ಅಂಜಲಿ ಹತ್ಯೆ ಖಂಡಿಸಿ ಮನವಿ
ಗುಳೇದಗುಡ್ಡ,ಮೇ.24: ಇತ್ತೀಚೆಗೆ ಹುಬ್ಬಳ್ಳಿಯ ವೀರಾಪೂರ ಓಣಿಯ ಯುವತಿ ಅಂಜಲಿ ಅಂಬಿಗೇರ ಇವರನ್ನು ಅಮಾನುಷವಾಗಿ ಚಾಕುವಿನಿಂದ ಇರಿದು ಕೊಲೆಗೈದ ವಿಶ್ವ ಅಲಿಯಾಸ ಗಿರೀಶ ಸಾವಂತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೇಂದು ಆಗ್ರಹಿಸಿ ನಿಜಶರಣ ಅಂಬಿಗರ ಚೌಡಯ್ಯ ಕ್ಷಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಗುರುವಾರ ತಹಶೀಲ್ದಾರರ ಮಂಗಳಾ ಎಂ. ಅವರಿಗೆ ಮನವಿ ಸಲ್ಲಿಸಲಾಯಿತು;
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಅಂಬಿಗರ ಜಾತಿಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಯಮನಪ್ಪ ಮಡಿಕೇರಿ ಮಾತನಾಡಿ, ಅಂಜಲಿ ಅಂಬಿಗೇರ ಅವರನ್ನು ಅಮಾನುಷವಾಗಿ ಕೊಲೆಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು, ಕೊಲೆಗೀಡಾದ ಯುವತಿಯ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ಧನ ಸರಕಾರ ನೀಡಬೇಕು. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು ಅಂಜಲಿ ಅಂಬಿಗೇರ ಅವರ ಕುಟಂಬದವರು ಗಿರೀಶ ಸಾವಂತ ಮೇಲೆ ದೂರು ಕೊಡಲು ಠಾಣೆಗೆ ಹೋದಾಗ ಅಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದು, ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಈರಪ್ಪ ಕರಬಂದ, ಸಂಗಮೇಶ ಕರಬಂದ, ಎ.ವೈ. ಕರಬಂದ, ಯಲ್ಲಪ್ಪ ಅಂಬಿಗೇರ, ಎಂ.ಎಲ್. ಕರಬಂದ, ಎಸ್.ಕೆ. ಕರಬಂದ, ಸಂತೋಷ ಕರಬಂದ, ಎಂ.ಬಿ. ಕರಬಂದ, ವಿಠ್ಠಲ ಕರಬಂದ, ಎಂ.ಬಿ. ಭೋವಿ, ಶಿವಪ್ಪ ಕರಬಂದ, ಶಿವು ಚೊಳಚಗುಡ್ಡ. ಎಸ್.ಡಿ. ಅಂಬಿಗೇರ, ಹನಮಂತ ಕರಬಂದ, ಶಿವಪ್ಪ ಕೊಳಚಿ, ಎ.ಬಿ. ಅಂಬಿಗೇರ ಮತ್ತಿತರರು ಇದ್ದರು.