ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಸಭೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಮೇ 24: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ  ಗುರುವಾರ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ 2024ನೇ ಸಾಲಿನ ಮುಂಗಾರು ಹಾಗೂ ಪೂರ್ವ ಮುಂಗಾರು ಮಳೆ ಅವಧಿಯ ಪೂರ್ವ ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚೆರ್ಚೆ ನಡೆಸಿದರು. .
ಜಿಲ್ಲಾಡಳಿತ ಭವನದಲ್ಲಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪೂರ್ವ ಮುಂಗಾರು ಹಂಗಾಮಿನ ವಿಸ್ತೀರ್ಣ ಗುರಿ ಹಾಗೂ ಬಿತ್ತನೆ, ಬಿತ್ತನೆ ಬೀಜ ಬೇಡಿಕೆ ಮತ್ತು ಲಭ್ಯತೆ, ರಸಗೊಬ್ಬರದ ಬೇಡಿಕೆ ಹಾಗೂ ಮೇವು ಬ್ಯಾಂಕ್ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಪರಿಸ್ಥಿತಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.
ವಿಜಯನಗರ ಜಿಲ್ಲೆಯಲ್ಲಿ ಮೇ 1ರಿಂದ ಮೇ 22ರವರೆಗೆ ವಿವಿಧ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದಿದೆ. ಹೊಸಪೇಟೆ ತಾಲೂಕಿನಲ್ಲಿ ವಾಡಿಕೆ ಮಳೆ 31.5 ಮಿಮಿ ಇದ್ದು ವಾಸ್ತವಿಕವಾಗಿ 93.8 ಮಿಮಿ ಸುರಿದಿದೆ. ಹಡಗಲಿ ತಾಲೂಕಿನಲ್ಲಿ ವಾಡಿಕೆ ಮಳೆ 40.4 ಮಿಮಿ ಇದ್ದು ವಾಸ್ತವಿಕವಾಗಿ 32.2 ಮಿಮಿ ಸುರಿದಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ವಾಡಿಕೆ ಮಳೆ 35.6 ಮಿಮಿ ಇದ್ದು ವಾಸ್ತವಿಕವಾಗಿ 75.2 ಮಿಮಿ ಸುರಿದಿದೆ. ಹರಪನಹಳ್ಳಿ ತಾಲೂಕಿನಲ್ಲಿ ವಾಡಿಕೆ ಮಳೆ 59.2 ಮಿಮಿ ಇದ್ದು ವಾಸ್ತವಿಕವಾಗಿ 65.3 ಮಿಮಿ ಸುರಿದಿದೆ. ಕೊಟ್ಟೂರ ತಾಲೂಕಿನಲ್ಲಿ ವಾಡಿಕೆ ಮಳೆ 31.5 ಮಿಮಿ ಇದ್ದು ವಾಸ್ತವಿಕವಾಗಿ 104.0 ಮಿಮಿ ಸುರಿದಿದೆ. ಕೂಡ್ಲಿಗಿ ತಾಲೂಕಿನಲ್ಲಿ ವಾಡಿಕೆ ಮಳೆ 23.9 ಮಿಮಿ ಇದ್ದು ವಾಸ್ತವಿಕವಾಗಿ 96.1 ಮಿಮಿ ಸುರಿದಿದೆ.
2024-25ರಲ್ಲಿ ಮುಂಗಾರು ಹಂಗಾಮಿನಲ್ಲಿ ಹೊಸಪೇಟೆ ತಾಲೂಕಿನಲ್ಲಿ ನೀರಾವರಿ 9,100 ಹಾಗೂ ಖುಷ್ಕಿ 5335., ಹಡಗಲಿ ತಾಲೂಕಿನಲ್ಲಿ ನೀರಾವರಿ 24,717 ಹಾಗೂ ಖುಷ್ಕಿ 34,243., ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನೀರಾವರಿ 12,259 ಹಾಗೂ ಖುಷ್ಕಿ 31,572., ಹರಪನಹಳ್ಳಿ ತಾಲೂಕಿನಲ್ಲಿ ನೀರಾವರಿ 6692 ಹಾಗೂ ಖುಷ್ಕಿ 80,704., ಕೊಟ್ಟೂರ ತಾಲೂಕಿನಲ್ಲಿ ನೀರಾವರಿ 3488 ಹಾಗೂ ಖುಷ್ಕಿ 28,735 ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ನೀರಾವರಿ 2929 ಹಾಗೂ ಖುಷ್ಕಿ 54,828 ಬಿತ್ತನೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಉದ್ದು, ಹೆಸರು, ಅಲಸಂದಿ, ನೆಲಗಡಲೆ, ಸೂರ್ಯಕಾಂತಿ ಮತ್ತು ಸೋಯಾಅವರೆಯ ಬಿತ್ತನೆ ಬೀಜಗಳನ್ನು ವಿತರಿಸಲು ಹಡಗಲಿ ತಾಲೂಕನಲ್ಲಿ 3585, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 3051, ಹರಪನಹಳ್ಳಿ ತಾಲೂಕಿನಲ್ಲಿ 2366, ಹೊಸಪೇಟೆ ತಾಲೂಕಿನಲ್ಲಿ 1702 ಹಾಗೂ ಕೊಟ್ಟುರ ತಾಲೂಕಿನಲ್ಲಿ 2754 ಮತ್ತು ಕೂಡ್ಲಿಗಿ ತಾಲೂಕಿನಲ್ಲಿ 5063 ಕ್ವಿಂಟಲ್ ಪ್ರಮಾಣದಷ್ಟು ತಾಲೂಕುವಾರು ಬಿತ್ತನೆ ಬೀಜಗಳ ಬೇಡಿಕೆ ಇರುತ್ತದೆ. 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಯೂರಿಯಾ 13,552.6 ಮೆ.ಟನ್, ಡಿಎಪಿ 3505.9 ಮೆ.ಟನ್, ಎಂಓಪಿ 707.7, ಎನ್‍ಪಿಕೆ 12,777.0 ಮೆ.ಟನ್, ಎಸ್‍ಎಸ್‍ಪಿ 152.8 ಮೆ.ಟನ್ ರಷ್ಟು ವಿವಿಧ ರಸಗೊಬ್ಬರ ದಾಸ್ತಾನು ಇರುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಮೇ 28 ಕೊನೆಗೊಂಡಂತೆ ಕೂಡ್ಲಿಗಿ ತಾಲೂಕಿನಲ್ಲಿ 5850 ಮೆ.ಟನ್, ಕೊಟ್ಟೂರ ತಾಲೂಕಿನಲ್ಲಿ 4816 ಮೆಟ್ರಿಕ್ ಟನ್, ಹರಪನಹಳ್ಳಿ ತಾಲೂಕಿನಲ್ಲಿ 33,009 ಮೆಟ್ರಿಕ್ ಟನ್, ಹೊಸಪೇಟೆ ತಾಲೂಕಿನಲ್ಲಿ 29,223 ಮೆಟ್ರಿಕ್ ಟನ್, ಹಡಗಲಿ ತಾಲೂಕಿನಲ್ಲಿ 1,07,612 ಮೆಟ್ರಿಕ್ ಟನ್ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 9,316 ಮೆಟ್ರಿಕ್ ಟನ್ ಸೇರಿ ಒಟ್ಟು ವಿಜಯನಗರ ಜಿಲ್ಲೆಯಲ್ಲಿ 1,89,826 ಮೆಟ್ರಿಕ್ ಟನ್ ಮೇವು ಲಭ್ಯತೆ ಇದ್ದು, ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ. ವಿಜಯನಗರ ಜಿಲ್ಲೆಗೆ ನೀಡಿದ ಒಟ್ಟು 10,844 ಮಿನಿ ಮೇವಿನ ಕಿಟ್‍ಗಳ ಪೈಕಿ ಈಗಾಗಲೇ 3458 ಮೇವಿ ಮಿನಿ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದರು. .
ಕುಡಿಯುವ ನೀರು ಸರಬರಾಜು ಸ್ಥಿತಿಗತಿ: ಕೂಡ್ಲಿಗಿ ತಾಲೂಕಿನಲ್ಲಿ 17, ಕೊಟ್ಟೂರ ತಾಲೂಕಿನಲ್ಲಿ 7, ಹರಪನಹಳ್ಳಿ ತಾಲೂಕಿನಲ್ಲಿ 29, ಹೊಸಪೇಟೆ ತಾಲೂಕಿನಲ್ಲಿ 8, ಹಡಗಲಿ ತಾಲೂಕಿನಲ್ಲಿ 12 ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 18 ಸೇರಿ ಒಟ್ಟು 91 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ ಒಟ್ಟು 196 ಹಳ್ಳಿಗಳಲ್ಲಿ ಖಾಸಗಿ ಬೋರವೆಲ್‍ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಮಳೆ ಕೊರತೆ ಮುಂದುವರೆದಲ್ಲಿ ಮುಂಬರುವ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ತೊಂದೆಯಾಗಬಹುದೆಂದು ಹೊಸಪೇಟೆ ತಾಲೂಕಿನಲ್ಲಿ 30, ಹಡಗಲಿಯಲ್ಲಿ 50, ಹಗರಿಬೊಮ್ಮನಹಳ್ಳಿಯಲ್ಲಿ 43, ಹರಪನಹಳ್ಳಿಯಲ್ಲಿ 128, ಕೊಟ್ಟೂರನಲ್ಲಿ 21 ಹಾಗು ಕೂಡ್ಲಿಗಿಯಲ್ಲಿ 61 ಗ್ರಾಮಗಳು ಸೇರಿ ಒಟ್ಟು 333 ಗ್ರಾಮಗಳಲ್ಲಿ ಮತ್ತು ಹೊಸಪೇಟೆಯ 15 ವಾರ್ಡ ಮತ್ತು ಹರಪನಹಳ್ಳಿಯ 27  ವಾರ್ಡಗಳು ಸೇರಿ ಒಟ್ಟು 46 ವಾರ್ಡಗಳನ್ನು ಗುರುತಿಸಲಾಗಿದೆ. ಕುಡಿಯುವ ನೀರು ಕೊರತೆ ಆಗಬಹುದಾದ ಗ್ರಾಮಗಳು ಮತ್ತು ವಾರ್ಡಗಳಲ್ಲಿ ಒಪ್ಪಂದಕ್ಕಾಗಿ ಹೆಚ್ಚಿನ ಇಳುವರಿ ನೀಡುವ 602 ಬೋರವೆಲ್‍ಗಳನ್ನು ಈಗಾಗಲೇ ಗುರುತಿಸಿದ್ದು, ಈ ಪೈಕಿ ಈಗಾಗಲೇ 485 ಬೋರವೆಲ್‍ಗಳೊಂದಿಗೆ ಮುಂಗಡ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಗ್ರಾಮಮಟ್ಟದ ಅಧಿಕಾರಿಗಳಿಗೆ ಸೂಚನೆ: ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ರೀತಿಯಲ್ಲಿ ಮಳೆ ಸುರಿದಿದೆ. ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮಗಳಲ್ಲಿ ಯಾವುದೇ ಕಡೆಗಳಲ್ಲಿ ನೀರು ನಿಲ್ಲದಂತೆ ತಗ್ಗು ಪ್ರದೇಶವನ್ನು ಸಮತಟ್ಟುಗೊಳಿಸಬೇಕು. ನೀರು ನಿಲ್ಲದೇ ಸರಾಗವಾಗಿ ಹರಿದುಹೋಗುವಂತೆ ಗಟಾರು ದುರಸ್ತಿಗೆ ಗಮನ ಹರಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.