ಅಟಲ್‌ಬಿಹಾರಿ ವಾಜಪೇಯಿ ಶಾಲೆಯ ವಿಧ್ಯಾರ್ಥಿಗಳ ಅಮೋಘ ಸಾಧನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೪ :ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಒಳ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರದ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ಮಕ್ಕಳು ಭಾಗವಹಿಸಿ ಅಭೂತ ಪೂರ್ವ ಸಾಧನೆ ಮಾಡಿದ್ದಾರೆ.
ಮುದ್ರಾ ಬಾಗಲಕೋಟ, ಸುಚಿತ ಗುಮಡಿ, ಸಾನಿಕಾ ಗುಣದಾಳ, ಆದ್ಯಾ ಸೋನಾರ, ವಿರೇಶ ಇಳಜೇರಿ, ನಂದೀಶ ಮೇಡಿದಾರ, ಅಬುಸುಫಿಯಾನ ಗುಡುಗುಂಟಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ
ಆರಾದ್ಯಾ ಕಲ್ಯಾಣಿ, ಸೋನಾಲಿ ಗುಣದಾಳ, ಸಮನ್ವಿತಾ ಪೂಜಾರಿ, ಸ್ವಾತಿ ತಳವಾರ, ಶ್ರೇಯಸ್ ಸಿಂಧೆ, ಯಶರಾಜ ಬಜಂತ್ರಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಮಕ್ಕಳ ಸಾಧನೆಯನ್ನು ಕಂಡು ಶ್ರೀ ಸಿದ್ದೇಶ್ವರ ಸಂಸ್ಥೆಯ ಅದ್ಯಕ್ಷÀ ಹಾಗೂ ವಿಜಯಪುರದ ಶಾಸಕ ಬಸನಗೌಡ ಪಾಟೀಲ ( ಯತ್ನಾಳ), ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಸಿದ್ದೇಶ್ವರ ಸಂಸ್ಥೆಯ ಶಾಲಾ ನಾಮನಿರ್ದೇಶಿತ ಅಧ್ಯಕ್ಷ ಬಸವರಾಜ ಸುಗೂರ, ಸಂಸ್ಥೆಯ ಗೌರವಾನ್ವಿತ ಹಣಕಾಸು ಕಾರ್ಯದರ್ಶಿ ಸದಾನಂದ ದೇಸಾಯಿ ,ಜಂಟಿ ಕಾರ್ಯದರ್ಶಿ ಎಮ್.ಎಮ್ ಸಜ್ಜನ, ಸಂಸ್ಥೆಯ ಕೋಶಾಧಿಕಾರಿ ಶಿವಾನಂದ ನೀಲಾ ಮತ್ತು ಶಾಲಾ ಆಡಳಿತ ಅಧಿಕಾರಿ ಡಾ. ಎಚ್ ವೆಂಕಟೇಶ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಐಶ್ವರ್ಯ ಸಂಗಮ್, ಕರಾಟೆ ತರಬೇತುದಾರ ಪ್ರವೀಣಕುಮಾರ ವಠಾರ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.