ಹಾವೇರಿ ಬಳೀ ಭೀಕರ ಅಪಘಾತ: ಕಾರು ಪಲ್ಟಿ: ಸ್ಥಳದಲ್ಲೇ ನಾಲ್ವರ ಸಾವು
ಹಾವೇರಿ,ಮೇ.24: ತಿರುಪತಿಗೆ ಹೊರಟಿದ್ದ ಕಾರು ಏಕಾಏಕಿ ಪಲ್ಟಿಯಾದ್ದರಿಂದ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟು, ಇತರ ಆರು ಜನ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಇಂದು ನಸುಕಿನ ಜಾವ ರಾಣೇಬೆನ್ನೂರ ತಾಲೂಕಿನ ಹಲಗೇರಿ ಬೈಪಾಸ್ ಬಳಿ ನಡೆದಿದೆ.
ಮೃತರನ್ನು ಹಾವೇರಿಯ ಸುರೇಶ ವೀರಪ್ಪ ಜಾಡಿ, ಐಶ್ವರ್ಯ ವೀರಪ್ಪ ಬಾರ್ಕಿ, ಚೇತನಾ ಪ್ರಭುರಾಜ ಸಮಗಂಡಿ, ಪವಿತ್ರಾ ಪ್ರಭುರಾಜ ಸಮಗಂಡಿ, ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯೊಂಡಿರುವ ಚನ್ನವೀರಪ್ಪ ಜಾಡಿ, ಸಾವಿತ್ರಿ ಜಾಡಿ, ವಿಕಾಸ ಹೊನಪ್ಪ ಬಾರ್ಕಿ, ಹೊನ್ನಪ್ಪ ಬಾರ್ಕಿ ಅವರುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ ಅಧಿಕಾರಿಗಲೂ ಹಾಗೂ ಎಫ್ ಎಸ್.ಎಲ್. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಣೆಬೆನ್ನೂರ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಕೊಳ್ಳಲಾಗಿದೆ.