ಕೊಲ್ಹಾರ-ಮನಗೂಳಿ ಬಸ್‌ಗೆ ಚಾಲನೆ
ಕೊಲ್ಹಾರ:ಸೆ.೨೪:ತಾಲೂಕಿನ ಮಸೂತಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮಳಿಗೆಗಳನ್ನು ಸಚಿವರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶಿವಾನಂದ ಪಾಟೀಲ ಉದ್ಘಾಟಿಸಿದರು.
ಜೊತೆಗೆ ಕೊಲ್ಹಾರ-ಮಸೂತಿ-ಮನಗೂಳಿ- ವಿಜಯಪುರ ನೂತನ ಬಸ್ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು, ವಿವಿದೊದ್ದೇಶ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಕೆ. ವಿ.ಕುಲಕರ್ಣಿ,ತಾನಾಜಿ ನಾಗರಾಳ,ಕಲ್ಲು ದೇಸಾಯಿ,ರಾಜು ಬಿಸ್ಟಗೊಂಡ, ಸಿ ಪಿ ಪಾಟೀಲ,ಬಿ ಎ ಪಾಟೀಲ,ಬಿ ಕೆ ಸಾಲಹಳ್ಳಿ,ಎಸ್ ಎಸ್ ಗರಸಂಗಿ,ಪ್ರಕಾಶ ಕಾಗಲ್, ಸಂತೋಷ ಗಣಾಚಾರಿ,ಸಂತೋಷ ಚನಗೊಂಡ ಎಸ್ ಎಸ್ ಗೌರಿ ಹಾಗೂ ಸಹಕಾರಿ ಇಲಾಖೆಯ ಶ್ರೀಶೈಲ ಹಂಗರಗಿ, ಕಾರ್ಯ ನಿರ್ವಹಣಾಧಿಕಾರಿ ಮಾರುತಿ ಗಾವಡೆ ಕೃಷಿ ಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷ ನಂದಬಸಪ್ಪ ಬರಗಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಖೋ ಖೋ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿ ಸನ್ಮಾನಿಸಿದರು.