ಕಿಡ್ನಿಕಸಿ ಜೋಡಣೆಯಲ್ಲಿ ಯಶಸ್ವಿ ಕಂಡ ಬಿಎಲ್‍ಡಿ ಆಸ್ಪತ್ರೆ
ತಾಳಿಕೋಟೆ:ಮೇ.23: ವಿಜಯಪುರದ ಬಿಎಲ್‍ಡಿಇ(ಪಿಯು) ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ರೋಗಿಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನುರಿತ ತಜ್ಞವೈದ್ಯರಿಂದ ನೀಡಲಾಗುತ್ತಿದ್ದು ಈಗಾಗಲೇ ಈ ಕಾರ್ಯ ಪ್ರಾರಂಭವಾಗಿ 7 ತಂಗಳು ಗತಿಸಿವೆ ಎಂದು ಬಿಎಲ್‍ಡಿ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಶಾಂತೇಶ ಸಲಗೇರೆ ಅವರು ಹೇಳಿದರು.
ಬುಧವಾರರಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಇದೇ ದಿ. 24 ರಂದು ಬಿ.ಎಂ. ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಉಚಿತವಾಗಿ ನಡೆಸಿಕೊಂಡು ಬರಲಾಗುತ್ತಿರುವ ಹೃದಯ ಶಸ್ತ್ರ ಚಿಕಿತ್ಸೆ ಹಾಗೂ ಇನ್ನಿತರ ರೋಗಗಳ ಕುರಿತು ಏರ್ಪಡಿಸಲು ನಿರ್ಧರಿಸಲಾದ ಶಿಭಿರ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಈಗಾಗಲೇ ಆಸ್ಪತ್ರೆಯಲ್ಲಿ ನುರಿತು ತಜ್ಞವೈದ್ಯರಿಂದ ಸುಮಾರು ಅಸಂಖ್ಯಾತ ರೋಗಿಗಳ ಶಸ್ತ್ರ ಚಿಕಿತೆ ಮಾಡಿ ಯಶಸ್ವಿ ಕಂಡಿದ್ದಲ್ಲದೇ ವಿಸ್ಕುಲರ್ ಸರ್ಜರಿಗಳನ್ನು ಮಾಡಲಾಗಿದೆ ಎಂದರು.
ಇದು ಅಲ್ಲದೇ ಕಿಡ್ನಿ ಕಸಿಜೋಡಣೆಯ ಕಾರ್ಯ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಅನೇಕ ಜನರು ಸದುಪಯೋಗ ಪಡಿಸಿಕೊಂಡಿದ್ದಾರೆಂದು ಹೇಳಿದರು. ಕಿಡ್ನಿಕಸಿ ಜೋಡಣೆಯ ಕಾರ್ಯ ಮಾಡಲು ಈ ಆಸ್ಪತ್ರೆಯು ಸರ್ಕಾರದಿಂದ ಮಾನ್ಯತೆ ಪಡೆದುಕೊಂಡಿದೆ ಬಿಎಲ್‍ಡಿ ಆಸ್ಪತ್ರೆ ಎನ್.ಎ.ಬಿ.ಎಚ್. ಮಾನ್ಯತೆ ಪಡೆದಿದ್ದು ಇದೊಂದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಇನ್ನೋರ್ವ ಬಿಎಲ್‍ಡಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಸಹಾಯಕರಾದ ಚನ್ನಬಸವ ಕೊಟಗಿ ಅವರು ಮಾತನಾಡಿ ಇದೇ ದಿ. 24 ಶುಕ್ರವಾರರಂದು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಆವರಣದಲ್ಲಿ ಬಿಎಂ ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ಶಸ್ತ್ರ ವಿಭಾಗದ ವತಿಯಿಂದ ಮೂತ್ರ ಜನಕಾಂಗ ಶಸ್ತ್ರವಿಭಾಗ ಮತ್ತು ನರರೋಗಗಳ ವಿಭಾಗದ ನುರಿತ ತಜ್ಞವೈದ್ಯರ ತಂಡದ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈ ಕುರಿತು ಉಚಿತ ಶಿಬಿರಗಳನ್ನು ಏರ್ಪಡಿಸಿ ಯಶಸ್ವಿಯಾಗಿ ಮುನ್ನಡೆಯಲಾಗಿದೆ ವಿಶೇಷವಾಗಿ ತಾಳಿಕೋಟೆ ತಾಲೂಕಿನ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಈ ಶಿಬಿರ ಏರ್ಪಡಿಸಲು ನಿಶ್ಚಯಿಸಿರುವುದು ಬಡಜನತೆಗೆ ಅನುಕೂಲ ಕಲ್ಪಿಸಲು ಸಹಾಯ ಮಾಡಿದಂತಾಗುತ್ತದೆ ಎಂಬ ವಿಶ್ವಾಸದಿಂದ ಈ ಶಿಭಿರ ಎರ್ಪಡಿಸಲು ಕಾರಣವಾಗಿದೆ ಈ ಶಿಬಿರದಲ್ಲಿ ಯಾವದೇ ಹಣದ ಫಲಾಪೇಕ್ಷೆಯಿಲ್ಲದೇ ಸೇವಾ ಕಾರ್ಯ ನಡೆಯಲಿದ್ದು ಕಾರಣ ಶ್ರೀಮಠದ ಭಕ್ತಾದಿ ಒಳಗೊಂಡು ತಾಳಿಕೋಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಆಗಮಿಸಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದ ಅವರು ಮೊ.ನಂ. 9481087009 ಹಾಗೂ 8951178777 ಕ್ಕೆ ಕೂಡಲೇ ಸಂಪರ್ಕಿಸಬೆಕೆಂದು ಅವರು ಹೇಳಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವರಿ ಮುರುಘೇಶ ವಿರಕ್ತಮಠ, ಖ್ಯಾತ ಔಷಧ ವ್ಯಾಪಾರಿಗಳಾದ ರಮೇಶ ಸಾಲಂಕಿ ಮೊದಲಾದವರು ಉಪಸ್ತಿತರಿದ್ದರು.