ಬಾಳುಸಿಂಗ್ ನಿಧನ: ಕುಟುಂಬಸ್ಥರಿಗೆ ಶಾಸಕ ಯತ್ನಾಳ ಸಾಂತ್ವನ
ವಿಜಯಪುರ,ಮೇ.24: ಇತ್ತೀಚೆಗೆ ನಿಧನರಾದ ಜನಸಂಘದ ಹಿರಿಯರು, ತಾಳಿಕೋಟೆ ಪಟ್ಟಣದ ಮುಖಂಡರಾದ ಬಾಳುಸಿಂಗ್ ರಾಮಸಿಂಗ್ ವಿಜಾಪುರ ಅವರ ಮನೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಜನಸಂಘದ ಕಾಲದಿಂದಲೂ ನಮ್ಮ ಪಕ್ಷದ ಸಂಘಟನೆಗಾಗಿ ಶ್ರಮಿಸಿರುವುದು, ತಮ್ಮ ಜೊತೆಗಿದ್ದ ಆತ್ಮೀಯ ಒಡನಾಟ ಬಗ್ಗೆ ಕುಟುಂಬದವರೊಂದಿಗೆ ಹಂಚಿಕೊಂಡರು. ಭಾರತೀಯ ಜನತಾ ಪಕ್ಷ ಸಂಘಟನೆಗೆ ಬಾಳುಸಿಂಗ್ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಪಕ್ಷಕ್ಕೆ ಅಪಾರ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಸುರೇಶ ಹಜೇರಿ, ರತನಸಿಂಗ್ ಕೊಕಟನೂರ, ರಮೇಶ ಗೌಡಗೇರಿ ಸೇರಿದಂತೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.