ಸಮಯಕ್ಕೆ ಸರಿಯಾಗಿ ಸದನಕ್ಕೆ ಹಾಜರು: ಶಾಸಕ ಯತ್ನಾಳಗೆ ಉಡುಗೂರೆ
ವಿಜಯಪುರ: ಮೇ.24:ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವಿಧಾನಸಭೆ ಸಭಾಧ್ಯಕ್ಷರು ಗೌರವಪೂರ್ವಕವಾಗಿ ಉಡುಗೂರೆ ಘೋಷಿಸಿದ್ದಾರೆ.
2023 ರ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದ ಕಲಾಪದಲ್ಲಿ, ನಿಗದಿತ ಸಮಯಕ್ಕೆ ಸರಿಯಾಗಿ ಸದನದ ಸಭಾಂಗಣದಲ್ಲಿ ಉಪಸ್ಥಿತರಿದ್ದ ಹಿನ್ನೆಲೆ, ವಿಧಾನಸಭೆ ಸಭಾಧ್ಯಕ್ಷರು ಗೌರವಪೂರ್ವಕವಾಗಿ ಉಡುಗೂರೆ (ಕಪ್ ಮತ್ತು ಸಾಬರ್) ಘೋಷಿಸಿದ್ದು, ವಿಧಾನಸೌಧದಲ್ಲಿನ ವಿಧಾನಸಭೆ ಕಾರ್ಯದರ್ಶಿಯವರ ಕಚೇರಿಯಲ್ಲಿ ಉಡುಗೂರೆ ಸ್ವೀಕರಿಸಲು ತಿಳಿಸಿದ್ದಾರೆ.