ಇಗ್ಗಲೂರು ನ್ಯಾಷನಲ್ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ
ಆನೇಕಲ್. ಮೇ. ೨೪- ೨೦೨೩-೨೪ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ ಎಸ್.ಎಸ್.ಎಲ್.ಸಿ (ಐಸಿಎಸ್‌ಇ) ಪರೀಕ್ಷೆಯಲ್ಲಿ ಇಗ್ಗಲೂರು ನ್ಯಾಷನಲ್‌ಪಬ್ಲಿಕ್ ಶಾಲೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
ರಾಜೀವ್ ಲೋಚನ್ ರೆಡ್ಡಿ ಎಂಬ ವಿದ್ಯಾರ್ಥಿಯು ೯೮.೪% ಅಂಕವನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ ಹಾಗೆಯೇ ಯಶಸ್ವಿ ಕೆ.ರೆಡ್ಡಿ ವಿದ್ಯಾರ್ಥಿನಿಯು ೯೭.೮%, ಎಮ್.ತೋಷಿತ ವಿದ್ಯಾರ್ಥಿಯು ೯೬.೪%, ಸ್ವಸ್ತಿಕ್ ಎಮ್. ಭಟ್ ವಿದ್ಯಾರ್ಥಿಯು ೯೬.೪%, ವಿಶೇಷವಾಗಿ ೬೧ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ (ಐಸಿಎಸ್ ಇ) ಪರೀಕ್ಷೆಯನ್ನು ಬರೆದಿದ್ದು ಅದರಲ್ಲಿ ೩೫ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಅಂಕ ಪಡೆದರೆ, ೨೬ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ನೂರಕ್ಕೆ ನೂರರಷ್ಠು ಫಲಿತಾಂಶ ಬಂದಿದೆ ಎಂದರೆ ತಪ್ಪಾಗಲಾರದು.
ಇದೇ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಹಾಗೂ ಹೆಚ್ಚು ಫಲಿತಾಂಶ
ಬರಲು ಕಾರಣ ಕರ್ತರಾದ ಶಾಲಾಶಿಕ್ಷಕರನ್ನು ನ್ಯಾಷನಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪಳ್ಳಪ್ಪಯಾದವ್ ರವರು ಮತ್ತು ಪ್ರಾಂಶುಪಾಲರಾದ ವೀಣಾ ಮೌಂಟಿ ಡಿಸೋಜರವರು ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಪಿ.ರಾಮರೆಡ್ಡಿ ಮತ್ತು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಬಾಗವಹಿಸಿದ್ದರು.