2568 ನೇ ಪವಿತ್ರ ಬುದ್ಧಪೂರ್ಣಿಮೆ ಆಚರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.24: ಭಗವಾನ್ ಬುದ್ದನ ಜನನದ ಈ ದಿನವನ್ನು ಹಿಂದೂ ಧರ್ಮದ ಎಲ್ಲರೂ ಆಚರಿಸುವ ಶುಭದಿನವನ್ನು ಬುದ್ದಪೂರ್ಣಿಮ ಎಂಬ ಹೆಸರಿನಿಂದ ಆಚರಿಸುತ್ತಾರೆ ಎಂದು ಉಪನ್ಯಾಸಕ ಶ್ರೀಧರ್ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಹೊರವಲಯದ ಹೌಸಿಂಗ್ ಬೋಡ್ರ್ನಲ್ಲಿ ಯೋಗಗುರು ಅಲ್ಲಮಪ್ರಭುರವರ ನೇತೃತ್ವದಲ್ಲಿ 2568ನೇ ಪವಿತ್ರ ವೈಶಾಖ ಶುದ್ಧ ಬುದ್ಧ ಪೂರ್ಣಿಮೆ ಆಚರಿಸಿ ಮಾತನಾಡಿದರು.
ತನ್ನ 29ನೇ ವಯಸ್ಸಿನಲ್ಲಿ ಮೋಕ್ಷ ಸಾಧನೆಗೆ ತನ್ನನ್ನು ತಾನು ಅರ್ಪಿಸಿಕೊಂಡ ಆದರ್ಶ ವ್ಯಕ್ತಿ. ಸರಿಯಾದ ತಿಳುವಳಿಕೆ, ಮೌಲ್ಯ, ಏಕಾಗ್ರತೆ, ಕ್ರಿಯೆ, ಮಾತು, ಮನಸ್ಸು ಮುಂತಾದುವುಗಳನ್ನು ತಿಳಿಸಿಕೊಟ್ಟ ಮಹಾನ್ ವ್ಯಕ್ತಿ. ಬುದ್ಧ ನೀಡಿದ ನಾಲ್ಕು ಆರ್ಯ ಸತ್ಯಗಳು ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿದಿವೆ. ಈ ದಿನ ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಯೋಗ ಬಂಧುಗಳೊಂದಿಗೆ ಬೌದ್ಧ ಧರ್ಮದ ಪ್ರಾರ್ಥನೆಯೊಂದಿಗೆ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಯೋಗ ಗುರು ಅಲ್ಲಮಪ್ರಭು ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಎಂದೆಂದಿಗೂ ಪ್ರಸ್ತುತರು, ಅವರ ಸನ್ನಡತೆ ಸದ್ಭಾವನೆ ಸಮಾನತೆ ಇಂದಿಗೂ ಮುಂದೆಯೂ ಪ್ರಸ್ತುತ. ಅವರ ಮಾರ್ಗದರ್ಶನದಲ್ಲಿ ಜಗತ್ತು ನಡೆದರೆ ಶಾಂತಿ ಸಾಮರಸ್ಯ ಸಾಧ್ಯ ಎಂದರು. ಈ ದಿನ ಬೌದ್ಧ ಧರ್ಮದ ಪ್ರಕಾರವೇ ಪ್ರಾರ್ಥನೆ ಧ್ಯಾನ ಯೋಗ ಮಾಡಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕ ತಿಲಕ್‍ರಾಮ್, ಅಗ್ನಿಶಾಮಕ ಠಾಣಾಧಿಕಾರಿ ಶಿವಣ್ಣ, ವೈದ್ಯ ಶಿವಕುಮಾರ್, ಮೆಳ್ಳಳ್ಳಿ ರವಿಕುಮಾರ್, ಪೆÇೀಸ್ಟ್ ಕೃಷ್ಣೇಗೌಡ, ಆನಂದ, ಸೇರಿದಂತೆ ಹಲವು ಯೋಗಪಟುಗಳು ಹಾಜರಿದ್ದರು.