ಅರಳೇಪೇಟೆಯಲ್ಲಿ ಒಂದವಾರದಿಂದ ನೀರು ಪೂರೈಕೆಯಿಲ್ಲ
ಕೋಲಾರ.ಮೇ,೨೪- ನಗರ ಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದೆ ನಗರಸಭೆಯ ಆಡಳಿತವನ್ನು ಹೇಳುವವರೂ ಕೇಳುವವರೂ ಇಲ್ಲದಂತಾಗಿದೆ. ಸಾರ್ವಜನಿಕರಿಗೆ ನೀಡ ಬೇಕಾದ ಕನಿಷ್ಠ ಸೌಲಭ್ಯಗಳನ್ನು ನೀಡುವಲ್ಲಿಯೂ ವಿಫಲವಾಗಿದೆ.
ನಗರಸಭೆ ಆಡಳಿತದ ಬಗ್ಗೆ ಸಾರ್ವಜನಿಕರು ಛೇ ಮಾರೇ ಹಾಕುತ್ತಿದ್ದರೂ ಕನಿಷ್ಠ ಲಜ್ಜೆಯೂ ಇಲ್ಲದಂತ ಕೆಲವು ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಮರೆತು ಕಮೀಷನ್ ವ್ಯಾಪಾರಿಕರಣದಲ್ಲಿ ತೊಡಗಿಸಿ ಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ನಗರದ ೧೧ ವಾರ್ಡಿನಲ್ಲಿ ಅರಳೇ ಪೇಟೆಯಲ್ಲಿ ವಾರಕ್ಕೊಮ್ಮೆಯೋ ಸಹ ನೀರು ಸರಬರಾಜುವಲ್ಲಿ ಈ ಭಾಗದ ಮಹಿಳಾ ಸದಸ್ಯರು ವಿಫಲರಾಗಿದ್ದಾರೆ. ನಗರಸಭೆಯ ಮಹಿಳಾ ಸದಸ್ಯರ ಮುಖ ದರ್ಶನ ಚುನಾವಣೆ ಸಂದರ್ಭದಲ್ಲಿ ಹೊರತು ಪಡೆಸಿ ಈವರೆಗೆ ನೋಡಿದವರಿಲ್ಲ. ರಸ್ತೆಯ ದೀಪಗಳನ್ನು ಹೊರತು ಪಡೆಸಿ ಸಮರ್ಪಕವಾಗಿ ನೀರು ಪೂರೈಕೆ ಇಲ್ಲ. ರಸ್ತೆ ಇಲ್ಲ, ಚರಂಡಿಗಳ ಸ್ವಚ್ಛತೆ ಇಲ್ಲದೆ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಿಳಾ ಸದಸ್ಯರುಗಳ ಅಧಿಕಾರವನ್ನು ಪತಿಗೆ ಧಾರೆ ಎರೆದಿದ್ದಾರೆ. ಅದರೆ ಪತಿಮಹಾರಾಯ ನಗರಸಭೆಯ ಸದಸ್ಯರ ಕರ್ತವ್ಯಗಳನ್ನು ಮರೆತು ತಮ್ಮ ವಾರ್ಡಿನಲ್ಲಿ ನಡೆಯುವಂತ ಕಾಮಗಾರಿಗಳಲ್ಲಿ ಕಮೀಷನ್, ನಗರಸಭೆಯಲ್ಲಿನ ಕೆಲಸ ಕಾರ್ಯಗಳಿಗೆ ಬ್ರೋಕರ್‌ಗಳ ಕೆಲಸ ನಿರ್ವಹಿಸುವುದು, ಕೆಲವು ಕಾಮಗಾರಿಗಳನ್ನು ಬೇನಾಮಿ ಹೆಸರಿನಲ್ಲಿ ಪಡೆದು ಬೇರೆಯವರಿಗೆ ಲಾಭಕ್ಕೆ ನೀಡುವುದು ಇಂಥಹ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಮಹಿಳಾ ಸದಸ್ಯರುಗಳು ಕೇವಲ ಸಭೆಗಳ ಹಾಜರಾತಿಗೆ ಮೀಸಲಾಗಿದ್ದಾರೆ ಹೊರತು ವಾರ್ಡಿನ ಸಮಸ್ಯೆಗಳ ಬಗ್ಗೆ ಈವರೆಗೆ ತಲೆ ಹಾಕಿಲ್ಲ.
ಇಂಥಹ ನಾಲಾಯಕ್ಕ್ ಸದಸ್ಯರಿಗೆ ಕೆಲವು ಪಕ್ಷಗಳ ಬೆಂಬಲ ಸೂಚಿಸುವ ಹಿನ್ನಲೆಯಲ್ಲಿ ಪಕ್ಷದ ಪ್ರತಿಷ್ಠೆಗಾಗಿ ಮುಖಂಡರು ಚುನಾವಣೆಯಲ್ಲಿ ಭಾರಿ ಪ್ರಚಾರ ಮಾಡಿ ಗೆಲ್ಲಿಸುತ್ತಾರೆ ಅದರೆ ಇಂಥವರನ್ನು ಆಯ್ಕೆ ಮಾಡಿದಕ್ಕೆ ಮತದಾರರು, ಪ್ರಚಾರ ಮಾಡಿದಕ್ಕೆ ಮುಖಂಡು ಪಶ್ಚಾತಾಪ ಪಡುವಂತಾಗಿದೆ.
ದ್ವಾವರ ಸಮುದ್ರ ಪಂಚಾಯಿತಿಯಲ್ಲಿ ಮಹಿಳಾ ಸದಸ್ಯರೊಬ್ಬರ ಅಧಿಕಾರವನ್ನು ಪತಿರಾಯ ಚಲಾಯಿಸುತ್ತಿದ್ದ ಅರೋಪದ ಹಿನ್ನಲೆಯಲ್ಲಿ ಮಹಿಳೆಯ ಸದಸ್ಯತ್ವವನ್ನು ರದ್ದು ಗೊಳಿಸಿಲು ಸರ್ಕಾರ ಸೂಚಿಸಿದೆ ಅದೇ ರೀತಿ ಸ್ಥಳೀಯ ಸಂಸ್ಥೆಗಳಲ್ಲೂ ಮಹಿಳಾ ಸದಸ್ಯೆಯ ಪತಿಗೆ ಯಾವೂದೇ ವಿಶೇಷ ಅಧಿಕಾರವಾಗಲಿ ಮಾನ್ಯತೆ ಇಲ್ಲ ಎಂಬುವುದನ್ನು ಸರ್ಕಾರವು ಅದೇಶ ಜಾರಿ ಮಾಡುವಂತೆ ಅದಾಗ ಮಾತ್ರ ಮಹಿಳೆಯರ ಮೀಸಲಾತಿ ನೀಡುವುದು ಅರ್ಥಪೂರ್ಣವಾಗಲು ಹಾಗೂ ಆಡಳಿತದಲ್ಲಿ ಸುಧಾರಣೆಗಳಾಗಲು ಸಾಧ್ಯ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.