆ ಕೆಂಪು ರಕ್ತ ಮಿಶ್ರಿತ ಗುಳ್ಳೆಗಳು.
5) ಕಪ್ಪು ಬಣ್ಣದ ಮಲ ವಿಸರ್ಜನೆಯೂ ಆಗಬಹುದು.
6) ಕೆಲವೊಮ್ಮೆ ಮೂಗು ಹಾಗು ಒಸಡಗುಗಳ ಮೂಲಕ ರಕ್ತ ಸ್ರಾವ ಆಗಬಹುದು.
7) ವಿಪರೀತಜ್ವರದಿಂದ ವ್ಯಕ್ತಿಯೂಅರೆ ಪ್ರಜ್ಞಾ ಹೀನನಾಗಬಹುದು.
ಡೇಂಗ್ಯೂ ಹರಡದಂತೆ ಮುಂಜಾಗೃತಾ ಕ್ರಮಗಳುಃ:-
1) ಮನೆಯಲ್ಲಿ ಬಳಕೆಗಾಗಿ ತುಂಬಿಡುವ ನೀರಿನ ತಾಣಗಳಾದ ಡ್ರಮ್, ಹೌಜು, ಮಡಿಕೆ, ಸಿಮೆಂಟಿನ ತೊಟ್ಟಿಗಳನ್ನು ಸೊಳ್ಳೆ ಮರಿಉತ್ಪತ್ತಿಯಾಗದಂತೆಕಡ್ಡಾಯವಾಗಿ ವಾರಕ್ಕೊಂದು ಬಾರಿ ಖಾಲಿ ಮಾಡುವುದು.
2) ತುಂಬಿಟ್ಟ ನೀರನ್ನು ವಾರಕ್ಕೊಂದು ಬಾರಿತಿಕ್ಕಿ ತೊಳೆದು ಒಣಗಿಸಿದ ನಂತರ ನೀರು ತುಂಬಿಸಿಕೊಳ್ಳುವುದು.
3) ತುಂಬಿಸಿಕೊಂಡ ನೀರನ್ನು ಭದ್ರವಾಗಿ ಮುಚ್ಚಿಡುವುದು. ಏಕೆಂದರೆ ಸೊಳ್ಳೆಗಳು ತೆರೆದಿರುವ ನಿಂತ ನೀರಿನಲ್ಲಿ ಸಂತಾನಅಭಿವೃದ್ಧಿಪಡಿಸುತ್ತವೆ.
4) ಮನೆಯ ಬಳಕೆಗಾಗಿ ಸೇಖರಿಸಿಡುವ ನೀರಿನ ಪಾತ್ರೆಗಳನ್ನು ವಾರಕ್ಕೊಂದು ಬಾರಿತಿಕ್ಕಿ ತೊಳೆದು ಒಣಗಿಸಿದ ನಂತರವೇ ಮರು ನೀರುತುಂಬುವ ಪರಿಪಾಠವನ್ನುಜೀವನ ಪಯರ್ಂತಕಡ್ಡಾಯವಾಗಿ ಅಳವಡಿಸಿಕೊಳ್ಳುವುದು.
5) ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು.
6) ಸೊಳ್ಳೆ ಉತ್ಪತ್ತಿಗೆಅನುಕೂಲಕರವಾಗುವತಗ್ಗು ಗುಂಡಿಗಳನ್ನು ಮುಚ್ಚುವುದು, ಇಲ್ಲವೇ ಮನೆಯವರೇ ನಿಂತ ನೀರಿನಲ್ಲಿ ಸೀಮೆ ಎಣ್ಣೆಅಥವಾ ಸುಟ್ಟಿದಆಯಿಲ್ ಸಿಂಪರಣೆ ಮಾಡಿದ್ದಲ್ಲಿ ಸೊಳ್ಳೆ ಉತ್ಪತ್ತಿ ನಿಯಂತ್ರಿಸಬಹುದಾಗಿದೆ.
7) ಮನೆಯ ಸುತ್ತ ಮುತ್ತಿಇರುವ ನಿರುಪಯುಕ್ತ ತ್ಯಾಜ್ಯಗಳಾದ ಒಡೆದಗಾಜು, ತೆಂಗಿನಚಿಪ್ಪು, ಟಾಯರುಗಳು, ಮಡಿಕೆಗಳು ಮೇಲಿಂದ ಮೇಲೆ ಸೂಕ್ತ ವಿಲೇವಾರಿ ಮಾಡಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು.
8) ಮನೆಯಲ್ಲಿರುವ”ಏರ್‍ಕೂಲರ್” ಹೂ ಕುಂಡಗಳಲ್ಲಿರುವ ನೀರನ್ನು ಮತ್ತು ಹೂ ತೋಟಗಳಲ್ಲಿ ನಿಂತ ನೀರನ್ನುತಪ್ಪದೇ ವಾರಕ್ಕೊಂದು ಬಾರಿ ಖಾಲಿ ಮಾಡುವುದು.
9) ಸಾಮಾನ್ಯವಾಗಿಈಡೀಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿಕಚ್ಚುವುದರಿಂದ ಸದಾ ಮೈತುಂಬ ಬಟ್ಟೆಧರಿಸುವುದು, ಮಲಗುವಾಗ ಸೊಳ್ಳೆ ಕಚ್ಚದಂತೆ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು.
10) ಮನೆಯಕಿಟಕಿ, ಬಾಗಿಲುಗಳಿಗೆ ಸೊಳ್ಳೆಗಳು ಮನೆಯಲ್ಲಿ ಪ್ರವೇಶ ಮಾಡದಂತೆ ಜಾಲರಿಗಳನ್ನು ಅಳವಡಿಸುವುದು.
11) ಮನೆಯಲ್ಲಿ ಸೊಳ್ಳೆಬತ್ತಿ ಹಾಗೂ ಸೊಳ್ಳೆ ನಿರೋಧಕಕ್ರೀಂ ಗಳನ್ನು ಬಳಸುವುದು.
12) ಆರೋಗ್ಯಇಲಾಖೆಯ ಸಿಬ್ಬಂದಿಗಳು ಲಾರ್ವಾ ಸಮೀಕ್ಷೆಗಾಗಿ ಮನೆ ಮನೆ ಭೇಟಿ ನೀಡಿದ ಸಂದರ್ಭದಲ್ಲಿಅವರನ್ನು ಸೊಳ್ಳೆ ಉತ್ಪತ್ತಿ ತಾಣಗಳ ಪರಿಶೀಲನೆಗಾಗಿ ಸಹಕರಿಸುವುದು.
13) ಶಂಕಿತಡೇಂಗ್ಯೂ ಲಕ್ಷಣ ಹೊಂದಿರುವವರುಯಾವುದೇಕಾರಣಕ್ಕೂ ಸ್ವಯಂ ವೈದ್ಯೋಪಚಾರ ಮಾಡಿಕೊಳ್ಳಬಾರದು. ವಿಶೇಷವಾಗಿ ನೋವು ನಿವಾರಕ ಆಸ್ಪಿರೀನ್ ಮತ್ತು ಬ್ರೂಫಿನ್ ಮಾತ್ರೆಗಳನ್ನು ತೆಗೆದುಕೊಳ್ಳಲೇಬಾರದು.
14) ಒಟ್ಟಿನಲ್ಲಿತಜ್ಞ ವೈದ್ಯರ ಸಲಹೆ ಇಲ್ಲದೇಡೇಂಗ್ಯೂ ಲಕ್ಷಣಇರುವ ರೋಗಿಗಳು ಸ್ವಯಂಚಿಕಿತ್ಸೆ ಪಡೆದುಕೊಳ್ಳಬಾರದು.
15) ಯಾವುದೇಜ್ವರಇರಲಿ ಮೊದಲು ಸರ್ಕಾರಿಆಸ್ಪತ್ರೆಗೆ ಭೆಟ್ಟಿಕೊಟ್ಟುಚಿಕಿತ್ಸೆ ಪಡೆಯುವುದು.
ಡೇಂಗ್ಯೂಚಿಕಿತ್ಸೆಗಾಗಿಆರೋಗ್ಯಇಲಾಖೆಯಲ್ಲಿರುವ ಸೌಲಭ್ಯಗಳುಃ-
1) ಶಂಕಿತಡೇಂಗ್ಯೂ ರೋಗಿಗಳಿಂದ ಪಡೆಯಲಾದರಕ್ತದ ಮಾದರಿಗಳನ್ನು “ಜಿಲ್ಲಾ ಪ್ರಯೋಗ ಶಾಲೆ ” ಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಆವರಣ ಬೀದರಇಲ್ಲಿಡೇಂಗ್ಯೂ ಪರೀಕ್ಷೆಗಾಗಿ” ಎಲಿಸಾ ” ಪರೀಕ್ಷೆಉಚಿತವಾಗಿ ಮಾಡಲಾಗುತ್ತದೆ.
2) ಡೇಂಗ್ಯೂರೋಗ ಲಕ್ಷಣಖಚಿತಗೊಂಡ ವೈಕ್ತಿಗಳಲ್ಲಿಯ ಪ್ಲೇಟ್ ಲೆಟ್‍ಕಣಗಳುಕಡಿಮೆಆಗುತ್ತವೆ. ಆದ್ದರಿಂದಜಿಲ್ಲಾಆಸ್ಪತ್ರೆ ಬೀದರಲ್ಲಿಉಚಿತವಾಗಿ ಪ್ಲೇಟ್ ಲೆಟ್ ನೀಡುವ ಸೌಲಭ್ಯವನ್ನುಕಲ್ಪಿಸಲಾಗಿದೆ.
3) ಜಿಲ್ಲೆಯಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಈ ಕುರಿತು ಮಾಹಿತಿ ಹಾಗೂ ಚಿಕಿತ್ಸಾ ಸೌಲಭ್ಯಇರುತ್ತದೆ.
4) ಹೆಚ್ಚಿನ ಮಾಹಿತಿಗಾಗಿಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಬೀದರರವರ ಮತ್ತುಜಿಲ್ಲಾ ಮಲೇರಿಯ ಅಧಿಕಾರಿಗಳು ಬೀದರರವರನ್ನು ಸಂಪರ್ಕಿಸಬಹುದು.
ನಗರ ಸಭೆ, ಪಟ್ಟಣ ಪಂಚಾಯಿತಿ, ಪುರಸಭೆಇವರ ಸಹಕಾರದೊಂದಿಗೆ ಪ್ರತಿ ತಿಂಗಳ ಮೊದಲನೆ ಹಾಗೂ ಮೂರನೇ ಶುಕ್ರವಾರದಂದುಗ್ರಾಮಾಂತರಕ್ಷೇತ್ರ ಸಿಬ್ಬಂದಿಗಳ ಸೇವೆಯನ್ನು ಉಪಯೋಗಿಸಿಕೊಂಡು ಡೇಂಗ್ಯೂ ನಿಯಂತ್ರಣಕ್ಕಾಗಿಈಡೀಸ್ ಲಾರ್ವಾ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯವನ್ನು ಕೈಕೊಳ್ಳಲಾಗುತ್ತಿದೆ.ಆದ್ದರಿಂದತಮ್ಮ ಮನೆಗಳಿಗೆ ಭೆಟ್ಟಿ ನೀಡುವ ಸಿಬ್ಬಂದಿಗಳಿಗೆ ಸಹಕಾರ ನೀಡಿಅವರ ಸೂಚನೆ ಅನುಸಾರ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ನಿಯಂತ್ರಣಕ್ಕಾಗಿ ಸಾರ್ವಜನಿಕರುಇಲಾಖೆಯೊಂದಿಗೆ ಸಹಕರಿಸಲು ವಿನಂತಿಸಿದರು.ಡೇಂಗೀ ಮಾನವ ಸರಪಳಿ ಜಾಥಾದಲ್ಲಿಜಿಲ್ಲಾ ಮಲೇರಿಯ ಅಧಿಕಾರಿಗಳಾದರಾಜಶೇಖರ್ ಪಾಟೀಲ್, ಜಿಲ್ಲಾ ಮಟ್ಟದಆರೋಗ್ಯಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ:ಅನೀಲ್‍ಚಿಂತಾಮಣಿ, ಡಾಃಶಿವಶಂಕರ.ಬಿ. ಡಾ:ದಿಲೀಪ್‍ಡೋಂಗ್ರೆ , ಸಂಗಪ್ಪಾಕಾಂಬ್ಳೆ, ಶ್ರೀಮತಿ.ಅನೀತಾ,ಓಂಕಾರ್ ಮಲ್ಲಿಗೆ, ಜೇತುಲಾಲ ಪವಾರ್, ಕಮಲಾಕರ ಹಲಗೆ, ರಾಜಶೇಖರ್‍ತಂಬಾಕೆ, ಮುಹ್ಮದ್‍ಅಬ್ದುಲ್‍ರಫೀ, ಕಾಶಿನಾಥ, ಎಂಡಿ ಸಮಿಯುದ್ದಿನ್, ಸತೀಶ ಪಾಂಡೆ,ಸಂಗಶಟ್ಟಿ, ವೀರಶಟ್ಟಿಚೆನಶಟ್ಟಿ, ಸಮೀ ಪಟೇಲ್, ಶಿವಕಾಂತ್ ಮಿತ್ರಾ, ಶಿವರಾಜ ಸಾಗರ, ಹಾದಿ ತಬ್ರೇಜ್, ದೇವಿದಾಸಗಂಗೆನೋರ್, ಸೋನಾಬಾಯಿ,ಬಸವರಾಜ,ಅನೀಲ್‍ಜಾಧವ, ಜಾವೇದ್‍ಕಲ್ಯಾಣಕರ್‍ಹಾಗೂ ಆರೋಗ್ಯ ಮತ್ತುಕು.ಕ.ಇಲಾಖೆಯಆರೋಗ್ಯ ಕಾರ್ಯಕ್ರಮಗಳ ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದರು.
ಜನಜಾಗೃತಿಜಾಥಾ ನಗರದ ಪ್ರಮುಖ ರಸ್ತೆಗಳಾದ ಜನವಾಡಾರಸ್ತೆ, ನಗರದ ಪ್ರಮುಖಡಾಃಅಂಬೇಡ್ಕರವೃತ್ತದಲ್ಲಿ ಮಾನವ ಸರಪಳಿಯೊಂದಿಗೆ ಜನಜಾಗೃತಿಜಾಥವುಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಕಚೇರಿಆವರಣದಲ್ಲಿ ಮುಕ್ತಾಯಗೊಳಿಸಲಾಯಿತು.