ರಾಷ್ಟ್ರೀಯ ಏಕ್ತಾ ಯುವ ಪ್ರಶಸ್ತಿಗೆ ಡಾ.ವಿ.ಪ್ರಶಾಂತ ಆಯ್ಕೆ
ವಿಜಯಪುರ.ಮೇ.೨೪- ಸರ್ವ ಸೇವಾ ಸಂಘ ಹಾಗೂ ಅಖಿಲ ಭಾರತ ಸರ್ವೋದಯ ಮಂಡಳದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಗೂ ರಾಷ್ಟ್ರೀಯ ಯುವ ಕೋಶದ ಜಂಟಿ ಸಂಯೋಜಕರಾದ ಪಟ್ಟಣದ ಡಾ .ವಿ. ಪ್ರಶಾಂತ ಇವರಿಗೆ ಒರಿಸ್ಸಾ ರಾಜ್ಯದ ಏಕ್ತಾ ಪರಿಷತ್ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ಏಕ್ತಾ ರಾಷ್ಟ್ರೀಯ ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ನಿರ್ದೇಶಕ ಡಾ.ಸಂಗ್ರಾಮ್ ಕೇಶರಿ ಸಾಮಂತರಾಯ ಪ್ರಕಟಣೆಯಲ್ಲಿ ತಿಳಿಸಿದರು.
ಡಾ.ವಿ.ಪ್ರಶಾಂತ ಇವರು ಕಳೆದ ೨೦ ವರ್ಷಗಳಿಂದ ಸ್ಪಂದನ ಯುವಜನ ಸೇವಾ ಸಂಘದ ಕಾರ್ಯದರ್ಶಿ ಯಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾಗಿ, ನೆಹರು ಯುವ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಸಲಹಾ ಸಮಿತಿ ಯ ಪೂರ್ವ ಸದಸ್ಯರಾಗಿ, ಎನ್.ಎಸ್.ಎಸ್ ರಾಜ್ಯ ಕೋಶದ ಸಲಹಾ ಮಂಡಳಿಯ ಪೂರ್ವ ಸದಸ್ಯರಾಗಿ ಹಾಗೂ ಸರ್ವಿಸ್ ಸಿವಿಲ್ ಇಂಡಿಯಾ ಇಂಟರ್ನ್ಯಾಷನಲ್ ಕರ್ನಾಟಕ ಗ್ರೂಪ್ ನ ರಾಜ್ಯ ಪೂರ್ವ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ಪ್ರಸ್ತುತ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ರಾಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವರು.
ಇವರಿಗೆ ಬೆಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಉತ್ತಮ ವಿಶ್ವವಿದ್ಯಾನಿಲಯ ಮಟ್ಟದ ಎನ್.ಎಸ್.ಎಸ್ ಸ್ವಯಂ ಸೇವಕ ಪ್ರಶಸ್ತಿ, ನೆಹರು ಯುವ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರಿಂದ ಜಿಲ್ಲಾ ಯುವ ಪ್ರಶಸ್ತಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಇವರಿಂದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ , ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರಿಂದ ಕರೋನ ವಾರಿಯರ್ ಪ್ರಶಸ್ತಿ ಹಾಗೂ ರಾಷ್ಟ್ರೀಯ ಯುವ ಯೋಜನೆ ಗಾಂಧಿ ಶಾಂತಿ ಪ್ರತಿಷ್ಠಾನ ನವದೆಹಲಿ ಇವರಿಂದ ರಾಷ್ಟ್ರೀಯ ಯುವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಹಾಗೂ ಪದ್ಮಭೂಷಣ ದಿ.ಡಾ.ಎಚ್. ನರಸಿಂಹಯ್ಯ, ದೇಶದ ಹಿರಿಯ ಗಾಂಧಿವಾದಿ ಡಾ.ಎಸ್.ಎನ್. ಸುಬ್ಬರಾವ್, ಅಣ್ಣಾ ಹಜಾರೆ, ಕರ್ನಾಟಕದ ಗಾಂಧೀ ಡಾ.ಎಚ್. ಶ್ರೀನಿವಾಸಯ್ಯ, ಡಾ.ಎಚ್.ಎಸ್ ದೊರೆಸ್ವಾಮಿ, ಸರ್ವಿಸ್ ವಿಲ್ ಇಂಡಿಯಾ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್ ಗಣೇಶ್ ಮೊದಲಾದವರ ಮಾರ್ಗದರ್ಶನದಡಿ ಇವರು ತಮ್ಮ ವಿದ್ಯಾರ್ಥಿ ದಿನಗಳಲ್ಲೇ ಇವರ ಸಂಪರ್ಕ ಪಡೆದು ದೇಶ ಮತ್ತು ವಿದೇಶಗಳಲ್ಲಿ ನಡೆದ ರಾಷ್ಟ್ರೀಯ ಯುವ ಶಿಬಿರಗಳಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಕರ್ನಾಟಕ ರಾಜ್ಯ ಸರ್ವೋದಯ ಮಂಡಳಿ ಯಲ್ಲಿ ಕಳೆದ ಅದಿನೈದು ವರ್ಷಗಳಿಂದ ಯುವಜನ ಸೇವಾ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದು ಸರ್ವೋದಯ ಮಂಡಳಿಯ ತತ್ವ ಸಿದ್ಧಾಂತ ಗಳಿಗನುಗುಣವಾಗಿ ಇವರಿಗೆ ಎಲ್ಲಾ ಅರ್ಹತೆಗಳು ಇರುವ ಕಾರಣ ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಬೆಂಗಳೂರಿನ ವಲ್ಲಭನಿಕೇತನದ ಕರ್ನಾಟಕ ಸರ್ವೋದಯ ಮಂಡಲದ ರಾಜ್ಯಾಧ್ಯಕ್ಷ ಡಾ. ಎಚ್.ಎಸ್. ಸುರೇಶ್ ತಿಳಿಸಿದರು.
ರಾಜ್ಯಕ್ಕೆ ದೊರೆತ ಈ ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ರಿಗೆ ಗಾಂಧಿ ಪರಿವಾರದ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ, ಮಹಾರಾಷ್ಟ್ರ ರಾಜ್ಯದ ವರ್ದಾ ಜಿಲ್ಲೆಯ ಸೇವಾ ಗ್ರಾಮದಲ್ಲಿರುವ ಅಖಿಲ ಭಾರತ ಸರ್ವೋದಯ ಮಂಡಲದ ರಾಷ್ಟ್ರೀಯ ಅಧ್ಯಕ್ಷ ಚಂದನ್ ಪಾಲ್,ಕರ್ನಾಟಕ ರಾಜ್ಯ ಸರ್ವೋದಯ ಮಂಡಲದ ಗೌರವಾಧ್ಯಕ್ಷ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ,ರಾಜ್ಯ ಸರ್ವೋದಯ ಮಂಡಲದ ಕಾರ್ಯದರ್ಶಿ ಡಾ.ಯಾ.ಚಿ. ದೊಡ್ಡಯ್ಯ, ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದ ದಕ್ಷಿಣ ರಾಜ್ಯಗಳ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಬಿಗ್ ಬಾಸ್ ಖ್ಯಾತಿಯ ವರ್ತುರ್ ಸಂತೋಷ್, ಲೇಖಕಿ ಇಂದಿರಾ ಕೃಷ್ಣಪ್ಪ, ನವದೆಹಲಿ ಯ ಎಸ್.ಸಿ.ಐ ಸಂಸ್ಥೆಯ ರಾಷ್ಟ್ರೀಯ ಖಜಾಂಚಿ ಜಿ.ಅಭಿನಾಶ್ ಗಣೇಶ್, ನವದೆಹಲಿಯ ರಾಷ್ಟ್ರೀಯ ಯುವ ಯೋಜನೆಯ ಮ್ಯಾನೇಜಿಂಗ್ ಟ್ರಸ್ಟಿ ರಂಜಿನಿ ಈ ಜೋಯಿಶ್, ಟ್ರಸ್ಟಿಗಳಾದ ಮಧ್ಯಪ್ರದೇಶದ ರಣಸೀಂಗ್ ಫಾರ್ಮ, ಕೇರಳದ ಡಾ. ಕಾರಿಯನ್ ಸುಕುಮಾರನ್ ಮತ್ತು ಒರಿಸ್ಸಾ ರಾಜ್ಯದ ಮಧುಸೂಧನ್ ದಾಸ್, ಪಟ್ಟಣದ ರೋಟರಿ ವಿಜಯಪುರದ ಅಧ್ಯಕ್ಷೆ ಎ.ಎಂ. ಮಂಜುಳಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೋದಯ ಮಂಡಳಿಯ ಕಾರ್ಯದರ್ಶಿ, ವಿ.ಎನ್. ಸೂರ್ಯ ಪ್ರಕಾಶ್ ಮೊದಲಾದವರು ಶುಭ ಕೋರಿದರು.