ತಂತ್ರಜ್ಞಾನ ಕೇಂದ್ರ ಸ್ಥಾಪನೆಯಿಂದ ಕಲಿಕೆಗೆ ಪ್ರೋತ್ಸಾಹ
ಕಲಬುರಗಿ:ಸೆ.23: ವೈಜ್ಞಾನಿಕ ಕ್ಷೇತ್ರದಲ್ಲಿನ ಸಂಶೋಧನೆಯ ಅವಿಷ್ಕಾರಗಳಿಂದ ಹೊಸ ಆಲೋಚನೆಗಳ ಕಾರ್ಯರೂಪಕ್ಕೆ ತರಲು ಸಾಧ್ಯವಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಿಂದ ಸಂಶೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕಲಿಕೆಗೆ ಪ್ರೋತ್ಸಾಹ ಸಿಗಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಮಂಗಳೂರಿನ ನೆಟ್ಟಿ ವಿಶ್ವವಿದ್ಯಾಲಯದ ಡಿಎಸಟಿ ಸೆಂಟರ ಜಂಟಿಯಾಗಿ ಮಂಥನ ಸಭಾಂಗಣದಲ್ಲಿ ಆಯೋಜಿಸಿದ ವಿಜ್ಞಾನ ಶಿಕ್ಷಕರಿಗಾಗಿ “ಎನೇಬ್ಲಿಂಗ್ ಟ್ರಾನ್ಸ್ಲೇಷನ್ ಆಫ್ ರಿಸರ್ಚ್ ಇನಟು ಟೆಕ್ನಾಲಜಿಸ್” ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಯಿಂದ ತಂತ್ರಜ್ಞಾನದ ಕಲಿಕೆಗೆ ಪ್ರೋತ್ಸಾಹ ದೊರೆತರೆ ಕೈಗಾರಿಕೆಗಳು ಮತ್ತು ಸ್ಥಳೀಯ ಉದ್ಯಮಗಳಿಗೆ ತಂತ್ರಜ್ಞಾನ ವರವಾಗಲಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿನ ಅವಿಷ್ಕಾರದ ಉಪಯೋಗವನ್ನು ವಿವಿಧ ವೃತ್ತಿ ಕ್ಷೇತ್ರಗಳ ಹೂಡಿಕೆದಾರರು, ಮಧ್ಯಸ್ಥಗಾರರು, ಶೈಕ್ಷಣಿಕ ನೇತಾರರೊಂದಿಗೆ ಸಂಪರ್ಕ ಸಾಧಿಸಿ ಸಂಶೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ನಾವೀನ್ಯ ಆಲೋಚನೆ ಜೊತೆಗೆ ತಂತ್ರಜ್ಞಾನ ಕೌಶಲ್ಯದಿಂದ ಪ್ರಗತಿ ಸಾಧಿಸಬಹುದು ಎಂದರು.
ಎನ್‍ಐಐಟಿಇ ವಿಶ್ವವಿದ್ಯಾಲಯದ ಸಲಹೆಗಾರ ಪೆÇ್ರ. ಇದ್ಯಾ ಕರುಣಾಸಾಗರ ಮುಖ್ಯ ಅತಿಥಿಯಾಗಿ ಮಾತನಾಡಿ ಪ್ರಸ್ತುತ ವೈಜ್ಞಾನಿಕ ಕ್ಷೇತ್ರಗಳಲ್ಲಿ ಆಗುತ್ತಿರುವ ಸಂಶೋಧನೆಗಳಿಂದ ಪರಿಸರ ಮತ್ತು ಜೀವಸಂಕುಲಗಳ ಸಂರಕ್ಷಣೆ ಸಾಧ್ಯವಿದೆ. ತಂತ್ರಜ್ಞಾನದಿಂದ ನೆರವಿನಿಂಧ ಜೀವ ಸಂಕುಲದ ಆರೋಗ್ಯ ರಕ್ಷಣೆ ಸಿಗಲಿದೆ. ವಿಜ್ಞಾನ ಶಿಕ್ಷಕರು ತಂತ್ರಜ್ಞಾನ ಬಳಕೆಯೊಂದಿಗೆ ಯುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಿ ಸಂಶೋಧನೆಗೆ ಉತ್ತೇಜಿಸಬೇಕು. ಭಾರತದಲ್ಲಿ ಹೆಚ್ಚು ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಆರ್ & ಡಿ ಕೇಂದ್ರಗಳನ್ನು ಸ್ಥಾಪಿಸುವುದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಹೂಡಿಕೆಯಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ ಎಂದರು.
ನೆಟ್ಟಿ ವಿಶ್ವವಿದ್ಯಾಲಯದ ಪೆÇ್ರಜೆಕ್ಟ್ ಅಂಡ್ ಡಿಎಸ್‍ಟಿಟಿಇಸಿ ನಿರ್ದೇಶಕ ಡಾ. ಇಂದ್ರಾಣಿ ಕರುಣಾಸಾಗರ ಮಾತನಾಡಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ನಡೆದಿರುವ ಹೊಸ ಅಧ್ಯಯನಗಳಿಂದ ದೇಶದಲ್ಲಿ ವಿವಿಧ ಕ್ಷೇತ್ರಗಳ ಬೆಳವಣಿಗೆ ಕಾಣಬಹುದು. ಅದರ ಜೊತೆಗೆ ಸರ್ಕಾರ ಮತ್ತು ಸರ್ಕಾರೇತರ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಪ್ರೋತ್ಸಾಹಧನವನ್ನು ಯೋಜನೆ ಮುಖಾಂತರ ಪಡೆಯವ ಮೂಲಕ ಸಂಶೋಧನೆ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಇದರಿಂದ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಉತ್ತೇಜನ ಮತ್ತು ಪ್ರೋತ್ಸಾಹ ಸಿಗಲಿದೆ ಎಂದರು. ಕಾರ್ಯಕ್ರಮದಲ್ಲಿ ಸಂಯೋಜಕ ಪೆÇ್ರ. ಆರ್. ಎಲ್. ರಾಯಬಾಗಕರ್ ಹಾಗೂ ಉಪ ಸಂಯೋಜಕ ಪೆÇ್ರ. ಕೆ. ವಿಜಯಕುಮಾರ್ ಉಪಸ್ಥಿತರಿದ್ದರು.
ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳು, ಸಂಘ ಸಂಸ್ಥೆಗಳ ಮತ್ತು ಉದ್ಯಮಗಳ ಸಹಭಾಗಿತ್ವದಿಂದ ಹೊಸ ತಂತ್ರಜ್ಞಾನ ವಿಸ್ತರಣೆಯಾಗಲಿದೆ. ಇದರಿಂದ ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಜ್ಞಾನದ ಆಲೋಚನೆ, ಪ್ರಾಯೋಗಿಕ ಚಿಂತನೆ, ತಂತ್ರಜ್ಞಾನ ಪರಿಣಿತಿ ಸಾಧ್ಯವಿದೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ಜೀವ ಸಂಕುಲ ಸಂರಕ್ಷಣೆ ಮತ್ತು ಮಾನವ ಕಲ್ಯಾಣ ಅಭಿವೃದ್ಧಿಯಾಗಲಿದೆ.