ಡಿ.ಆರ್.ಕುರಂದವಾಡ ನಿಧನ
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ23: ವಿಕಾಸ ಪರಿವಾರದ ಹಿರಿಯರು, ಸಹಕಾರ ಇಲಾಖೆಯ ನಿವೃತ್ತ ಸಹಾಯಕ ನಿಬಂಧಕರು ಆಗಿದ್ದ ದತ್ತಾತ್ರೇಯ ಕುರಂದವಾಡ(78) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹೊಸಪೇಟೆ, ಕೊಪ್ಪಳ, ಗದಗ, ಕಾರವಾರಗಳಲ್ಲಿ ಸಹಕಾರ ಇಲಾಖೆಯ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದ್ದ ಇವರು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ವಸೂಲಾತಿ ಅಧಿಕಾರಿಯಾಗಿಯ ಕಾರ್ಯನಿರ್ವಹಿಸಿ ನಿವೃತ್ತರಾಗಿ ಹೊಸಪೇಟೆಯಲ್ಲಿದ್ದರು, ಪುತ್ರಿ, ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ: ಶ್ರೀಯುತ ಡಿ.ಆರ್.ಕುರಂದವಾಡ ನಿಧನಕ್ಕೆ ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಸೇರಿದಂತೆ ವಿಕಾಸ ಪರಿವಾರದ ಅನೇಕರು, ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿಗಳು ಸಂತಾಪ ಸೂಚಿಸಿದ್ದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ ಅಲ್ಲದೆ ಕುಟುಂಬಕ್ಕೆ ಇವರ ಅಗಲಿಕೆಯ ದುಖ: ಭರಿಸುವ ಶಕ್ತಿ ನೀಡುವಂತೆ ಕೋರಿದ್ದಾರೆ.