ಜಿಲ್ಲೆಗೆ ಮೂರನೇ ಸ್ಥಾನ : ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ  ಸನ್ಮಾನ
ಗಂಗಾವತಿ :- ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಕ್ಷರ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಸುಪ್ರಜಾ ಕಾರಂತ್ ಇವರು 2023-24 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಗೆ ಮೂರನೇ  ಸ್ಥಾನವನ್ನು (625/612 ಅಂಕ- 97.92%)ಪಡೆದು ಅಪಾರ ಕೀರ್ತಿಯನ್ನು ಶಾಲೆಗೆ ಹಾಗೂ ತಾಲ್ಲೂಕಿಗೆ ತಂದಿರುವ ಇವರಿಗೆ ತಾಲೂಕ ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನವನ್ನು ನೆರವೇರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ವೆಂಕಟೇಶ ರಾಮಚಂದ್ರಪ್ಪ ಮಾತನಾಡಿ   ಅಕ್ಷರ ಪಬ್ಲಿಕ್ ಶಾಲೆ ಅಕ್ಷರ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ, ಉತ್ತಮ ಫಲಿತಾಂಶ ಬರಲು  ಶಿಕ್ಷಣ ಬೋಧನೆ ಮಾಡಿದ ಶಿಕ್ಷಕ ವೃಂದಕ್ಕೆ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.
ಎಲ್ಲಾ ಶಿಕ್ಷಕರ ಪರವಾಗಿ ಶಾಲೆಯ ಅಧ್ಯಕ್ಷರಾದ ರವಿ ಚೈತನ್ಯ ರೆಡ್ಡಿ  ಹಾಗೂ ಮುಖ್ಯ ಉಪಾಧ್ಯಾಯರು ಹಿಮಾರೆಡ್ಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀಟಿ.ಸಿ.ರಾಘವೇಂದ್ರ ಶಿಕ್ಷಣ ಸಂಯೋಜಕರು, ಗುರುರಾಜ ಕಾರಂತ್, ಸುಧಾ ಕಾರಂತ್, ತೇಜಸ್ಸು, ಸಹನಾ, ಶ್ವೇತಾ,ಮಂಜುಳಾ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು