ಭಕ್ತಿಭಾವದಿಂದ ಜರುಗಿದ ಶ್ರೀ ಅಂಬಾಭವಾನಿ ಜಯಂತ್ಯೋತ್ಸವ
ತಾಳಿಕೋಟೆ:ಮೇ.24: ಪಟ್ಟಣದ ರಜಪೂತ ಸಮಾಜ ಬಾಂದವರ ಕುಲದೇವತೆಯಾದ ಶ್ರೀ ಅಂಬಾಭವಾನಿ ದೇವಿಯ ಜಯಂತ್ಯೋತ್ಸವವು ಗುರುವಾರಂದು ವಿಜೃಂಭಣೆಯಿಂದ ಜರುಗಿತು.
ಅಂದು ಮುಂಜಾನೆ ರಜಪೂತಗಲ್ಲಿಯ ಶ್ರೀ ಅಂಬಾಭವಾನಿ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮವನ್ನು ಅರ್ಚಕರಾದ ಭೀಮಾಶಂಕರವರು ನಡೆಸಿಕೊಟ್ಟರಲ್ಲದೆ ನಂತರ ಜರುಗಿದ ಪಲ್ಲಕಿ ಉತ್ಸವ ಹಾಗೂ ಸುಮಂಗಲೆಯರಿಂದ ಜರುಗಿದ ಕುಂಭಮೇಳವು ಪಟ್ಟಣದ ಶ್ರೀ ಭಾವಸಾರ ಸಮಾಜದ ಮಂದಿರದವರೆಗೆ ಜರುಗಿ ಮರಳಿ ರಜಪೂತÀ ಗಲ್ಲಿಯ ದೇವಸ್ಥಾನಕ್ಕೆ ತಲುಪಿತು.
ನಂತರ ರಜಪೂತÀ ಸಮಾಜದ ಬಾಂಧವರಲ್ಲದೇ ಪಟ್ಟಣದ ವಿವಿಧ ಸಮಾಜ ಬಾಂಧವರು ಪಾಲ್ಗೋಂಡು ಮಹಾಪ್ರಸಾದ ಸೇವಿಸಿ ಪುನಿತರಾದರು.
ಈ ಉತ್ಸವದ ನೇತೃತ್ವವನ್ನು ಹರೀಶಸಿಂಗ್ ಮೂಲಿಮನಿ, ಗೋವಿಂದಸಿಂಗ್ ಮೂಲಿಮನಿ, ವಿಠ್ಠಲಸಿಂಗ್ ಹಜೇರಿ ( ಬೇಕಿನಾಳ), ರತನಸಿಂಗ್ ಕೋಕಟನೂರ, ವಿಜಯಸಿಂಗ್ ಹಜೇರಿ, ಸುರೇಶ ಹಜೇರಿ, ಪ್ರಕಾಶ ಹಜೇರಿ, ಗೋವಿಂದಸಿಂಗ್ ಗೌಡಗೇರಿ, ಭರತಸಿಂಗ್ ಹಜೇರಿ, ರಘುರಾಮಸಿಂಗ್ ಹಜೇರಿ, ಉಮರಸಿಂಗ್ ಹಜೇರಿ, ಗಂಗಾರಾಮ ಕೊಕಟನೂರ, ಅಲೋಕ ಗೌಡಗೇರಿ, ಸುನಿತ ವಿಜಾಪೂರ, ರಾಹುಲ್ ಮೂಲಿಮನಿ, ಕಿಶನ್‍ಸಿಂಗ್ ಹಜೇರಿ, ಸೋಹನ ಹಜೇರಿ, ರಮೇಶ ಗೌಡಗೇರಿ, ಶುಭಂ ವಿಜಾಪೂರ, ಅಮಿತಸಿಂಗ್ ಮನಗೂಳಿ, ದಶರಥಸಿಂಗ್ ಗೌಡಗೇರಿ, ಗೋವಿಂದಸಿಂಗ್.ದು.ಹಜೇರಿ, ರಾಜೇಂದ್ರಸಿಂಗ್, ರಮೇಶ ನರಗುಂದ, ಬಾಬು ಹಜೇರಿ, ಪ್ರಹ್ಲಾದ ಹಜೇರಿ, ಜೈಸಿಂಗ್ ಮೂಲಿಮನಿ, ಮೊದಲಾದವರು ವಹಿಸಿದ್ದರು.
ಹೋಮ-ಹವನ ಕಾರ್ಯಕ್ರಮದ ಹಾಗೂ ಶ್ರೀ ದೇವಿಯ ಮಹಾಪ್ರಸಾದ ವ್ಯವಸ್ಥಾಕಾರ್ಯವನ್ನು ರಘುರಾಮಸಿಂಗ್ ಹಜೇರಿ ಅವರು ಕೈಕೊಂಡು ಶ್ರೀ ದೇವಿಗೆ ಭಕ್ತಿ ಸಮರ್ಪಣೆಗೈದರು.