ಕ್ರಮ ಕೈಗೊಳ್ಳಲು ಮನವಿ
ಇದು ನಿಮ್ಮವಾಣಿ

ಮಾನ್ಯರೇ,
ಬಳ್ಳಾರಿ ಡಾ.  ‌ರಾಜಕುಮಾರ್ ರಸ್ತೆಯಲ್ಲಿ ಸಂಗಮ್ ಸರ್ಕಲ್ ಬಳಿ ರಾಘವ ಕಲಾಮಂದಿರದ ಮುಂದೆ ರಸ್ತೆ ಮಧ್ಯೆ ದಿಢೀರ್ ಬ್ರೇಕ್ ಹಾಕಿ ಬಸ್ ನಿಲ್ಲಿಸಿ ಲಗೇಜ್ ಮತ್ತು ಪ್ರಯಾಣಿಕರನ್ನು ಇಳಿಸುತ್ತಾರೆ. ಇದರಿಂದ ಅಪಘಾತ ಆಗಬಹುದು. ಮತ್ತು ಸಂಚಾರಕ್ಕೆ ತೊಂದರೆಯಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ದಯವಿಟ್ಟು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ರಸ್ತೆ ವಿಸ್ತರಣೆ ಕಾರ್ಯ ಸಹ ಇಲ್ಲಿ ಮಾತ್ರ ಅದೇಕೋ ಸ್ಥಗಿತಗೊಳಿಸಲಾಗಿದೆ. ಇದರ ಬಗ್ಗೆ ಸಂಚಾರಿ ಪೊಲೀಸ್ ಮತ್ತು ಮಹಾನಗರ ಪಾಲಿಕೆಯ  ಆಯುಕ್ತರು ಶೀಘ್ರ ಕ್ರಮ ಕೈಗೊಂಡು ಈ ಸಾರ್ವಜನಿಕ ಸಮಸ್ಯೆಯನ್ನು ಪರಿಹರಿಸಲು  ಮನವಿ
ಕೆ.ಜಗದೀಶ್, ಬಳ್ಳಾರಿ