ಅಧಿಕಾರಿಗಳ ಭರವಸೆ ಧರಣಿ ಸತ್ಯಾಗ್ರಹ ಅಂತ್ಯ
ತಾಳಿಕೋಟೆ:ಮೇ.24: ತಾಲೂಕಿನ ಅಸ್ಕಿ, ಬೆಕಿನಾಳ, ಹಾಗೂ ಬೂದಿಹಾಳ ಪಿ.ಟಿ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಅಸ್ಕಿ ಗ್ರಾಮದಲ್ಲಿ ಕೆರೆಯಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬುಧವಾರರಂದು ತಾಲೂಕಾ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ ಮತ್ತು, ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳಾದ ಇಇ ಎಸ್.ಎನ್, ಬಂಡಿವಡ್ಡರ್, ಸೆಕ್ಷನ ಆಫೀಸರ್ ಪ್ರವೀಣ ಗುಡಗುಂಟಿ ಅವರ ಬೆಟ್ಟಿ ನೀಡಿ ಬೇಡಿಕೆ ಇಡೇರಿಕೆಗೆ ಬರವಸೆ ನೀಡಿದ್ದರಿಂದ ರೈತರು ಧರಣಿ ಸತ್ಯಾಗ್ರಹವನ್ನು ಹಿಂಪಡೆದುಕೊಂಡರು.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಇರುವುದರಿಂದ ಜೂನ 6ರ ನಂತರ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು, ಜಿಲ್ಲಾಧಿಕಾರಿಗಳು, ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ಸಭೆ ಮಾಡಿ ಅಧಿಕೃತವಾಗಿ ಯಾವ ರೀತಿ ಈ 3 ಕೆರೆಗಳನ್ನು ತುಂಬಿಸಬೇಕು ಎಂದು ತಜ್ಞರಿಂದ ಸಮೀಕ್ಷೆ ಮಾಡಿಸಿ ನಂತರದಲ್ಲಿ ಒಂದು ನಿರ್ಣಯಕ್ಕೆ ಬರಬಹುದು ಎಂದು ಹೋರಾಟಕ್ಕೆ ಕುಳಿತ ರೈತರೊಡನೆ ತಹಶಿಲ್ದಾರ ಕೀರ್ತಿ ಚಾಲಕ ಅವರು ಮನವರಿಕೆ ಮಾಡಿದರಲ್ಲದೇ ಎಲ್ಲ ರೈತರ ಹಿತಕಾಯುವ ಕೆಲಸ ಅಧಿಕಾರಿಗಳದ್ದಾಗಿದ್ದು ರೈತರ ಬೇಡಿಕೆಗನುಗುಣವಾಗಿ ಪ್ರಯತ್ನಾಶೀಲರಾಗಿ ಕೆರೆಗಳಿಗೆ ನೀರು ತುಂಬಿಸುವ ಬರವಸೆಯನ್ನು ನೀಡಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ತಾಲೂಕಾ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಮಾತನಾಡಿ ತಹಶಿಲ್ದಾರರ ಅವರ ಮಾತಿಗೆ ಗೌರವ ಕೊಡುತ್ತೆವೆ, ಕೂಡಲೇ ಅಧಿಕಾರಿಗಳೊಡನೆ ಚರ್ಚಿಸಿ ಒಂದು ದಿನಾಂಕವನ್ನು ನಿರ್ಣಯ ಮಾಡಿ ಆಗ ಅಸ್ಕಿ, ಬೆಕಿನಾಳ, ಬೂದಿಹಾಳ ಪಿ.ಟಿ ಗ್ರಾಮದ ಹಿರಿಯ ರೈತ ಮುಖಂಡರೊಡನೆ ಸಭೆಗೆ ಬಂದು ಶಾಶ್ವತವಾದ ತಿರ್ಮಾನಕ್ಕೆ ಬರೋಣ, ಪ್ರತಿವರ್ಷ ಬೇಸಿಗೆಯಲ್ಲಿ ಈ ಕೆರೆಗಳಿಗೆ ತಪ್ಪದೇ ನೀರು ತುಂಬಿಸುವಂತಾಗಬೇಕು ಎಂದರಲ್ಲದೇ ಧರಣಿ ನಿರತ ರೈತರ ಅಭಿಪ್ರಾಯದಂತೆ ಮತ್ತು ಅಧಿಕಾರಿಗಳ ಬರವಸೆ ಮಾತಿಗೆ ಒಪ್ಪಿ ಧರಣಿ ಸತ್ಯಾಗ್ರಹದಿಂದ ಹಿಂದಕ್ಕೆ ಸರಿಯುವದಾಗಿ ಹೇಳಿದರು.
ಈ ಸಮಯದಲ್ಲಿ ಅಸ್ಕಿ ಗ್ರಾಮದ ರೈತ ಸಂಘದ ಅಧ್ಯಕ್ಷರಾದ ಸಂಗನಗೌಡ ಬಿರಾದಾರ, ರೈತ ಸಂಘದ ತಾ. ಉಪಾಧ್ಯಕ್ಷರಾದ ಗೌಡಪ್ಪಗೌಡ ಹಳಿಮನಿ, ಡಾ|| ಪ್ರಭುಗೌಡ ಬಿರಾದಾರ, ಉಪಾಧ್ಯಕ್ಷರಾದ ಶರಣಗೌಡ ಬಿರಾದಾರ, ತಾ. ಸಂಚಾಲಕರಾದ ಮಹಿಬೂಬ ಗೊಬ್ಬರಡಗಿ, ಗ್ರಾ.ಪಂ ಉಪಾಧ್ಯಕ್ಷರಾದ ಅಯ್ಯಪ್ಪ ಮುಗಳಿ, ರಾಮನಗೌಡ ಚೌದ್ರಿ, ಮಲ್ಲಪ್ಪ ಅಂಗಡಿ, ಮುತ್ತು ಹೂಗಾರ, ಗುರನಗೌಡ ಬಿರಾದಾರ, ಮಂಜು ಪಡಶೆಟ್ಟಿ, ಮಹದೇವಪ್ಪ ಮಾದರ, ವೆಂಕಣ್ಣ ಗುತ್ಯಾಳ, ಬಸವರಾಜ ಹಡಪದ, ಶಾಂತಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಪ್ರಭುಗೌಡ ಹಳಿಮನಿ, ಶಂಕರ ಮಗದಾಳ, ದೇವಿಂದ್ರ ತುರಕನಗೇರಿ, ಬೆಕಿನಾಳ ಗ್ರಾಮದ ದೇವಿಂದ್ರಪ್ಪಗೌಡ ಪಾಟೀಲ, ಶ್ರೀಶೈಲ ಸಜ್ಜನ, ಮಲ್ಲಪ್ಪ ಮುದನೂರ, ಶ್ರೀಶೈಲ ಹಿರೇಮಠ, ರಾಮನಗೌಡ ಕರಕಳ್ಳಿ, ಲಕ್ಷ್ಮಣ ಚಲವಾದಿ, ಮರಲಿಂಗಪ್ಪ ನಾಟಿಕಾರ, ಮಡಿವಾಳಪ್ಪ ಸಜ್ಜನ, ಬೂದಿಹಾಳ ಗ್ರಾಮದ ಬಸÀನಗೌಡ ಪಾಟೀಲ, ಸಂತೋಷ ಕುಳಗೇರಿ, ಭೀಮನಗೌಡ ಬಿರಾದಾರ, ಶರಣಪ್ಪ ಹಯ್ಯಾಳ, ಜಟ್ಟೆಪ್ಪ ಮಾದರ ಸೇರಿದಂತೆ ಅನೇಕರು ಇದ್ದರು