ವಾಲಿಬಾಲ್ ಜಿಲ್ಲಾಮಟ್ಟಕ್ಕೆ ಆಯ್ಕೆ
ಇಂಡಿ:ಸೆ.೨೪: ಶ್ರೀ ಶಿವಯೋಗೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಾಲೋಟಗಿ ವ್ಹಾಲಿಬಾಲ್ ಆಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕಾ ಕ್ರೀಡಾಂಗಣದಲ್ಲಿ ನಡೇದ ಕ್ರೀಡಾಕೂಟದಲ್ಲಿ ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀಶಿವಯೋಗೇಶ್ವರ ಹಿರಿಯ ಪ್ರಾಥಮಿ ಶಾಲೆಯ ವಿಧ್ಯಾರ್ಥಿನಿಯರು
ವ್ಹಾಲಿಬಾಲ್ ಆಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕುಮಾರಿ ಅಂಕಿತ ಅಗ್ನಿ ವಯಕ್ತಿಕ ೪ನೂರು ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಧ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಮುಖ್ಯಗುರುಗಳು ಶಾಲಾ ಶಿಕ್ಷಕರು ಸಿಬ್ಬಂದ್ದಿ ಅಭಿನಂದನೆ ಸಲ್ಲಿಸಿದರು.