ನಾಯಿಗಳ ಹುಚ್ಚಾಟದ ದಾಳಿಗೆ, 20ಕ್ಕೂ ಹೆಚ್ಚು ಹಟ್ಟಿಯಲ್ಲಿದ್ದ ಕುರಿಗಳು ಬಲಿ.
ಕೂಡ್ಲಿಗಿ. ಮೇ.24  :-  ಕಳೆದ ಸಂಜೆ ತಾಲೂಕಿನ ಸಿದ್ದಾಪುರ ವಡ್ಡರಹಟ್ಟಿ ಹೊರವಲಯದ ಜಮೀನಿನಲ್ಲಿ ಹಾಕಿರುವ ಕುರಿ ಹಟ್ಟಿಯಲ್ಲಿನ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ನರಿ, ತೋಳ ಹಾಗೂ ಚಿರತೆ ದಾಳಿ ಮಾಡಿರಬಹುದು ಎಂದು ಹೇಳಲಾಗಿತ್ತು ಆದರೆ ಕುರಿಗಳ ಸಾವನ್ನು ಪರಿಶೀಲನೆ ನಡೆಸಿದ ಪಶುವೈದ್ಯರು ಇದು  ನಾಲ್ಕೈದು ನಾಯಿಗಳ ಹುಚ್ಚಾಟದ ಚಿನ್ನಾಟಕ್ಕೆ ಹಟ್ಟಿಯಲ್ಲಿದ್ದ ಐದಾರು ತಿಂಗಳ ಹಾಗೂ 6ತಿಂಗಳಿಗೂ ಹೆಚ್ಚಾಗಿರುವ 20ಕ್ಕೂ ಹೆಚ್ಚು ಕುರಿಗಳನ್ನು ನಾಯಿಗಳು ದಾಳಿ ನಡೆಸಿ ಬಲಿ ತೆಗೆದುಕೊಂಡಿವೆ.
ಹೌದು ಸಿದ್ದಾಪುರ ವಡ್ಡರಹಟ್ಟಿ ಗ್ರಾಮದ ಹೊರವಲಯದ ಜಮೀನಲ್ಲಿ ಕುರಿ ಹಟ್ಟಿಯನ್ನು ಹಾಕಲಾಗಿದ್ದು ಅದರಲ್ಲಿ ಹನುಮಂತಪ್ಪ, ಮಹಾಂತೇಶ, ಕಮಲಮ್ಮ ಹಾಗೂ ಮಲ್ಲೇಶ ಎಂಬುವವರ ಕುರಿಗಳು ಹಾಗೂ ಕುರಿಮರಿಗಳಿದ್ದು ನಿನ್ನೆ ಸಂಜೆ 6ಗಂಟೆ ಸುಮಾರಿಗೆ ಹಟ್ಟಿಯಲ್ಲಿನ ಕುರಿಗಳನ್ನು ಅಲ್ಲಿಯೇ ಬಿಟ್ಟು ಗ್ರಾಮಕ್ಕೆ ಅವರುಗಳು ಬಂದಾಗ ಇತ್ತ ಹಟ್ಟಿಯಲ್ಲಿ ಊರೊಳಗೆ ಇರುವ  ನಾಲ್ಕೈದು ನಾಯಿಗಳು ಹಟ್ಟಿ ಕಡೆಗೆ ಹೋಗಿ ಹುಚ್ಚಾಟದ ಚಿನ್ನಾಟ ಆಡುತ್ತ ಹಟ್ಟಿಯಲ್ಲಿನ ಕುರಿ ಹಾಗೂ ಕುರಿಮರಿಗಳ ಮೇಲೆ ದಾಳಿ ನಡೆಸಿ ಅಲ್ಲಲ್ಲಿ ಚರ್ಮ ಕಿತ್ತು  ಕಡಿದು ಎಳೆದಾಡಿ ಸುಮಾರು 20ಕ್ಕೂ ಹೆಚ್ಚು ಕುರಿಗಳನ್ನು ಬಲಿತೆಗೆದುಕೊಂಡಿವೆ ನಾಲ್ಕೈದು ಕುರಿಗಳನ್ನು ತೀವ್ರಗಾಯಗೊಳಿಸಿ ನಾಯಿಗಳು ಅಲ್ಲಿಂದ ಕಾಲ್ಕಿತ್ತಿವೆ. ಹಟ್ಟಿ ಬಂದು ನೋಡಿದ ಹನುಮಂತಪ್ಪ ಇತರರು ಗಾಬರಿಯಾಗಿ ಈ ಕುರಿಗಳ ಸಾವಿಗೆ ನರಿ, ತೋಳ ಹಾಗೂ ಚಿರತೆ ದಾಳಿ ಮಾಡಿರಬಹುದು ಎಂದು ಅಂದುಕೊಂಡಿದ್ದಾರೆ.
@12bc = ಪಶುವೈದ್ಯರ ಪರಿಶೀಲನೆ :
ಕುರಿಹಟ್ಟಿಯಲ್ಲಿ ನಡೆದ ಕುರಿಗಳ ಸಾವಿಗೆ ಕಾಡುಪ್ರಾಣಿಗಳ ದಾಳಿಯಲ್ಲ ಅದು ನಾಲ್ಕೈದು ನಾಯಿಗಳು ಸೇರಿ ನಡೆಸಿರುವ ದಾಳಿ ಎಂದು ಪಶುವೈದ್ಯಾಧಿಕಾರಿ ಡಾ. ಸುನೀಲ ತಿಳಿಸಿದ್ದಾರೆ.
@12bc = ಅರಣ್ಯಧಿಕಾರಿ ವಿವರ :
ಸಿದ್ದಾಪುರ ವಡ್ಡರಹಟ್ಟಿ ಕುರಿಹಟ್ಟಿಯಲ್ಲಿನ 20ಕ್ಕೂ ಹೆಚ್ಚು ಕುರಿಗಳ ಸಾವಿಗೆ ಕಾಡು ಪ್ರಾಣಿಗಳಾದ ನರಿ, ತೋಳ ಹಾಗೂ ಚಿರತೆ ದಾಳಿ ಮಾಡಿರಬಹುದು ಎಂದು ಹೇಳಿದ್ದರಿಂದ ಮಾಹಿತಿ ಆಧಾರಿಸಿ ಪರಿಶೀಲನೆ ನಡೆಸಿದ ಗುಡೇಕೋಟೆ ವಲಯದ ಅರಣ್ಯಧಿಕಾರಿ ಮಂಜುನಾಥ ತಿಳಿಸುವಂತೆ ಕಾಡು ಪ್ರಾಣಿಗಳು ಅದರಲ್ಲಿ ನರಿ ತೋಳ ಚಿರತೆಗಳು ಈ ಭಾಗದಲ್ಲಿ ಇಲ್ಲಾ ಆದರೂ ಒಂದೆರಡು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆ ಪ್ರಾಣಿಗಳನ್ನು ಹೊತ್ತುಕೊಂಡು ಹೋಗುತ್ತವೆ ಅಲ್ಲಿಯೇ ಇದ್ದು ಈ ರೀತಿಯ ದಾಂದಲೇ ಮಾಡಿ ವಿಚಿತ್ರವಾಗಿ  ಕುರಿಗಳನ್ನು  ಕಡಿದು ಬಿಡುವುದಿಲ್ಲ ಎಂದು ಅರಣ್ಯಧಿಕಾರಿ ಮಂಜುನಾಥ ತಿಳಿಸಿದರು.
@12bc = ಪರಿಹಾರ :
ಕುರಿಗಳ ಸಾವಿಗೆ ಪರಿಹಾರ ಕೊಡಲು ಹನುಮಂತಪ್ಪ ಹಾಗೂ ಇತರರು ಮನವಿ ಮಾಡುವಂತೆ ಕುರಿಗಳ ಸಾವಿಗೆ ಪರಿಹಾರ ದೊರೆಯಲಿದ್ದು 6ತಿಂಗಳ ಮೇಲ್ಪಟ್ಟ ಕುರಿಗಳು ಸತ್ತರೆ ಒಂದಕ್ಕೆ 5ಸಾವಿರದಂತೆ ಪರಿಹಾರ ಹಾಗೂ 6ತಿಂಗಳ ಒಳಗಿರುವ ಕುರಿಗಳು ಸತ್ತರೆ ಮೂರುವರೆ ಸಾವಿರ ರೂ ಪರಿಹಾರ ನೀಡಬಹುದಾಗಿದ್ದು 20ಕ್ಕೂ ಹೆಚ್ಚು ಕುರಿಗಳ ಮತ್ತು  ಮಾಲೀಕರ ಮಾಹಿತಿ ಪಡೆದು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕರಿಗೆ ವರದಿ ಸಲ್ಲಿಸುವುದಾಗಿ ಡಾ ಸುನೀಲಕುಮಾರ ತಿಳಿಸಿದರು.