ಬಸವದಳದಲ್ಲಿಂದು ಸಂಜೆ ಬುದ್ದನ ಸಂಸ್ಮರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.23: ಇಲ್ಲಿನ ಬಸವೇಶ್ವರ ನಗರದ ಬಸವದಳದ  ಮಂಟಪದಲ್ಲಿ  ಬುದ್ದ ಪೂರ್ಣಿಮೆ ಅಂಗವಾಗಿ ಇಂದು ಭಗವಾನ್ ಬುದ್ಧದೇವ,ವಿಶ್ವಗುರು ಬಸವಣ್ಣ,ಡಾ.  ಬಿ.ಆರ್.ಅಂಬೇಡ್ಕರ್ ಅವರ ಸಂಸ್ಮರಣೆ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಮೂವರ ಭಾವಚಿತ್ರಗಳಿಗೆ ನಮನ ಸಲ್ಲಿಸಲಾಯ್ತು. ಸಂಜೆ 6 ಕ್ಕೆ
ರಾಷ್ಟ್ರೀಯ ಬಸವದಳ, ಮಾನವ ಬಂಧುತ್ವ ವೇದಿಕೆ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಕಾರ್ಯಕ್ರಮ ಆಯೋಜಿಸಿದೆ
ಕಾರ್ಯಕ್ರಮದ ಸಾನಿಧ್ಯವನ್ನು ಝಂಜರವಾಡದ ಶರಣ ಮಡಿವಾಳ ಮಾಚಿದೇವ ಯೋಗ ಮಂದಿರದ ಬಸವರಾಜೇಂದ್ರ ಶರಣರು ವಹಿಸಲಿದ್ದಾರೆ.
ಗೌತಮ ಬುದ್ಧ ವಿಶೇಷ ಉಪನ್ಯಾಸವನ್ನು ಹಂಪಿ ಕನ್ನಡ ವಿವಿಯ ಉಪನ್ಯಾಸಕ ಡಾ||ವೆಂಕಟಗಿರಿ ದಳವಾಯಿ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಮತ್ತು ಸಮಾನತೆ ವಿಷಯ ಕುರಿತು ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಇರ್ಫಾನ್ ಮುದಗಲ್
ವಿಶೇಷ ಉಪನ್ಯಾಸವನ್ನು ನೀಡುವರು.
ಗೌರವಾಧ್ಯಕ್ಷರು, ರಾಷ್ಟ್ರೀಯ ಬಸವದಳದ ಗೌರವ ಅಧ್ಯಕ್ಷ ಎಸ್.ಪನ್ಬರಾಜ್ , ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ. ಜಿ.ಪಂ ಮಾಜಿ ಸದಸ್ಯ  ಎ.ಮಾನಯ್ಯ, ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್, ಪಾಲಿಕೆ ಸದಸ್ಯ  ಪೂಜಾರಿ ಗಾದೆಪ್ಪ,  ಸಮುದಾಯದ ಮುಖಂಡ ಕೆ.ಎ.ರಾಮಲಿಂಗಪ್ಪ ಮೊದಲಾದವರು ಪಾಲ್ಗೊಳ್ಳಲಿದ್ದಾರೆ