ಅಂಬೇಡ್ಕರ ಸಮುದಾಯ ಭವನ ನಿರ್ಮಾಣ ಹೋರಾಟ:ನಾಲ್ಕನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ
ವಿಜಯಪುರ,ಮೇ.24:ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕೈಗೊಂಡ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಮನಗೂಳಿ ಅಗಸಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗೆ ಅಡ್ಡಿ ಪಡಿಸುತ್ತಿರುವ ಅನ್ಯಕೋಮಿನ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಧರಣಿ ನಿರತ ಹೋರಾಟಗಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಕಾಖಂಡಕಿ, ರಾಜು ಕಾಖಂಡಕಿ, ಶಿವಾನಂದ ಚಲವಾದಿ, ಪ್ರಕಾಶ ಚಲವಾದಿ, ರಾಮು ವಾಲಿಕಾರ, ಮಲ್ಲಿಕಾರ್ಜುನ ಸಾವಳಗಿ, ಆಕಾಶ ಚಲವಾದಿ, ಶೇಖರ ಕೂಡಗಿ, ಮಂಜುನಾಥ ಕಾಖಂಡಕಿ, ಸಂಜು ಕಾಖಂಡಕಿ, ಸತೀಶ ಚಲವಾದಿ, ಚಿಕ್ಕಯ್ಯ ಚಲವಾದಿ, ಮಹೇಶ ಚಲವಾದಿ, ಉಮೇಶ ಚಲವಾದಿ, ಕುಮಾರ ಕಾಂಬಳೆ, ಮಧು ಕಾಖಂಡಕಿ, ಸವಿತಾ ಕಾಖಂಡಕಿ, ಸಂಗೀತಾ ಚಲವಾದಿ, ಗೀತಾ ಕೂಡಗಿ, ಲಲಿತಾ ವಾಲಿಕಾರ, ದುಂಡವ್ವ ಕಾಖಂಡಕಿ, ಮರಿಯಪ್ಪ ಖಜಾಪೂರ, ಚೇತನ ಜವಳಗಿ, ಸುನೀಲ ಕಾಖಂಡಕಿ, ಈಶ್ವರ ಕಾರಜೋಳ, ಭಾರತಿ ಕಾರಜೋಳ, ರಮಾ ಚಲವಾದಿ ಕೀರ್ತಿ ಕಾಖಂಡಕಿ, ಸತೀಶ ಕುಬಕಡ್ಡಿ, ಬಸವರಾಜ ಕಾಂಬಳೆ, ಮಂಜುನಾಥ ಶಿವಶರಣ, ಉಮೇಶ ಕಾಂಬಳೆ, ರಾಕೇಶ ಕಾಖಂಡಕಿ, ಪ್ರದೀಪ ಚಲವಾದಿ, ಬಸವರಾಜ ಕುಬಕಡ್ಡಿ, ರಾಜು ವಾಲಿಕಾರ, ರಾಮಣ್ಣ ಕಾಖಂಡಕಿ, ರಮೇಶ ಕಾಖಂಡಕಿ, ಉಮೇಶ ಚಲವಾದಿ, ಕೃಷ್ಣಾ ಚಲವಾದಿ, ಸತೀಶ ಚಲವಾದಿ, ಪ್ರತಾಪ ಚಿಕ್ಕಲಕಿ, ಆಕಾಶ ಕಾಂಬಳೆ, ರೋಹಿತ ಮಲಕಣ್ಣವರ, ರಾಚು ಬಿರಾದಾರ, ಕುಮಾರ ಗಡಗಿ ಉಪಸ್ಥಿತರಿದ್ದರು.