ಸಮಾಜ ಪರಿವರ್ತನೆಗಾಗಿ ಹಗಲಿರುಳು ಶ್ರಮಿಸಿದವರು ಅಕ್ಕ ಅನ್ನಪೂರ್ಣ ತಾಯಿ: ಪಾಟೀಲ
ಕಲಬುರಗಿ:ಮೇ.24: ನಗರದ ಬಸವೇಶ್ವರ ಮೂರ್ತಿ ಆವರಣದಲ್ಲಿ ಅಕ್ಕ ಅನ್ನಪೂರ್ಣ ತಾಯಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ ಮಾತನಾಡಿ ಅಕ್ಕಾ ಅನ್ನಪೂರ್ಣ ತಾಯಿಯವರು ಬಸಣ್ಣನವರ ವಚನಗಳೇ ಉಸಿರಾಗಿಸಿಕೊಂಡು ಸಮಾಜ ಪರಿವರ್ತನೆಗಾಗಿ ಹಗಲಿರುಳು ಶ್ರಮಿಸಿದವರು, ಬಸವಭಿಮಾನಿಗಳಿಗೆ ತುಂಬಲಾರದ್ ನಸ್ಟ್ ಆಗಿದೆ ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಶಾಬಾದಿ, ಆರ್.ಜಿ.ಶೆಟಗಾರ,ಅಪ್ಪು ಕಣಕಿ,ರಾಜಕುಮಾರ ಕೋಟೆ, ಕಲ್ಯಾಣಪ್ಪ ಪಾಟೀಲ, ವೀರಣ್ಣ ಗೋಳೆದ, ಮನೋಜ ಜೀವಣಗಿ, ಶಿವಶರಣಪ್ಪ ದೇಗಾಂವ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಡಾ.ಮಹಾಂತೇಶ ಕುಂಬಾರ, ಜಗನ್ನಾಥ ರಾಚೋಟಿ, ಜಗದೀಶ ಪಾಟೀಲ, ರಾಜಶೇಖರ ಯಕ್ಕಂಚಿ, ಹನುಮಂತ ಗುಡ್ಡಾ, ರವಿ ಸಜ್ಜನ, ಬಸ್ಸಯ್ಯಸ್ವಾಮಿ ಹುಬ್ಬಳಿಮಠ, ಭಗವಂತರಾಯ ದಂಡಗುಂಡ, ಶರಣಗೌಡ ಪಾಟೀಲ, ಜ್ಯೋತಿ ಯಕ್ಕಂಚಿ, ವಿಜಯಲಕ್ಷ್ಮೀ ಗೊಬ್ಬೂರ, ಶೋಭಾ ಡಂಬಾಳ, ನಿರ್ಮಲಾ ಕೋಟೆ, ನಿಲಾಂಬಿಕಾ ಹಾಗೂ ಗಂಗಾಬಿಕಾ ಕೋಟೆ ಸೇರಿದಂತೆ ಇತರರು ಇದ್ದರು.