ಬಯಲಾಟದಲ್ಲಿ ಕುಣಿದು ಜನರ ಗಮನ ಸೆಳೆದ ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,24- ಬಯಲಾಟದಲ್ಲಿ  ಕತ್ತಿ ಹಿಡಿದು,  ಸುಭದ್ರೆ ಮತ್ತು  ಪಾರ್ಥ ಪಾತ್ರಧಾರಿಗಳ ಜೊತೆಗೆ ಮಾಜಿ ಸಚಿವ ಶ್ರೀರಾಮುಲು ಹೆಜ್ಜೆ ಹಾಕಿ, ಕುಣಿದು ಸಂಭ್ರಮಿಸಿದ್ದಾರೆ.
ಲೋಕಸಭೆಯ ಚುನಾವಣೆ ಟೆನ್ಷನ್ ಬಳಿಕ ಶ್ರೀರಾಮುಲು ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ವಿವಿಧ ದೇವಾಲಯಗಳಿಗೆ ತೆರಳಿ  ದೇವರ ಮೊರೆ ಹೋಗಿದ್ದಾಯ್ತು. ಇದೀಗ ಬಯಲಾಟ ಪ್ರದರ್ಶನದಲ್ಲಿ ಭರ್ಜರಿ ಹೆಜ್ಜೆ ಹಾಕಿದ್ದಾರೆ.
ಬಳ್ಳಾರಿ ತಾಲೂಕಿನ  ಹಡ್ಲಿಗಿ ಗ್ರಾಮದಲ್ಲಿ  ನಿನ್ನೆ ರಾತ್ರಿ ನಡೆದ ಪಾರ್ಥ ವಿಜಯ ಬಯಲಾಟ ಪ್ರದರ್ಶನದಲ್ಲಿ ಪಾಲ್ಗೊಂಡ ನಂತರ ಅಭಿಮಾನಿಗಳ ಆಶಯದಂತೆ ಈ ರೀತಿ ಕುಣಿದು ಜನರನ್ನು ಸಂತೋಷ ಪಡಿಸಿದ್ದಾರೆ.