ಕೂಡ್ಲಿಗಿ : ಶ್ರೀ ಸೊಲ್ಲಮ್ಮ ದೇವಿ ಜಾತ್ರೆ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.23 :- ಪಟ್ಟಣದ ಆರಾಧ್ಯ ದೈವಗಳಲ್ಲಿ ಶ್ರೀ ಸೊಲ್ಲಮ್ಮ ದೇವಿಯು ಒಂದಾಗಿದ್ದು ಕಳೆದ ಮೂರು ದಿನಗಳಿಂದ ದೇವಿಯ ಪೂಜಾ ಕೈಂಕಾರ್ಯಗಳ ಪುನಸ್ಕಾರದಿಂದ ನಾಳೆ  ಗುಡಿದುಂಬುವ ಮೂಲಕ ದೇವಿ ಜಾತ್ರೆ ಸಂಪನ್ನಗೊಂಡಿತು.
ಮಂಗಳವಾರದಂದು ಪಟ್ಟಣದ ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಸೊಲ್ಲಮ್ಮನ ಮರವೆಂದೆ ಹೆಸರಾಗಿರುವ ಅಲ್ಲಿಗೆ ಜಾತ್ರಾ ಸಮಯವಾದ್ದರಿಂದ ದೇವಿಗೆ ಹೊಳೆಗೆ ಹೊರಡಿಸುವ ಪೂಜಾ ಕಾರ್ಯದಿಂದ ಪ್ರಾರಂಭವಾಗಿ ಬುಧವಾರ ಮರದ ಬಳಿ ದೇವಿಯ ಪೂಜೆಗೆ ಭಕ್ತಾಧಿಗಳು ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದೂ ರಾಮನಗರ ವ್ಯಾಪ್ತಿಯ ಜನರು, ಗುಪ್ಪಾಲರು, ಮಾಳ್ಗಿ ಕುಟುಂಬ ಸೇರಿದಂತೆ ದೇವಿಯ ಪೂಜಾರಿ ಮನೆತನದ ಜುಗಲರ್ ಫ್ಯಾಮಿಲಿ ಒಟ್ಟಾಗಿ ನೂರಾರು ಭಕ್ತ ಸಮೂಹ ನಿನ್ನೆ ಮಧ್ಯಾಹ್ನ ಮಕ್ಕಳು, ಹಿರಿಯರು ಎನ್ನದೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ದೇವಿಯ ಮರದ ಹತ್ತಿರ ಹೊತ್ತ ಹರಕೆಯನ್ನು ತೀರಿಸಲು ಮುಂದಾಗಿ ಪ್ರದಕ್ಷಿಣೆ ಹಾಕಿ ದೇವಿಗೆ ಹಣ್ಣು ಮತ್ತು ಕಾಯಿ ಅರ್ಪಿಸಿದರು ಮತ್ತು ಹರಕೆ ಹೊತ್ತ ಮನೆಯಲ್ಲಿ ವಿಶೇಷ ಊಟದ ವ್ಯವಸ್ಥೆ ಮಾಡಿ ಬಂದ ಬೀಗರು ಸ್ನೇಹಿತರು ಸಂಬಂಧಿಗಳನ್ನು ಜಾತ್ರೆಯ ಊಟಕ್ಕೆ ಆಹ್ವಾನಿಸಿ ಅನ್ನದಾನ ಮಾಡಿ ಭಕ್ತಿ ಸಮರ್ಪಿಸಿದರು.
ಇಂದು ವಿಜೃಂಭಣೆ ಜಾತ್ರೆ ಕೋಲಾಟ ಹಾಗೂ ದೇವಿಜಾತ್ರೆಯ ಪಟ ಹರಾಜು ಮಾಡಲಾಗುವುದು ನಾಳೆ ಬೆಳಿಗ್ಗೆ ಶುಕ್ರವಾರ  ವಿಶೇಷ ಪೂಜೆ ನೆರವೇರಿಸುವ ಮೂಲಕ ದೇವಿಯ ಮೂರ್ತಿಯನ್ನು ತರುವ ಮೂಲಕ ಪಟ್ಟಣದಲ್ಲಿರುವ ದೇವಸ್ಥಾನದಲ್ಲಿ ಕರೆತಂದು ಗುಡಿದುಂಬಿಸಲಾಗಿ ಮೂರು ದಿನದ ಶ್ರೀ ಸೊಲ್ಲಮ್ಮದೇವಿ ಜಾತ್ರೆ ಸಂಪನ್ನವಾಯಿತು.
ನಂತರ ದೇವಸ್ಥಾನದಲ್ಲಿ ದೇವಸ್ಥಾನದ ದೈವಸ್ಥರು ಜಾತ್ರೆ ನಡೆದ ಬಗ್ಗೆ ಸಭೆ ಸೇರಿ ಖರ್ಚುವೆಚ್ಚಗಳ ಬಗ್ಗೆ ಚರ್ಚೆ ನಡೆಸಿ ದೇವಸ್ಥಾನದ ಆಯಾಗಾರರಿಗೆ ತಿಳಿಸಿ ಜಾತ್ರೆಯಲ್ಲಿ ಆಯಾಗಾರರು ಮಾಡಿದ ಕಾರ್ಯಗಳಿಗೆ ದೇವಸ್ಥಾನದ ದೈವಸ್ಥರು ಬಾಪ್ತು ನೀಡಿದರು.