ಡಾ. ಅಕ್ಕ ಅನ್ನಪೂರ್ಣತಾಯಿ ಲಿಂಗೈಕ್ಯ: ಮೆಹಕರ್ ಶ್ರೀ ಸಂತಾಪ
ಭಾಲ್ಕಿ: ಮೇ.24:ಬೀದರಿನ ಬಸವಗಿರಿ ಬಸವ ಸೇವಾ ಪ್ರತಿಷ್ಠಾನ, ಲಿಂಗಾಯತ ಮಹಾಮಠದ ಮಾತೆ ಡಾ| ಅಕ್ಕ ಅನ್ನಪೂರ್ಣತಾಯಿವರು ಗುರುವಾರ ಲಿಂಗೈಕ್ಯರಾದ ಪ್ರಯುಕ್ತ ಭಾಲ್ಕಿ ತಾಲೂಕಿನ ಮೆಹಕರ ಕಟ್ಟಿಮನಿ ಹಿರೇಮಠ ಸಂಸ್ಥಾನದ ಶ್ರೀ ರಾಜೇಶ್ವರ ಶಿವಾಚಾರ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಬಸವತತ್ವ ಪ್ರಚಾರ ಪ್ರಸಾರಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಮಾತೆ ಅಕ್ಕ ಅನ್ನಪೂರ್ಣತಾಯಿವರು ಲಿಂಗೈಕ್ಯರಾದ ಸುದ್ದಿ ತಿಳಿದು ನಮಗೆ ಅತೀವ ದು:ಖವಾಗಿದೆ. ಈ ಭಾಗದ ಬಸವ ಚೇತನವನ್ನು ಕಳೆದುಕೊಂಡಂತಾಗಿದೆ. ನಾಡಿನಲ್ಲಿ ಬಸವ ಪ್ರಜ್ಞೆ ಜಾಗೃತ ಗೊಳಿಸಿದ ಮಹಾನ್ ಚೇತನ ಅವರಾಗಿದ್ದರು. ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ.