ಅಕ್ಕ ಅನ್ನಪೂರ್ಣ ತಾಯಿಗೆ ಬಸವ ಬಳಗದಿಂದ ಭಾವಪೂರ್ಣ ನಮನ
ಅಫಜಲಪುರ:ಮೇ.24: ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರು ಆಗಿ, ಬಸವ ತತ್ವವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡು ಬೀದರನಲ್ಲಿ ಬಸವ ಸೇವಾ ಪ್ರತಿಷ್ಠಾಪನದ ಮೂಲಕ ಬಸವ ಜ್ಯೋತಿ ಪ್ರಜ್ವಲಿಸುವಂತೆ ಮಾಡಿದ ಪೂಜ್ಯ ಅಕ್ಕ ಅನ್ನಪೂರ್ಣ ತಾಯಿ ಅವರು ಲಿಂಗೈಕ್ಯರಾದ ಹಿನ್ನೆಲೆ ಬಸವ ಬಳಗದಿಂದ ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಬಳಗದಿಂದ ಭಾವಪೂರ್ಣ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಸಣ್ಣ ಗುಣಾರಿ, ಶ್ರೀಮಂತ ಬಿರಾದಾರ, ಸದಾಶಿವ ಮೇತ್ರಿ, ಮುರುಗೇಂದ್ರ ಮಸಳಿ, ಅಮೃತರಾವ ಪಾಟೀಲ್, ರಾಜೇಂದ್ರ ನರೋಣಿ, ಮಹೇಶ ಆಲೇಗಾಂವ, ಶಂಕ್ರೆಪ್ಪ ಮಣೂರ, ಶರಣಪ್ಪ ಮೇತ್ರಿ, ಯಶವಂತ ಬಡದಾಳ, ಗೋಪಾಲ ಮಾಂಗ, ಸಾಯಬಣ್ಣ ಜಮಾದಾರ ಅನೇಕರಿದ್ದರು.