ವೇದ, ಪುರುಷಸೂಕ್ತ ಸಮಾರೋಪ ಸಮಾರಂಭ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೩;: ಬ್ರಾಹ್ಮಣ ಸಮಾಜ ಸೇವಾ ಸಂಘದ ವಿಪ್ರವಟು ಶಿಕ್ಷಣ ಸಮಿತಿ ವತಿಯಿಂದ ಈಚೆಗೆ ಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ಹತ್ತು ದಿನಗಳ ಕಾಲ ವಟುಗಳಿಗೆ ಹಮ್ಮಿಕೊಂಡಿದ್ದ ವೇದ, ಪುರುಷಸೂಕ್ತ, ವಿಷ್ಣುಸಹಸ್ರನಾಮ, ಭಗವದ್ಗೀತೆ ಶಾಂತಿ ಮಂತ್ರಗಳು ಹಾಗೂ ಸಂಧ್ಯಾವಂದನೆ ಕ್ರಮ ಸಮಾಪನಗೊಂಡಿತು.ಶಂಕರ ನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಶಿಬಿರಾರ್ಥಿಗಳು ದಾವಣಗೆರೆರೆ, ಮುರುಡೇಶ್ವರ, ತುಮಕೂರು, ಬೇಲೂರಿನ, ಶಿವಮೊಗ್ಗ ಮೊದಲಾದ ಕಡೆಯಿಂದ ಆಗಮಿಸಿ ಅತ್ಯಂತ ಉತ್ಸಾಹದಿಂದ  ಭಾಗವಹಿಸಿದ್ದರು.ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಸಿ  ಶಶಿಕಾಂತ್ ಮಾತನಾಡಿ, ಶಾಲಾ ಪಾಠಗಳಷ್ಟೇ ಅಲ್ಲದೆ ಆಧ್ಯಾತ್ಮಿಕ ವಿದ್ಯೆಯೂ ಮುಖ್ಯ. ಸಂಸ್ಕಾರವಂತ ಮಕ್ಕಳೇ ಮುಂದೆ ಸತ್ಪ್ರಜೆಗಳಾಗುವವರು ಎಂದು ತಿಳಿಸಿದರು.ಆಚಾರ್ಯತ್ರಯರ ಅಥವಾ ಯಾವುದೇ ಗುರುಗಳ ನಿಂದನೆ ಮಾಡಬಾರದು ಎಲ್ಲಾ ಗುರುಗಳನ್ನೂ ಗೌರವದಿಂದ ಕಾಣಬೇಕು. ಒಗ್ಗಟ್ಟು ಬಹಳ ಮುಖ್ಯ ಎಂದು ತಿಳಿಸಿದರು.ಶಂಕರ ನಾರಾಯಣ ಶಾಸ್ತ್ರಿ, ಖ್ಯಾತ ವೈದ್ಯರಾದ ಡಾ.ಎಸ್.ಆರ್.ಹೆಗಡೆ, ವಿಪ್ರವಟು ಶಿಕ್ಷಣಸಮಿತಿಯ ಅಧ್ಯಕ್ಷ ವಿನಾಯಕ ಡಿ ಜೋಷಿ, ಬಿ.ಟಿ .ಅಚ್ಚುತ್, ಗಿರೀಶ್ ನಾಡಿಗ್, ಮೋತಿ ಆರ್ ಸುಬ್ರಮಣ್ಯ, ಬಾಲಕೃಷ್ಣ ವೈದ್ಯ, ಸತ್ಯನಾರಾಯಣರಾವ್, ಮೋಹನ್ ದೀಕ್ಷಿತ್, ಭಾಸ್ಕರ್ ಭಟ್, ಆನಂದಮೂರ್ತಿ, ಗೋಪಾಲರಾವ್ ಉಪಸ್ಥಿತರಿದ್ದರು. ರಾಮಚಂದ್ರರಾವ್ ಸ್ವಾಗತಿಸಿದರು, ಡಿ.ಕೆ.ಎಸ್ ಮೂರ್ತಿ ವಂದಿಸಿದರು, ಗೋಪಾಲದಾಸ್  ನಿರೂಪಿಸಿದರು.