ಬಸವತತ್ವ ಪ್ರಚಾರಕ್ಕೆ ಅಕ್ಕ ಅನ್ನಪೂರ್ಣ ತಾಯಿ ಬದುಕು ಮುಡಿಪು
ಭಾಲ್ಕಿ:ಮೇ.24: ಗಡಿಯಲ್ಲಿ ಬಸವತತ್ವ ಪ್ರಚಾರ ಮತ್ತು ಪ್ರಸಾರಕ್ಕೆ ಅಕ್ಕ ಅನ್ನಪೂರ್ಣ ತಾಯಿ ಬದುಕು ಮುಡಿಪಾಗಿಟ್ಟಿದ್ದರು ಎಂದು ಹಿರೇಮಠ ಸಂಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಅಕ್ಕ ಅನ್ನಪೂರ್ಣ ತಾಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಕ್ಕ ಅನ್ನಪೂರ್ಣ ತಾಯಿ ಅವರು ಉತ್ತಮ ಪ್ರವಚನಕಾರರು ಬಸವತತ್ವ ನಿಷ್ಠರಾಗಿದ್ದರು. ಅವರ ಅಕಾಲಿಕ ಅಗಲಿಕೆ ಅಸಂಖ್ಯಾತ ಬಸವ ಭಕ್ತರಿಗೆ ನೋವು ತರಿಸಿದೆ. ಅಕ್ಕ ಅನ್ನಪೂರ್ಣ ತಾಯಿ ಅಗಲಿಕೆ ದುಃಖವನ್ನು ತಡೆದು ಕೊಳ್ಳುವ ಶಕ್ತಿ ವಿಶ್ವಗುರು ಬಸವಣ್ಣನವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಆಣದೂರ ಬುದ್ಧ ವಿಹಾರದ ಭಂತೇ ದೀಪಂಕರ್ ನೇತೃತ್ವ ವಹಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ವಿಶ್ವನಾಥ ಮೋರೆ, ಯುವ ಮುಖಂಡರಾದ ಜೈಪಾಲ ಬೋರಾಳೆ, ಪ್ರಶಾಂತ ಕೊಟಗೀರಾ, ಸಂತೋಷ ಹಡಪದ ಸೇರಿದಂತೆ ಹಲವರು ಇದ್ದರು.