ಕೆಎಂಇಆರ್ಸಿ ಆಧ್ಯಕ್ಷ ಸ್ಥಾನದಿಂದ ಶಾಲಿನಿ ರಜನೀಶ್ ಬದಲಾವಣೆಗೆ  ಎಸ್.ಆರ್.ಹಿರೇಮಠ ಆಗ್ರಹ.  ‌
ಸಂಜೆವಾಣಿ ವಾರ್ತೆ
ಹೊಸಪೇಟೆ:ಮೇ,24-   ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರನ್ನು ಕೆಎಂಇಆರ್ಸಿ ಅಧ್ಯಕ್ಷ ಸ್ಥಾನದಿಂದ  ಬದಲಾಯಿಸಲು ಜನ ಸಂಗ್ರಾಮ ಪರಿಷತ್ ಸೇರಿದಂತೆ ಸಮಾನ ಮನಸ್ಕ ಸಂಘಟನೆಗಳು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೀವೆ ಎಂದು ಎಸ್.ಆರ್. ಹಿರೇಮಠ ತಿಳಿಸಿದರು.
ಈ ಕುರಿತು ಹೊಸಪೇಟೆಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಗಣಿ ಭಾದಿತ ಪ್ರದೇಶದಲ್ಲಿ ಕೆಎಂಇಆರ್ಸಿ ಪರಿಸರ ಪುನಶ್ಚೇತನ ಹಾಗೂ ಜನಜೀವನ ಪುನರುಜ್ಜೀವನಕ್ಕೆ ಕೈಗೊಳ್ಳಬೇಕಾದ ಕಾರ್ಯಗಳನ್ನು ತಮ್ಮ ಮನಬಂದಂತೆ, ಹಾಗೂ ನ್ಯಾಯಾಲಯದ ಆದೇಶಗಳನ್ನೇ ಗಾಳಿಗೆ ತೂರಿ ಹಣ ಖರ್ಚು ಮಾಡಲು ಮುಂದಾಗಿರುವುದು ಬೆಳೆಕಿಗೆ ಬಂದಿವೆ ಎಂದರು. ಅಷ್ಟೇ ಅಲ್ಲದೆ ಇರುವ ಅಧಿಕಾರಿಗಳಿಗೆ ಕಿರುಕುಳ ನೀಡಿ ತಮ್ಮ ಮನ ಬಂದಂತೆ ಯೋಜನೆಗಳಿಗೆ ಅನುಮತಿಸುವಂತೆ ಒತ್ತಡ ಹೇರುತ್ತಿದ್ದಾರೆ ಅದಕ್ಕಾಗಿ ಕೆಲವರು ಕೆಲಸ ಬಿಟ್ಟ ಹೋಗಲು ಹಾಗೂ ಕೆಲವರು ಕಡ್ಡಾಯ ರಜೆಗಳಲ್ಲಿ ತೆರಳುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು ಅಲ್ಲದೆ ಕೆಎಂಆರ್ಸಿ ಅಧ್ಯಕಗಷ ಸ್ಥಾನವನ್ನು ಮುಖ್ಯಮಂತ್ರಿ ಹಾಗೂ ಗಣಿಭಾದಿತ ಪ್ರದೇಶದ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಸಮಿತಿ ರಚಿಸಲು ಮುಂದಾಗಿ ಅಧಿಕಾರಿಗಳ ಸ್ಪಷ್ಟ ನಿರಾಕರಣೆಯ ನಂತರ ಕೈಬಿಟ್ಟಿತು ಇದು ಕೂಡಾ ಒಂದು ಸರ್ವೋಚ್ಚ ನ್ಯಾಯಾಲಯದ  ಆದೇಶವನ್ನು ಧಿಕ್ಕರಿಸುವ ಪ್ರವೃತ್ತಿಗೆ ಸಾಕ್ಷಿಯಾಗಿದೆ ಎಂದರು.
ನ್ಯಾಯಾಲಯದ ಆದೇಶವನ್ನು ಸರಿಯಾಗಿ ಅರ್ಥೈಸುವಲ್ಲಿ ಜಿಲ್ಲಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿರಬಹುದೆ ಎಂಬ ಅನುಮಾನಕ್ಕೆ ಕಾರಣವಾಗಿದೆ  2ಸಾವಿರ ಕೋಟಿ ಕುಡಿಯುವ ನೀರು ಯೋಜನೆ, 600 ಹಾಸಿಗೆ ಆಸ್ಪತ್ರೆಗೆ ಪ್ರಸ್ತಾವನೆಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿರುವುದು ಸಾಕ್ಷಿಯಾಗಿದೆ ಎಂದರು.
ಕೆಎಂಆರ್ಸಿ ಅನುಷ್ಠಾನದಲ್ಲಿ ಜಿಲ್ಲಾಧಿಕಾರಿಗಳು, ಗ್ರಾಮೀಣ ಜನರು, ಗಣಿಭಾದಿತ ಪ್ರದೇಶಗಳ ಜನತೆ ಒಳಗೊಂಡಂತೆ ಸಾರ್ವಜನಿಕವಾಗಿ ಚೆರ್ಚೆಯಾಗಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಜನಾರ್ದನ ರೆಡ್ಡಿ ವಾಪಸ್ ಬಿಜೆಪಿಗೆ ಬಂದಿರುವಿದು ಮತ್ತೊಮ್ಮೆ ಗಣಿ ಮಾಫಿಯಾ ಮರುಕಳಿಸುವ ಆತಂಕ ಸೃಷ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸುತ್ತಾ ನಮ್ಮ ಸಂಘಟನೆ ಸದಾ ಕಾವಲು ಕಾಯುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶ್ರೀಶೈಲ್ ಆಲದಹಳ್ಳಿ, ಟಿ.ಎಂ.ಶಿವಕುಮಾರ, ಸೈಯದ್ ಹೈದರ್ ಹಾಜರಿದ್ದರು.