ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ
ವಿಜಯಪುರ:ಮೇ.23: ಭಾರತೀಯ ಕಿಸಾನ ಸಂಘ ತಡವಲಗ ಗ್ರಾಮ ಘಟಕ ವತಿಯಿಂದ ಇಂಡಿ ತಾಲೂಕಿನ ಗುತ್ತಿ ಬಸವಣ್ಣ ಹಾಗೂ ನಿಡಗುಂದಿ ಶಾಖಾ ಕಾಲುವೆ ಕೊನೆಯ ಭಾಗದ ಕೆರೆ ಕಟ್ಟೆಗಳಿಗೆ ಹಾಗೂ ಕಾಲುವೆಗಳಿಗೆ ನೀರು ಬಿಡದ ಪ್ರಯುಕ್ತ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ರಸ್ತೆ ತಡೆದು ಪ್ರತಿಭಟನೆ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ ಸಂಘ ತಡವಲಗಾ ಗ್ರಾಮ ಘಟಕದ ಅಧ್ಯಕ್ಷರಾದ ಚನ್ನಪ್ಪ ಜಟ್ಟೆಪ್ಪ ಮಿರಗಿ ಮಾತನಾಡಿ, ನಾವುಗಳು ಅನೇಕ ಬಾರಿ ಲಿಖಿತವಾಗಿ ಹಾಗೂ ಮೌಖಿಕವಾಗಿ ಭೆಟ್ಟಿಯಾಗಿ ಅಹವಾಲನ್ನು ಹೇಳಿಕೊಂಡಿದ್ದೇವೆ. ತಾವುಗಳು ಕೂಡಾ ಇದ್ದಕ್ಕೆ ಸ್ಪಂದಿಸಿದ್ದು ತಾಲೂಕಿನ ಕೊನೆಯ ಭಾಗದ ಕೆರೆಗಳಿಗೆ ನೀರು ಬರದೆ ಇರುವದು (ತಡವಲಗಾ, ಅಥರ್ಗಾ ಕೊಟ್ನಾಳ, ನಿಂಬಾಳ, ಇತ್ಯಾದಿ) ಕೆರೆಗಳಿಗೆ ಹಾಗೂ ಗುತ್ತಿಬಸವಣ್ಣ ಕಾಲುವೆಯ ಕೊನೆಯ ಭಾಗದ ರೈತರಿಗೆ (ತಡವಲಗಾ, ರೂಗಿ, ಮತ್ತು ಹಂಜಿಗಿ, ಚಿಕ್ಕಬೆನೂರ ಅಂಜುಟಗಿ, ಬೊಳೆಗಾಂವ, ಗಣವಲಗಾ, ತೆನ್ನೆಳ್ಳಿ ಇತ್ಯಾದಿ) ಹಾಗೂ ಧನಕರಗಳಿಗೆ ನೀರು ಇಲ್ಲದಿರುದರಿಂದ ಈ ವ್ಯವಸ್ಥೆ ನಮಗೆ ಬಹಳ ತೊಂದರೆಯನ್ನು ಉಂಟು ಮಾಡಿದೆ ಯುದ್ಧೋಪಾದಿಯಲ್ಲಿ ಪರಿಹಾರ ಕೊಡದಿದ್ದರೆ ನಾಳೆಯಿಂದಾ ನಾವು ಅನಿರ್ದಿಷ್ಟವಾಗಿ ಸತ್ಯಾಗ್ರಹವನ್ನು ಮಾಡಲಾಗವುದು. ಆ ವೇಳೆಯಲ್ಲಿ ಏನಾದರೂ ಅನಾಹುತಗಳು ಸಂಬವಿಸಿದರೆ ಜಿಲ್ಲಾ ಆಡಳಿತ ಹೊಣೆಗಾರರಾಗಬೇಕಾಗುತ್ತದೆ ಅಂತಾ ಈ ಮೂಲಕ ಒತ್ತಾಯಿಸುತ್ತೇವೆ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಗುರುನಾಥ ಬಗಲಿ, ಚಿದಾನಂದ ಬಸಣ್ಣ ಮದರಿ, ಮಲ್ಲಿಕಾರ್ಜುನ ನೇಕಾರ, ಈರಪ್ಪ ಗೊಟ್ಯಾಳ, ರೇವಣಸಿದ್ದ, ಮಲ್ಲೇಶ ಸುದಾಮ, ಬಸಪ್ಪ ಪಂತೊಜಿ, ಬಸವರಾಜ ಹಳ್ಳಿ, ಮಲ್ಲಿಕಾರ್ಜುನ ಕಂಬಾರ, ಸಿದ್ರಾಮ ತೇಲಿ, ನಿಂಗಪ್ಪ ಸುದಾಮ, ಮಳಸಿದ್ದ ನೇಕಾರ, ಮಾಳಪ್ಪ ಪೂಜಾರಿ, ರವಿ ಬಿರಾದಾರ, ಭೀಮರಾಯ ಬಿರಾದಾರ, ಚನ್ನಪ್ಪ ಮಿರಗಿ ಮತ್ತಿತರರು ಉಪಸ್ಥಿತರಿದ್ದರು.