ಹಜ್‍ಗೆ ಪಾದಯಾತ್ರೆ
ಲಕ್ಷ್ಮೇಶ್ವರ,ಮೇ24: ಇಂದಿನ ಆಧುನಿಕ ಜಗತ್ತಿನಲ್ಲಿ ಕೆಲವೇ ಗಂಟೆಗಳಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಮಾಡುವ ಸೌಲಭ್ಯವಿದೆ ಅನೇಕರು ತೀರ್ಥ ಯಾತ್ರೆಗಳಿಗೆ ಬಸ್ಸು ವಿಮಾನ ರೈಲು ಬಳಿಸಿ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಾರೆ.
ಆದರೆ ಇಲ್ಲೊಬ್ಬ ಭಕ್ತ ಪಾದಯಾತ್ರೆಯ ಮೂಲಕ ಪುಣ್ಯಕ್ಷೇತ್ರವನ್ನು ತಲುಪುವ ಗುರಿ ಹೊಂದಿ ಹಜ್ ಯಾತ್ರೆಗೆ ಪಾದಯಾತ್ರೆಯ ಮುಖಾಂತರ ಹೊರಟಿರುವುದು ಎಲ್ಲರಲ್ಲೂ ಹರ್ಷ ಮತ್ತು ಪುಳಕವನ್ನು ಉಂಟುಮಾಡಿದೆ.
ಶಿರಹಟ್ಟಿಯ ಮೊಹಮ್ಮದ ಫಜಲ್ ಶೇಕ್ ಎಂಬ ವ್ಯಕ್ತಿ ಶಿರಹಟ್ಟಿಯಿಂದ ಸುಮಾರು 8 ಸಾವಿರ ಕಿಲೋಮೀಟರ್ ದೂರದ ಪ್ರವಾದಿ ಮೊಹಮ್ಮದ್ ಪೈಗಂಬರರ ಜನ್ಮಸ್ಥಳವಾದ ಮಕ್ಕಾ ಮತ್ತು ಮದಿನಾಕ್ಕೆ ಹೊರಟಿದ್ದಾರೆ.
ಅವರು ಲಕ್ಷ್ಮೇಶ್ವರದ ದೂದ್ ಪಿರಾಂ ದರ್ಗಾದ ದರ್ಶನ ಪಡೆದು ಪಾದಯಾತ್ರೆ ಬೆಳೆಸಿದಾಗ ಸಾವಿರಾರು ಯುವಕರು ಹರ್ಷೋದ್ಗಾರರ ಮುಖಾಂತರ ಹಜ್ ಯಾತ್ರಿಕ ಮೊಹಮ್ಮದ ಫಜಲ್ ಶೇಕ್ ಅವರನ್ನು ಬಿಳ್ಕೊಟ್ಟರು ಸುಮಾರು ಒಂದು ವರ್ಷ ಕಾಲ ಹಜ್ ಯಾತ್ರೆಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
ಅವರು ಕರ್ನಾಟಕ ಮಹಾರಾಷ್ಟ್ರ ಗುಜರಾತ ಪಂಜಾಬ್ ಮುಖಾಂತರ ಪಾಕಿಸ್ತಾನ ಪ್ರವೇಶಿಸಿ ಅಲ್ಲಿಂದ ಇರಾನ್ ಇರಾಕದ ಮೂಲಕ ಮಕ್ಕಾ ಮದೀನ ತಲುಪಲಿದ್ದಾರೆ ಎಂದು ಹೇಳಲಾಗಿದೆ.
ಲಕ್ಷ್ಮೇಶ್ವರದಲ್ಲಿ ದೂದ್ ಪಿರಾಂ ದುರ್ಗಾ ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೌಲ್ವಿಗಳಾದ ಮೊಹಮ್ಮದ್ ಆಫೀಜ್ ಸಾಧಿಕ್ ಜಮಖಂಡಿ ಅಬ್ದುಲ್ ಖಯಾಮ ಆಫೀಸ್ ಮತ್ತು ಮಹಮ್ಮದ್ ಆಫೀಜ್ ಶಕೀಲ್ ಸೇರಿದಂತೆ ದೂದ್ ಪಿರಾಂ ದರ್ಗಾ ಕಮಿಟಿ ಅಂಜುಮನ್ ಎ ಇಸ್ಲಾಂ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ಸಾವಿರಾರು ಯುವಕರು ಇದ್ದರು.