ರಾಜಕಾರಣ ಇಲ್ಲಿ ಮಾಡಕೂಡದು ಎನಿದ್ದರೂ ದ್ವಾರಬಾಗಿಲ್ಲ ಹೊರಗೆ ಇದು ರೈತರ ಆಸ್ತಿ:ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ:ಸೆ.೨೪:ಶ್ರೀಭೀಮಾಶAಕರ ಸಹಕಾರಿ ಸಕ್ಕರೆ ಕಾರ್ಖಾನೆ ೧೬೫೯೬ ಜನ ರೈತರ ಆಸ್ತಿಯಾಗಿದ್ದು ರಾಜಕಾರಣ ಈ ಸ್ಥಳದಲ್ಲಿ ಯಾರೂ ಮಾಡಬೇಡಿ ರಾಜಕಾರಣ ಎನ್ನಿದ್ದರೂ ದ್ವಾರ ಬಾಗಿಲು ಹೋರಗೆ ನಡೆಯಲಿ ರಾಜಕಾರಣದಲ್ಲಿ ಯಾರಿಗಾದರೂ ನನ್ನ ಮೇಲೆ ದ್ವೇಷ ,ಅಸೋಯ ಇದ್ದರೆ ಚುನಾವಣೆ ಬಂದಾಗ ಜನರು ತೀರ್ಮಾನಿಸುತ್ತಾರೆ ಎಂದು ಶಾಸಕ ಹಾಗೂ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ, ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಮರಗೂರ ೬ನೇ ವರ್ಷದ ವಾಷೀಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ೪೦ ವರ್ಷ ಸುಧೀರ್ಘ ರಾಷ್ಟಿçÃಯ ಹೆದ್ದಾರಿಯಲ್ಲಿಬಾರಾಕಮಾನಿನಂತೆ ಕಂಗೋಳಿಸುತಿದ್ದ ಶಾಪ್ ಗ್ರಹಸ್ಥವಾದ ಈ ಕಾರ್ಖಾನೆ ೨೦೧೩ರಲ್ಲಿ ಶಾಸಕನಾದ ನಂತರ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಹಾಗೂ ಅನೇಕ ಸಚಿವರ ಸಹಕಾರದಿಂದ ಪುರ್ನಜೀವನ ಕಂಡಿದೆ. ಕರ್ನಾಟಕದ ಇತಿಹಾದಲ್ಲಿಯೇ ಸಹಕಾರ ರಂಗಕ್ಕೆ ಅತೀ ಹೆಚ್ಚು ಹಣಕಾಸಿನ ನೆರೆವು ನೀಡಿದ ಈ ರಾಜ್ಯ ಕಂಡ ಅಪರೂಪದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು. ಯಾರು ಸಹಾಯ- ಸಹಕಾರ ಮಾಡಿದ್ದಾರೆ ಅವರನ್ನು ಅಭಿನಂದಿಸದಿದ್ದರೆ ಮನುಷ್ಯತ್ವ ಅನ್ನುವುದಿಲ್ಲ.
ರೈತ ದೇಶದ ಬೆನ್ನಲುಬು ಇವರ ಬದುಕಿಗೆ ಆಧಾರವಾಗಿ ಈ ಕಾರ್ಖಾನೆ ಕಟ್ಟಬೇಕು ಎಂಬ ನಾಕರೇ ಹಾಗೂ ನಮ್ಮ ಅನೇಕ ಪೂರ್ವಜರ ಕನಸಾಗಿತ್ತು ಇಂದು ಸಹಕಾರಗೊಂಡು ೬ನೇ ವರ್ಷಕ್ಕೆ ಪಾದಾರ್ಪಣೆಯಾಗಿ ಇಂದು ಕಾರ್ಖಾನೆ ರೈತರ ಆಸ್ತಿಯಾಗಿ ಆಕಾಶೇದತ್ತರಕ್ಕೆ ಬೆಳೆದು ನಿಂತಿದೆ.
ಶ್ರೀಭೀಮಾಶಂಕರ ಹೆಸರಿನಿಂದ ಸ್ಥಾಪಿಸಿದ ಈ ಕಾರ್ಖಾನೆಯಲ್ಲಿ ಒಂದೇ ನೈಯಾಪೈಸ್ ಲೋಪವಾಗಿದ್ದರೆ ದೇವರೆ ನೋಡಿಕೊಳ್ಳಲಿ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದೆ ಇಲ್ಲಿಯಾವದೇ ಮೋಸ ,ವಂಚನೆ ರೈತರ ಜೀವನ ಜೊತೆ ಚೆಲ್ಲಾಟ ಆಡಿದರೆ ಭಗವಂತನೇ ನೋಡಿಕೊಳ್ಳಲಿ, ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಕಾರ್ಖಾನೆ ಸ್ಥಾಪಿಸಲಾಗಿದೆ ವಿಹನಃ ಲಾಭಕ್ಕಾಗಿ ಅಲ್ಲ. ಇಲ್ಲಿಯವರೆಗೂ ಸರಕಾರ ಕಬ್ಬಿನ ಬೆಲೆ ಘೋಷಣೆ ಮಾಡಿದಕ್ಕಿಂತ ಹೆಚ್ಚವರಿಯಾಗಿ ಕಬ್ಬಿನ ಬೆಲೆ ರೈತರಿಗೆ ನೀಡಲಾಗಿದೆ.
ಈ ಭಾಗದಲ್ಲಿ ಕಬ್ಬಿನ ಇಳುವರಿ ಸರಿಯಾಗಿ ಬರುವದಿಲ್ಲ ಮ್ಯಾಚುರೀಟಿ ಕಬ್ಬು ಕಳಿಸದೆ ಇರುವುದು ಒಂದು ಕಾರಣ ಇರಬಹುದು . ಮಹಾರಾಷ್ಟç ಕಬ್ಬಿಗೆ ೧೩ ೧/೨ ಹೆಚ್ಚುವರಿ ರೀಕ್ವರಿ ಬರುತ್ತದೆ. ಎಲ್ಲಿ ರೀಕ್ವರಿ ಬರುತ್ತದೆ ಅಲ್ಲಿ ಆದಾಯ ಹೆಚ್ಚು ಹೀಗಾಗಿ ಕಾರ್ಖಾನೆ ಅಭಿವೃದ್ದಿ ಹೊಂದಲು ಸಾಧ್ಯೆ.
ಸಹಕಾರಿ ಸಕ್ಕರೆ ಕಾರ್ಖಾನೆ ಕೋ-ಆಪ್‌ರೇಟೀವು ಇರುವದರಿಂದ್ದ ಇಲ್ಲಿ ಸತ್ಯ,ನ್ಯಾಯ ,ನೀತಿ ಪ್ರಮಾಣಿಕತೆ ಇರಬೇಕು ನಾನು ಪರಿಶುದ್ದವಾಗಿ ಕಾರ್ಖಾನೆ ನಡೆಸಿರುವೆ. ಈ ಭಾಗದ ಜನರು ಹೃದಯವಂತರು ಎಂದು ನಾನು ಪದೆ ಪದೆ ವ್ಯಾಖ್ಯಾನಿಸುವ ಉದ್ದೇಶ ಕಾರ್ಖಾನೆ ಚುನಾವಣೆ ನಡೆದಾಗ ಯಾರು ನ್ಯಾಯ ,ನೀತಿವಂತರು ಈ ಕಾರ್ಖಾನೆ ನಡೆಸುವ ಸಾಮರ್ಥ್ಯ ಯಾರಲ್ಲಿದೆ ಎಂಬ ಜಾಣತನದಿಂದ ಮತ್ತೆ ಹಿಂದಿನ ಪ್ಯಾನಲ್‌ಗೆ ಆಯ್ಕೆ ಮಾಡಿರುವ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ.ಮುಂಬರುವ ದಿನಗಳಲ್ಲಿ ಕೂಡಾ ಷೇರುದಾರರು ಒಳ್ಳೆಯವರ ಪರವಾಗಿ ಇದ್ದು ಕಾರ್ಖಾನೆ ಈ ಭಾಗದಲ್ಲಿ ಉಳಿಸಬೇಕು ಎಂದರು.
ಕಾರ್ಖಾನೆ ಲಾಭದಲ್ಲಿ ಇಲ್ಲ ರೈತರ ಕಬ್ಬಿನ ಬಿಲ್ಲು ಹಾಗೂ ಬ್ಯಾಂಕಿನ ಸಾಲ ಪ್ರತಿ ವರ್ಷ ತುಂಬಲಾಗುತ್ತಿದೆ ಇದರಿಂದ್ದ ಸಾಕಷ್ಟು ತೊಂದರೆಯಾಗುತ್ತಿದೆ. ಸುಮಾರು ೫ ಲಕ್ಷದವರೆಗೆ ಕಬ್ಬು ಕ್ರಸ್ ಮಾಡಿದರೆ ಮಾತ್ರ ಸರಿ ಸರಿದೂಗಿಸಲು ಸಾಧ್ಯ .ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರು ಹೆಚ್ಚುವರಿಯಾಗಿ ಕಬ್ಬು ಕಳಿಸಿ ಈ ಕಾರ್ಖಾನೆ ನಿಮ್ಮ ಆಸ್ತಿ ಇದು ಉಳಿಸುವ ಜವಾಬ್ದಾರಿ ನಿಮ್ಮೇಲ್ಲರ ಮೇಲಿದೆ ಎಂದು ರೈತರಿಗೆ ಮನವಿ ಮಾಡಿದರು.
ಬಾಕ್ಸ- ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಯೋಜನೆ ಹಿಂದಿನ ಸರಕಾರ ಚಾಲನೆ ನೀಡಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ ಶಿವುಕುಮಾರ ಈ ಭಾಗದ ರೈತ ಬಹುದಿನಗಳ ಕನಸು ನನಸಾಗಿಸಲು ಸಮಗ್ರ ನೀರಾವರಿಗಾಗಿ ೩ ಸಾವಿರ ಕೋಟಿ ಅನುಧಾನ ನೀಡಿದ್ದಾರೆ. ಬಹುತೇಕ ಪ್ರದೇಶ ನೀರಾವರಿಯಾಗಿ ರೈತರು ಕಬ್ಬು ಬೆಳೆದು ಮುಂದಿನ ದಿನಗಳಲ್ಲಿ ಅವರ ಬಾಳು ಬಂಗಾರವಾಗುತ್ತದೆ ಇಡೀ ಕರ್ನಾಟಕ ಸರಕಾರ ಈ ಭಾಗದ ರೈತರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದೆ.
ಶಾಸಕ ಹಾಗೂ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ.
ಈ ಕಾರ್ಖಾನೆ ತರುವದೊಂದೆ ನಿಮ್ಮ ಕೆಲಸವಲ್ಲ ಹಾನಿಯಾಗುತ್ತಿದೆ ಎಂದು ಕೈ ಚೇಲಿ ಕುಳಿತಕೊಳ್ಳಬೇಡಿ. ಕಾರ್ಖಾನೆ ತರುವಾಗ ಚಾಲೇಂಜ್ ಮಾಡಿದಂತೆ ಉಳಿಸಲು ಚಾಲೇಂಜ್‌ನ್ನಾಗಿ ಸ್ವೀಕರಿಸಿ ನೀವು ಶಾಸಕರು ನಿಮ್ಮಂತಹ ಬುದ್ದಿವಂತರು ಹೀಗೆ ಮಾತನಾಡಿದರೆ ಹೇಗೆ ನೀವು ಯಾವ ಇಲಖೆಯಿಂದಾದರೂ ಅನುಧಾನ ತರುವ ಸಾಮರ್ಥ್ಯ ನಿಮ್ಮಲ್ಲಿದೆ ಬೇರೆಯವರಿಂದ ಕಾರ್ಖಾನೆ ಹಾಳು ಆಗುತ್ತದೆ ನೀವೇ ಕಟ್ಟಿ ನಿಮ್ಮಿಂದಲೇ ಹಾಳು ಮಾಡಬೇಡಿ ದಯಮಾಡಿ ಇದನ್ನು ಉಳಿಸುವ ಕರ್ತವ್ಯ ನಿಮ್ಮ ಮೇಲಿದೆ. ನಿಮ್ಮ ಜೊತೆ ಸದಾ ರೈತರು ,ಷೇರುದಾ ಮತಕ್ಷೇತ್ರದ ಜನರು ಇರುತ್ತಾರೆ ಎಂದು ಸಹಕಾರಿ ಶ್ರೀಮಂತ ಇಂಡಿ ಮಾತನಾಡಿದರು.
ರೈತ ಮುಖಂಡ ಗುರುನಾಥ ಬಗಲಿ ಮಾತನಾಡಿದರು.
ನಿರ್ದೇಶಕ ಎಂ.ಆರ್ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ನಿರ್ದೇಶಕರಾದ ಎಂ.ಆರ್ ಪಾಟೀಲ, ಬಿ.ಎಂ ಕೋರೆ, ಸಿದ್ದಣ್ಣಾ ಬಿರಾದಾರ, ಜೆಟ್ಟೆಪ್ಪ ರವಳಿ, ವಿಶ್ವನಾಥ ಬಿರಾದಾರ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ರೇವಗೊಂಡಪ್ಪಗೌಡ ಪಾಟೀಲ, ಬಸವರಾಜ ಧನಶ್ರೀ, ಲಲೀತಾ ನಡಗೇರಿ, ದುಂಡಪ್ಪ ಖೇಡ, ಸರೋಜನಿ ಪಾಟೀಲ, ಮ್ಯಾನೇಜಿಂಗ್ ಡ್ಯಾರೇಕ್ಟರ್ ಭಾಗ್ಯಶ್ರೀ.ಎಸ್.ಕೆ ,ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ವೇದಿಕೆಯಲ್ಲಿದ್ದರು.
ಈ ಕಾರ್ಖಾನೆ ತರುವದೊಂದೆ ನಿಮ್ಮ ಕೆಲಸವಲ್ಲ ಹಾನಿಯಾಗುತ್ತಿದೆ ಎಂದು ಕೈ ಚೇಲಿ ಕುಳಿತಕೊಳ್ಳಬೇಡಿ. ಕಾರ್ಖಾನೆ ತರುವಾಗ ಚಾಲೇಂಜ್ ಮಾಡಿದಂತೆ ಉಳಿಸಲು ಚಾಲೇಂಜ್‌ನ್ನಾಗಿ ಸ್ವೀಕರಿಸಿ ನೀವು ಶಾಸಕರು ನಿಮ್ಮಂತಹ ಬುದ್ದಿವಂತರು ಹೀಗೆ ಮಾತನಾಡಿದರೆ ಹೇಗೆ ನೀವು ಯಾವ ಇಲಖೆಯಿಂದಾದರೂ ಅನುಧಾನ ತರುವ ಸಾಮರ್ಥ್ಯ ನಿಮ್ಮಲ್ಲಿದೆ ಬೇರೆಯವರಿಂದ ಕಾರ್ಖಾನೆ ಹಾಳು ಆಗುತ್ತದೆ ನೀವೇ ಕಟ್ಟಿ ನಿಮ್ಮಿಂದಲೇ ಹಾಳು ಮಾಡಬೇಡಿ ದಯಮಾಡಿ ಇದನ್ನು ಉಳಿಸುವ ಕರ್ತವ್ಯ ನಿಮ್ಮ ಮೇಲಿದೆ. ನಿಮ್ಮ ಜೊತೆ ಸದಾ ರೈತರು ,ಷೇರುದಾ ಮತಕ್ಷೇತ್ರದ ಜನರು ಇರುತ್ತಾರೆ ಎಂದು ಸಹಕಾರಿ ಶ್ರೀಮಂತ ಇಂಡಿ ಮಾತನಾಡಿದರು.