ಪದವೀಧರರ ಅಭಿವೃದ್ಧಿಗೆ ಕೈ ಜೋಡಿಸಿ : ಸಿದ್ದು ಪಾಟೀಲ
ಔರಾದ್ : ಮೇ.23:ಈಶಾನ್ಯ ಪದವೀಧರರ ಮತಕ್ಷೇತ್ರದ ತಾಲೂಕು ಪ್ರಭಾರಿ ಹುಮನಾಬಾದ ಶಾಸಕ ಸಿದ್ದು ಪಾಟೀಲ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಚುನಾವಣೆ ಉದ್ದೇಶಿಸಿ ಮಾತನಾಡಿದರು.
ಈ ಚುನಾವಣೆ ಪ್ರಜ್ಞಾವಂತರ ಹಾಗೂ ಪದವೀಧರರ ಚುನಾವಣೆಯಾಗಿದ್ದು ಹೆಚ್ಚಿನ ಮತದಾನ ಮಾಡಿ ಪ್ರಚಂಡ ಬಹುಮತದಿಂದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರನ್ನು ಗೆಲ್ಲಿಸಿ ಪದವೀಧರರ ಅಭಿವೃದ್ಧಿಗೆ ಕೈಜೋಡಿಸಿ ಎಂದರು.
ಈ ಹಿಂದೆ ಮಾಡಿರುವ ಕಾಂಗ್ರೆಸ್ ಸರ್ಕಾರದ ಕೆಲಸ ಶೂನ್ಯವಾಗಿದೆ ಅವರು ಗೆದ್ದು ಮೂರು ನಾಲ್ಕು ಆಯುರ್ವೇದಿಕ್ ಕಾಲೇಜುಗಳು ಸ್ವಂತಕ್ಕೆ ಮಾಡಿಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ತಾಲೂಕಿನಲ್ಲಿ ಕಛೇರಿ ನಿರ್ಮಾಣ ಮಾಡಿ ತಾಲೂಕಿಗೆ ದತ್ತು ತೆಗೆದುಕೊಳ್ಳುವ ಭರವಸೆ ನೀಡಿದರು ಗೆದ್ದ ಮೇಲೆ ತಾಲ್ಲೂಕಿಗೆ ಬಂದಿಲ್ಲ ಕಾಂಗ್ರೆಸ್ ಕಾರ್ಯಕರ್ತರ ಮುಖನೊಡಿಲ್ಲ. ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ ಕೂಡಾ ಸ್ವಂತಕ್ಕೆ ತುಂಬಿಕೊಂಡಿದ್ದಾರೆ ಎಂದು ಆರೋಪಿಸಿದರು. ತಾಲೂಕು ಬಿಜೆಪಿಯಲ್ಲಿ ಸೃಷ್ಟಿಯಾದ ಭಿನ್ನಾಭಿಪ್ರಾಯ ತೊಲಗಿಸಿ ಪಕ್ಷದ ಹೆಸರಿನಲ್ಲಿ ಕೆಲಸ ಮಾಡಿ ವ್ಯಕ್ತಿಗಿಂತ ಪಕ್ಷ ಮುಖ್ಯವಾದದ್ದು ಎಂದು ನುಡಿದರು.
ಅದೇರೀತಿ ಔರಾದ ಮಂಡಲ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಚುನಾವಣೆ ಔರಾದ ತಾಲ್ಲೂಕು ಸಂಚಾಲಕರಾಗಿ ಪ್ರಕಾಶ ಅಲಮಾಜೆ, ಸಹ ಸಂಚಾಲಕರಾಗಿ ಶರಣಪ್ಪ ಪಂಚಾಕ್ಷರಿ ಅವರನ್ನು ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ್ ಮಾತನಾಡಿದರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಖಂಡೊಬಾ ಕಂಗಟೆ ನಿರೂಪಿಸಿದರು, ಬಂಟಿ ರಾಮಪುರೆ ಸ್ವಾಗತಿಸಿದರು, ಶಿವರಾಜ ಅಲಮಾಜೆ, ರಮೇಶ ಬಿರಾದಾರ, ಪಪಂ ಸದಸ್ಯ ಸಂಜು ವಡಿಯಾರ, ಬಸವರಾಜ ಹಳ್ಳೆ, ವೆಂಕಟರಾವ್ ಡೊಂಬಾಳೆ, ದಯಾನಂದ ಹಳಿಖೇಡೆ, ಬಾಲಾಜಿ ತೆಲಂಗ, ಬಸವರಾಜ ಪಾಟೀಲ್, ಶಿವಾಜಿರಾವ ಕಾಳೆ, ಶಿವಕುಮಾರ್ ಪಾಂಚಾಳ, ಸಂತೋಷ ಬಾರೊಳೆ, ಉದಯ ಸೋಲಾಪುರೆ ಸೇರಿದಂತೆ ಇನ್ನಿತರರಿದ್ದರು.