ದಶಕಗಳ ನಂತರ ಹುಲಿಕೆರೆ ಕೆರೆಗೆ ನೀರು.ಗ್ರಾಮಸ್ಥರಿಂದ ಗಂಗಾ ಪೂಜೆ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.24 :-  ತಾಲೂಕಿನ ಹುಲಿಕೆರೆ ಕೆರೆಯು  ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನರ ಜೀವನಾಡಿಯಾಗಿದ್ದು  ಬರದ ಛಾಯೆಯಿಂದ  ಕಳೆದ ಹದಿನೈದು ವರ್ಷಗಳಿಂದ ಕೆರೆಗೆ ನೀರು ಬಂದಿರಲಿಲ್ಲ ಕಳೆದ ವಾರ ಬಂದ ಮಳೆಯಿಂದಾಗಿ ದಶಕದ ನಂತರ ಕೆರೆಗೆ ನೀರು ಬಂದಿದ್ದು ಗ್ರಾಮದ ಮುಖಂಡರು, ದೈವಸ್ಥರು, ಜನಪ್ರತಿನಿಧಿಗಳು ಸೇರಿ ಶುಕ್ರವಾರ ಬೆಳಗ್ಗೆ ಯಿಂದ  ವಿಶೇಷ ಪೂಜೆ ಸಲ್ಲಿಸುವ ಮೂಲಕೆ ಕೆರೆಗೆ ಗಂಗಾ ಪೂಜೆ ಸಲ್ಲಿಸಿ, ನಂತರ ಬಾಗಿಣ ಅರ್ಪಣೆ ಮಾಡಿದರು. ಕಳಸ, ಹಾಗೂ ಕುಂಬಗಳನ್ನು  ಹಿಡಿದು ನೂರಾರು ಮಹಿಳೆಯರು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.