ಬುದ್ಧನ ವೈಚಾರಿಕ ಚಿಂತನೆ ಪ್ರಸ್ತುತ :ಹವಳಪ್ಪ
ಆಳಂದ:ಮೇ.24: ಜಗತ್ತಿಗೆ ಮಹಾತ್ಮ ಬುದ್ಧರು ನೀಡಿದ ವೈಚಾರಿಕತೆ ಚಿಂತನೆಗಳು ಸಮಾಜದಲ್ಲಿ ಸದಾ ಪ್ರಸ್ತುತವಾಗಿವೆ ಎಂದು ಶಿಕ್ಷಕ ಹವಳಪ್ಪ ಸೂಂಟನೂರು ತಿಳಿಸಿದರು.
ಪಟ್ಟಣದ ಸಂಬುದ್ಧ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬುದ್ಧನ ಅμÁ್ಟಂಗ ಮಾರ್ಗಗಳು ಮತ್ತು ಪಂಚಶೀಲಗಳು ಮಾನವನ ವ್ಯಕ್ತಿತ್ವ ವಿಕಸನದ ಸಾಧನಗಳಾಗಿವೆ, ಇವುಗಳನ್ನು ಎಲ್ಲರೂ ಜೀವನದಲ್ಲಿ ಆಚರಣೆಗೆ ತರವುದು ಅವಶ್ಯಕತೆ ಇದೆ ಎಂದರು.
ಕಾಲೇಜು ಪ್ರಾಚಾರ್ಯ ಸಂಜಯ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ ಭಾರತದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯಲ್ಲಿನ ಅಸಮಾನತೆ ,ಮೌಡ್ಯ, ಅಜ್ಞಾನವನ್ನು ಹೋಗಲಾಡಿಸುವ ಹೋರಾಟಕ್ಕೆ ಬುದ್ಧರ ಚಿಂತನೆ ಮೂಲವಾದವು, ಲೋಕಹಿತಕ್ಕಾಗಿ ಅಹಿಂಸೆಯ ಮಾರ್ಗವನ್ನು ಬುದ್ಧ ಅನುಸರಿಸಿದರು ಎಂದರು.
ವಿವೇಕಜ ವರ್ಧಿನಿ ಶಾಲಾ ಮುಖ್ಯಶಿಕ್ಷಕ ಅಪ್ಪಾಸಾಹೇಬ ತೀರ್ಥೆ, ವಿವಿಧ ವಿಭಾಗದ ಮುಖ್ಯಸ್ಥರಾದ ಬಾಬುರಾವ ಚಿಕಣಿ, ಜಗದೀಶ ಮುಲಗೆ, ಪ್ರಾಧ್ಯಾಪಕರಾದ ಮಹಾದೇವಿ ಪಾಟೀಲ್, ಧನರಾಜ ಪಾಟೀಲ, ಭೀಮಾಶಂಕರ ಅತನೂರೆ, ಮಹಾದೇವಿ ಬಿರಾದಾರ, ಸುರೇಶ ಪಾಟೀಲ, ಪ್ರಮೋಧ ಪಂಚಾಳ, ಉಮಾದೇವಿ ಜವಳಿ, ಲಕ್ಕಮ್ಮ ಗಂಧೆ, ಶಹಗುಪ್ತಾ ನಾಜ್, ಸನಾ ಬಂಗರಗಿ, ಶ್ರೀದೇವಿ ಸುತಾರ ಉಪಸ್ಥಿತರಿದ್ದರು, ಸಿದ್ದಾರ್ಥ ಹಸೂರೆ ನಿರೂಪಿಸಿದರು, ಸುಖಮುನಿ ಪಾಟೀಲ ವಂದಿಸಿದರು.