ಅಕ್ಕ ಅನ್ನಪೂರ್ಣ ತಾಯಿ ಲಿಂಗೈಕ್ಯ
ಬೀದರ್: ಮೇ.23:ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರಾದ ಅಕ್ಕ ಅನ್ನಪೂರ್ಣ ತಾಯಿ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಕ್ಕ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೇ.22ರ ಗುರುವಾರ ನಸುಕಿನ ಜಾವ ಕೊನೆಯುಸಿರೆಳೆದರು.
ಬಸವ ಸೇವಾ ಪ್ರತಿಷ್ಠಾನ ಮತ್ತು ಲಿಂಗಾಯತ ಮಹಾ ಮಠವನ್ನು ಹುಟ್ಟು ಹಾಕಿ ಬಸವ ಪ್ರಜ್ಞೆ ಜಾಗೃತಗೊಳಿಸಿದ್ದರು.
ಬಸವ ತತ್ವ ಪ್ರಚಾರಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಅವರು ಬಸವ ಗಿರಿ ಪರಿಸರದಲ್ಲಿ ಪ್ರತಿ ವರ್ಷ ಆಚರಿಸುತ್ತಿದ್ದ ವಚನ ವಿಜಯೋತ್ಸವ ದೇಶದ ಗಮನ ಸೆಳೆದಿತ್ತು.
ವ್ಯಕ್ತಿಗೆ ಪಟ್ಟಾಭಿಷೇಕ ಸಂಪ್ರದಾಯ ಬಿಟ್ಟು ವಚನಗಳಿಗೆ ಪಟ್ಟಾಭಿಷೇಕ ಮಾಡುವ ಪದ್ಧತಿ ಅನುಸರಿಸಿದ್ದರು.