ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಶಾಂತಿನಿಕೇತನ ಶಾಲಾ ಮಕ್ಕಳು ಆಯ್ಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೪:ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ನಗರ ವಲಯ ವಿಜಯಪುರ, ಇವರ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನ ಪ್ರಾಥಮಿಕÀ ಮತ್ತು ಪ್ರೌಢ ಶಾಲೆಗಳ ಬಾಲಕ/ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ವಿಶಿಷ್ಟ ಸಾಧನೆಯನ್ನು ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೧೪ ವರ್ಷ ವಯೋಮಾನದ ಬಾಲಕಿಯರ ಚೆಸ್ ವಿಭಾಗದಲ್ಲಿ ಅಕ್ಷರಾ ಬೋರ್ದಂಡೆ ಪ್ರಥಮ ಸ್ಥಾನವನ್ನು, ೧೭ ವರ್ಷದ ವಯೋಮಾನದ ಒಳಗಿನ ಬಾಲಕಿಯರ ಚೆಸ್ ವಿಭಾಗದಲ್ಲಿ ಶ್ರೇಯಾ ಶಿವಶರಣ, ಸಂಸ್ಕೃತಿ ತೋಸ್ನಿವಾಲ ಪ್ರಥಮ ಸ್ಥಾನವನ್ನು ಹಾಗೂ ೧೭ ವರ್ಷದ ವಯೋಮಾನದ ಒಳಗಿನ ಬಾಲಕರ ಚೆಸ್ ವಿಭಾಗದಲ್ಲಿ ಮೊಹಮ್ಮದ ಅಜರ್ ಅತ್ತಾರ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಈ ಕ್ರೀಡಾಕೂಟದಲ್ಲಿ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ, ಚೇರಮನ್ ಡಾ. ಸುರೇಶ ಬಿರಾದಾರ, ನಿರ್ದೇಶಕಿ ದಿವ್ಯಾ ಬಿರಾದಾರ ಪ್ರಾಚಾಂiÀið ಶ್ರೀಧರ ಕುರಬೇಟ, ದೈಹಿಕ ಶಿಕ್ಷಕÀ ಎ.ಎಚ್. ಸಗರ, ಕಿರಣ ರಾಠೋಡ, ಪ್ರವೀಣ ಗೆಣ್ಣೂರ ಅಭಿನಂದನೆಯನ್ನು ಸಲ್ಲಿಸಿದ್ದಾರೆ.