ಇಂಡಿಯಲ್ಲಿ ಬುದ್ಧ ಪೂರ್ಣಿಮಾ ಆಚರಣೆ
ಇಂಡಿ : ಮೇ.24:ಬುದ್ಧ ಪೂರ್ಣಿಮಾ ಅಥವಾ ವೆಸಕ್ ಗೌತಮ ಬುದ್ಧನ ಜನನ ಜ್ಞಾನೋದಯ ಮತ್ತು ಮರಣವನ್ನು ಆಚರಿಸುತ್ತದೆ. ಪ್ರಾಚೀನ ಭಾರತದಲ್ಲಿ ಹುಟ್ಟಿದ ಸಿದ್ದಾರ್ಥ ಗೌತಮ ಬುದ್ಧನು ಬುದ್ಧ ನಾಗಲು ರಾಜ ಮನೆತನವನ್ನು ತ್ಯಜಿಸಿದನು. ಅವರ ಧರ್ಮ ಹಾಗೂ ಮಧ್ಯಮ ಮಾರ್ಗದ ಬೋದನೆಗಳು ಸಹಾನುಭೂತಿ, ಅಹಿಂಸೆ, ಮತ್ತು ಬುದ್ದಿವಂತಿಕೆಯ ಮೌಲ್ಯಗಳೊಂದಿಗೆ ಲಕ್ಷಾಂತರ ಜನರನ್ನು ಪ್ರೆರೇಪಿಸುತ್ತವೆ ಎಂದು ನಿವೃತ್ತಿ ಶಿಕ್ಷಕ ಮೈದಾರ್ಗಿ ಸರ್ ಹೇಳಿದರು.ನಗರದ ವಿಜಯಪುರ ರಸ್ತೆಯಲ್ಲಿ ನಿರ್ಮಾಣ ವಾಗುತ್ತಿರುವ ಬುದ್ಧ ವಿಹಾರ ದಲ್ಲಿ ಬುದ್ಧ ಪೂರ್ಣಿಮಾ ಕಾರ್ಯಕ್ರಮ ವನ್ನು ಉದ್ದೇಶೀಸಿ ಮಾತನಾಡಿದರು.ಗೌತಮ್ ಬುದ್ಧರ ಅನುಯಾಯೀಗಳಿಂದ ಆಯೋಜಿಸಲಾಗಿದ ಕಾರ್ಯಕ್ರಮ ದಲ್ಲಿ ತ್ರಿ ಶರಣ ಪಂಚಶೀಲ್ ಓದುವ ಮೂಲಕ ಬುದ್ಧನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಕಾಂಗ್ರೇಸಿನ ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷ ಪ್ರಶಾಂತ ಕಾಳೆ ಹಾಗೂ ಉಪನ್ಯಾಸಕರು ಶಿವಯೋಗೆಪ್ಪಾ ಮಾಡ್ಯಾಳ ಬುದ್ಧರ ಜೀವನದ ಬಗ್ಗೆ ವಿಸ್ತರವಾಗಿ ಹೇಳಿದರು. ಈ ಕಾರ್ಯಕ್ರಮ ದಲ್ಲಿ ಸಮಾಜದ ಹಿರಿಯರು ಭೀಮಾಶಂಕರ ಮುರಮನ, ಮಿಲಿಂದ್ ಹೊಸಮನಿ, ಶಿಕ್ಷರಾದ ರಾಜಶೇಖರ್ ವಠಾರ, ಆಂಜನೇಯಸ್ವಾಮಿ ಹೊಸಮನಿ,, ಶಿವು ಮುಲಿಮನಿ, ಹಾಗೂ ಸಂತೋಷ್ ಪರಸೆನವರ, ದತ್ತು ಕೋಳಿ, ರಾಘವೇಂದ್ರ ಶಿರಷ್ಯಾಡ, ಬಸು ಹಳ್ಳದಮನಿ, ವಿನೋದ್ ಕಾಳೆ, ಸೇರಿದಂತೆ ಹಲಾವರು ಅನುಯಾಯಿಗಳು ಭಾಗಿಯಾಗಿದರು.